ತುಮಕೂರು: ಕೊರೊನಾ ಹೊಸ ಪ್ರಕರಣ : ಸ್ಪಷ್ಟನೆ ನೀಡಿದ ಡಿಎಚ್‍ಓ

ತುಮಕೂರು:

      ಕೆಲವು ದಿನಗಳ ಹಿಂದೆ ಜಿಲ್ಲೆಯಾದ್ಯಂತ ಸುದ್ದಿಯಾಗಿದ್ದ ಮತ್ತಿಬ್ಬರು ಕೊರೊನಾ ರೋಗಿಗಳು ಪತ್ತೆಯಾಗಿದ್ದಾರೆ ಎಂಬ ವಿಚಾರ ಸುಳ್ಳಾಗಿದ್ದು, ಅವರೆಡು ಕೂಡ ಹಳೆಯ ಪ್ರಕರಣಗಳೇ ಎಂದಿದ್ದಾರೆ.

      ಈ ಬಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ನಾಗೇಂದ್ರಪ್ಪ ಮಾತನಾಡಿದ್ದು, `ರಾಜ್ಯ ಇಲಾಖೆ ಪ್ರಕಟಿಸಿರುವ 2 ಪ್ರಕರಣಗಳು ಹಳೆಯದಾಗಿವೆ. ಪಿ-1612, ಪಿ-1614 ಕೊರೊನಾ ಸೋಂಕಿತ ವ್ಯಕ್ತಿಗಳು ಮೇ 21ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪದ್ಧ್ದತಿಯಂತೆ ಇವರ 10ನೇ ದಿನದ ವರದಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ರಾಜ್ಯಮಟ್ಟದಲ್ಲಿ ಅನಾವಶ್ಯಕವಾಗಿ ಕಣ್ತಪ್ಪಿನಿಂದಾಗಿದ್ದು, ಈ ಸಂಬಂಧ ಯಾವುದೇ ಭಯಪಡುವ ಅಗತ್ಯವಿಲ್ಲ. ಹಳೆಯ ಪ್ರಕರಣಗಳನ್ನೇ ಹೊಸ ಪ್ರಕರಣವೆಂದು ದಾಖಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

(Visited 5 times, 1 visits today)

Related posts

Leave a Comment