ಶಿರಾ ಉಪಚುನಾವಣೆಗೆ ಜಯಚಂದ್ರ ಹೆಸರು ಶಿಫಾರಸು : ಸುರ್ಜೇವಾಲಾ ತರಾಟೆ

ಬೆಂಗಳೂರು: 

     ಶಿರಾ ಕ್ಷೇತ್ರದ ಉಪಚುನಾವಣೆ ಬಗ್ಗೆ ಕೆಪಿಸಿಸಿ ನಿರ್ಧಾರವನ್ನು ರಾಜ್ಯ ಉಸ್ತುವಾರಿ ಕಾಂಗ್ರೆಸ್‍ನ ನಾಯಕ ರಣದೀಪ್ ಸುರ್ಜೆವಾಲ ಟೀಕಿಸಿದ್ದಲ್ಲದೇ, ರಾಜ್ಯ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಸಂಗ ನಡೆದಿದೆ.

      ಜಯಚಂದ್ರ 9 ಬಾರಿ ಚುನಾವಣೆಗೆ ನಿಂತಿದ್ದಾರೆ. ಮತ್ತೆ ಅವರ ಹೆಸರನ್ನೇ ಶಿಫಾರಸ್ಸು ಮಾಡಿದ್ದೀ ರಲ್ಲ. ನಿಮಗೆ ಸಾಮಾನ್ಯಜ್ಞಾನ ವಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ರಣದೀಪ್ ಸುರ್ಜೆವಾಲ ಶಿರಾ ಕ್ಷೇತ್ರದ ಕಾರ್ಯಕರ್ತರನ್ನು ಕಾಂಗ್ರೆಸ್‍ಗೆ ಸೇರಿಸಿಕೊಳ್ಳುವ ಕಾರ್ಯಕ್ರಮದ ಸಂದರ್ಭದಲ್ಲಿ ಹೈಕಮಾಂಡ್‍ನ ಸುರ್ಜೆವಾಲಾ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಫೋನ್ ಮಾಡಿದ್ದು, ಜಯಚಂದ್ರ ಅವರಿಗೆ ಟಿಕೆಟ್ ನೀಡಬಾರದಿತ್ತು. ರಾಜೇಶಗೌಡ ಅವರಿಗೆ ಟಿಕೆಟ್ ಕೊಡಬೇಕಿತ್ತು ಎಂದಿದ್ದಾರೆ. 1978ರಿಂದಲೂ 9 ಬಾರಿ ಜಯಚಂದ್ರ ಅವರೇ ಚುನಾವಣೆಗೆ ನಿಂತಿದ್ದಾರೆ. ನಿಮಗೆ ಕಾಮನ್ ಸೆನ್ಸ್ ಇಲ್ಲವೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

      ರಾಜೇಶ್‍ಗೌಡ ಅವರು ಕಳೆದ ಬಾರಿ ಜೆಡಿಎಸ್ ಪರ ಪ್ರಚಾರ ಮಾಡಿ ದ್ದರು. ಈಗ ಬಿಜೆಪಿ ಸೇರಿ ದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನೆಪ ಮಾತ್ರಕ್ಕೆ ಇದ್ದಾರೆಂದು ಸಮಜಾಯಿಷಿ ನೀಡಬೇಕಿತ್ತು ಎಂದು ಸಿದ್ದರಾಮಯ್ಯ ಅವರು ಡಿಕೆಶಿಗೆ ಸಲಹೆ ನೀಡಿರುವುದು ಬೆಳಕಿಗೆ ಬಂದಿದೆ. ಶಿರಾ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ಸುರ್ಜೆವಾಲಾ ಅವರು ದೂರವಾಣಿ ಕಡಿತ ಮಾಡುವ ಮುನ್ನವೂ ಸಲಹೆ ನೀಡಿರುವುದಾಗಿ ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ.

(Visited 11 times, 1 visits today)

Related posts