ಲಸಿಕೆಹಾಕುವ ನೆಪದಲ್ಲಿ ಚಿನ್ನಾಭರಣ ದೋಚಿ ಪರಾರಿ!!

ಚಿಕ್ಕನಾಯಕನಹಳ್ಳಿ:      ಲಸಿಕೆಹಾಕುವ ನೆಪದಲ್ಲಿ ಬಂದು ಚಿನ್ನಾಭರಣ ವಂಚಿಸಿದ ಘಟನೆ ತಾಲ್ಲೂಕಿನ ಮಾದಿಹಳ್ಳಿ ಗ್ರಾಮz ತೋಟದ ಮನೆಯಲ್ಲಿ ನಡೆದಿದೆ.       ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಾದಿಹಳ್ಳಿ ಗ್ರಾಮದ ರವಿ ಎಂಬುವರಿಗೆ ಅಪರಿಚಿತರು ಕರೆಮಾಡಿ ನಿಮ್ಮ ಮನೆಗೆ ಲಸಿಕೆ ಹಾಕಲು ಬರುತ್ತಿದ್ದೇವೆ ಎಂದು ಮನವಿ ಮಾಡಿದಾಗ ರವೀಶ್ ರವರು ನಾವು ಊರಿನಲ್ಲಿ ಇಲ್ಲವೆಂದು ತಿಳಿಸಿದ್ದಾರೆ.       ಆದರೆ ಅವರು ನಿಮ್ಮ ಕುಟುಂಬದವರಿಗೆ ಲಸಿಕೆ ನೀಡುವುದಾಗಿ ತಿಳಿಸಿದ್ದಾರೆ. ನಂತರ ಇಬ್ಬರು ವ್ಯಕ್ತಿಗಳು ಅವರ ಮನೆಗೆ ಬಂದು ಮನೆಯಲ್ಲಿರುವ ಮಹಿಳೆಗೆ ಲಸಿಕೆ ಹಾಕುವುದಾಗಿ ತಿಳಿಸಿ ಲಸಿಕೆ ಹಾಕಲು ಒಡವೆ ತೆಗೆಯಬೇಕೆಂದು ತೆಗೆಸಿಕೊಂಡು ನಂತರ ಬಿಸಿನೀರು ತರಲು ಹೇಳಿದ್ದಾರೆ. ಮನೆಯಿಂದ ಬಿಸಿನೀರು ತರುವಷ್ಟರಲ್ಲಿ ವಂಚಕರು ಒಡೆವೆಯೊಂದಿಗೆ ಪರಾರಿಯಾಗಿದ್ದಾರೆ. ಸುಮಾರು 1.5ಲಕ್ಷರೂ. ಮೌಲ್ಯದ ಚಿನ್ನಾಭರಣ ವಂಚಿಸಲಾಗಿದೆ ಎಂದು ತಿಳಿದುಬಂದಿದ್ದು ಪ್ರಕರಣ ಚಿಕ್ಕನಾಯಕನಹಳ್ಳಿಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆದಿದೆ.

ಮುಂದೆ ಓದಿ...