5 ಗಂಟೆ ನಂತರ ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ

ತುಮಕೂರು :

      ಸಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಜೆ 5 ಗಂಟೆ ನಂತರ ಕೋವಿಡ್ ಸೋಂಕಿತರಿಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು ಎಂದು ಸಿರಾ ವಿಧಾನಸಭಾ ಕ್ಷೇತ್ರದ ಕೋವಿಡ್ ನೋಡಲ್ ನಿಯಂತ್ರಣಾಧಿಕಾರಿ ಡಾ. ಸನತ್ ತಿಳಿಸಿದರು.

      71 ಕೋವಿಡ್ ರೋಗಿಗಳ ಮತದಾನಕ್ಕೆ ಅವಕಾಶ ನೀಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಎರಡು ಆಂಬ್ಯುಲೆನ್ಸ್‍ನಲ್ಲಿ ಕೋವಿಡ್ ರೋಗಿಗಳನ್ನು ಮತಗಟ್ಟೆಗೆ ಕರೆ ತಂದು ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

      ಕೋವಿಡ್ ಸೋಂಕಿತ ಮತದಾರರು ಮತಗಟ್ಟೆಗೆ ಬರುವ ಮುನ್ನ ಮತಗಟ್ಟೆ ಅಧಿಕಾರಿಗಳು ಪಿಪಿಇ ಕಿಟ್ ಧರಿಸಿ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಸಿದ್ದರಿದ್ದು, ಸೋಂಕಿತರ ಮತದಾನಕ್ಕೆ ಅನುವು ಮಾಡಿಕೊಟ್ಟರು ಎಂದರು.

      ಮತದಾನ ಮಾಡಿದ ಕೋವಿಡ್ ಸೋಂಕಿತರನ್ನು ಮತ್ತೆ ಆಂಬ್ಯುಲೆನ್ಸ್‍ನಲ್ಲೇ ಮನೆಗಳಿಗೆ ವಾಪಸ್ ಕರೆದೊಯ್ಯಲಾಯಿತು ಎಂದರು.
ಆರೋಗ್ಯ ದೃಷ್ಠಿಯಿಂದ ಕೆಲ ಕೋವಿಡ್ ಸೋಂಕಿತರು ಮತಗಟ್ಟೆಗಳಿಗೆ ಬರಲು ನಿರಾಕರಿಸಿದ್ದು, ಅಂತಹವರ ವಾಯ್ಸ್ ರೆಕಾರ್ಡ್ ಮಾಡಿಕೊಳ್ಳಲಾಗಿದೆ ಎಂದರು.

(Visited 4 times, 1 visits today)

Related posts