ಕೊರೊನಾ ಪಾಸಿಟಿವ್ : ಶಿರಾದ ಪಾರ್ಕ್ ಮೊಹಲ ಸೀಲ್!!

ಶಿರಾ:

      ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ಕಂಡು ಬಂದಿರುವುದರಿಂದ ಶಿರಾ ನಗರದ ಪಾರ್ಕ್ ಮೊಹಲಾ ನಾಲ್ಕನೇ ರಸ್ತೆಯನ್ನು ಸೀಲ್ ಡೌನ್ ಮಾಡಲು ತಾಲೂಕು ಅಡಳಿತ ನಿರ್ಧರಿಸಿದೆ.

     ಕಳೆದ ರಾತ್ರಿಯೇ ಸುಮಾರು ಪೊಲೀಸರು ಆಗಮಿಸಿ ಕೊರೊನಾ ಸೋಂಕು ಇರುವ ವ್ಯಕ್ತಿಯನ್ನು ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಸುಮಾರು 9.30ರ ಸುಮಾರಿನಲ್ಲಿ ಸದರಿ ಪ್ರದೇಶಕ್ಕೆ ತೆರಳಿದ ಅಂಬುಲೆನ್ಸ್‍ಗಳು ಸೋಂಕಿತ ವ್ಯಕ್ತಿಯನ್ನು ವಾಹನದಲ್ಲಿ ಕರೆದುಕೊಂಡು ಹೋಗಿದ್ದು ಮತ್ತು ಅವರ ಕುಟುಂಬದ ಸದಸ್ಯರನ್ನು ಹೆಂಡತಿ ಮೂರು ಜನ ಮಕ್ಕಳು ಹಾಗೂ ಆತನ ತಮ್ಮನನ್ನು ನಗರದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ.

      ಸೋಂಕಿತ ವ್ಯಕ್ತಿಯ 40 ವರ್ಷ ತನ್ನ ಹೆಂಡತಿ ಮಕ್ಕಳನ್ನು ಹಿಂದುಪುರಕ್ಕೆ ಕರೆ ತರಲು ತೆರಳಿದ ಎಂದು ಹೇಳಲಾಗುತ್ತದೆ.
ದಿನಾಂಕ 6 ರಂದು ಸ್ವಲ್ಪ ಜ್ವರ ಕೆಮ್ಮು ಬರುತ್ತದೆ ನಂತರ ಖಾಸಗಿ ವೈದ್ಯರ ಬಳಿ ಚಿಕಿತ್ಸೆಗೆ ತೆರಳಿದ ನಂತರ ಪರೀಕ್ಷೆ ಒಳಪಡಿಸಿ ಜೂನ್ 9 ರಂದು ವರದಿ ಬಂದಿದೆ ಎಂಬ ಮಾಹಿತಿ ಸದ್ಯ ಪಾರ್ಕ್ ಮೊಹಲ ನಾಲ್ಕನೇ ಕ್ರಾಸ್ ನಲ್ಲಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕುವ ಕೆಲಸ ನೆಡೆಯುತ್ತಿದೆ. ಅವರ ಜೊತೆ ಯಾರ್ಯಾರು ಸಂಪರ್ಕ ಹೊಂದಿದ್ದರು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಲಾಕ್‍ಡೌನ್ ಮುಗಿದ ನಂತರ ನಗರದ ಸೀಲ್‍ಡೌನ್‍ಗೆ ಒಳಗಾಗುತ್ತದೆ ಸದ್ಯ ಈ ಪ್ರದೇಶ ಕ್ಕೆ ಯಾರನ್ನು ಒಳಗೆ ಬಿಡುತ್ತಿಲ್ಲ ಎನ್ನಲಾಗಿದೆ. ಹೊರಗಿನವರನ್ನು ಒಳಗೆ ಹೋಗಲು ಅವಕಾಶ ನೀಡುತ್ತಿಲ್ಲ. ಪ್ರವೇಶಿಸಲು ಇರುವ ಮಾರ್ಗಗಳನ್ನು ಬಂದ್ ಮಾಡಲಾಗಿದೆ. ಈ ಹಿಂದೆ ನಗರದಲ್ಲಿ ವೃದ್ಧರೊಬ್ಬರು ಕೊರೊನಾಗೆ ಬಲಿಯಾಗಿದ್ದರು.

      ಇನ್ನೊಬ್ಬ ಯುವಕನಿಗೆ ಸೋಂಕು ಇರುವುದು ಪತ್ತೆಯಾಗಿತ್ತು. ಅವರನ್ನು ಜಿಲ್ಲಾಸ್ಪತ್ರೆಯ ಐಸೋಲೇಷನ್ ನಲ್ಲಿಟ್ಟ ಬಳಿಕ ಗುಣಮುಖನಾಗಿದ್ದರು. ಈಗ ಹಿಂದುಪುರದ ಕೊರೋನ ಶಿರಾಕ್ಕೆ ದೆಹಲಿ ಆಯಿತು ಪಾದರಾಯನಪುರ
ನಂತರ ಈಗ ಹಿಂದುಪುರ…. ಮುಂದೆ ಎಲ್ಲಿ ಎಂಬಂತಾಗಿದೆ.ನಗರಕ್ಕೆ ಹೊರ ರಾಜ್ಯದಿಂದ ಬಂದವರ ಮೇಲೆ ನಿಗಾ ಇಡಲಾಗಿತ್ತು. ಕೆಲವರನ್ನು ಹೋಂ ಕ್ವಾರಂಟೈನ್‍ನಲ್ಲಿ ಮತ್ತೆ ಕೆಲವರನ್ನು ಐಸೋಲೇಷನ್ ವಾರ್ಡ್‍ನಲ್ಲಿ ಇಡಲಾಗಿತ್ತು.

      ಲಾಕ್‍ಡೌನ್ ಮುಗಿದ ಹಂತದಲ್ಲಿ ವ್ಯಕ್ತಿಗೆ ಕೊರೊನಾ ಸೋಂಕು ಇರು ವುದು ಪತ್ತೆಯಾಗಿದ್ದು, ಸೋಂ ಕು ತಡೆಗೆ ತಾಲ್ಲೂಕು ಅಡಳಿತ
ತೀವ್ರ ನಿಗಾ ಇಟ್ಟಿದೆ.

(Visited 18 times, 1 visits today)

Related posts