ತುಮಕೂರು : ಡ್ರೋನ್ ಕ್ಯಾಮೆರಾದಿಂದ ಅನಾವಶ್ಯಕವಾಗಿ ಸಂಚರಿಸುತ್ತಿದ್ದ ವಾಹನಗಳ ಸೆರೆ!

ತುಮಕೂರು :

        ಕೋವಿಡ್ – 19 ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಇದ್ದರೂ ಅನಾವಶ್ಯಕವಾಗಿ/ಸಕಾರಣ ವಿಲ್ಲದೆ ತುಮಕೂರು ನಗರದಲ್ಲಿ ಸಂಚರಿಸುತ್ತಿದ್ದ ಸವಾರರುಗಳನ್ನ ಡ್ರೋನ್ ಕ್ಯಾಮೆರಾ ದಿಂದ ಸೆರೆಹಿಡಿದು ವಶಪಡಿಸಿಕೂಂಡರು.

      ಎಸ್ಪಿ ಡಾ.ಕೆ.ವಂಸಿ ಕೃಷ್ಣ IPS ರವರಿಂದ ಕೋವಿಡ್ 19 ರ ಮುಂಜಾಗ್ರತಾ ಕ್ರಮವಾಗಿ ನಗರ ಗಸ್ತಿನಲ್ಲಿ ಶೆಟ್ಟಿಹಳ್ಳಿ ಗೇಟ್ ಬಳಿ ಡ್ರೋನ್ ಕ್ಯಾಮರಾ ದಿಂದ ಸಂಚಾರದ ಮಾಹಿತಿ ಪಡೆದು ನಂತರ ಅಲ್ಲಿಂದ ಕಾಲ್ನಡಿಗೆಯಲ್ಲಿ ಅನಾವಶ್ಯಕ ವಾಗಿ ವಾಹನದಲ್ಲಿ ತಿರುಗಾಡುತ್ತಿದ್ದವರನ್ನು ವಿಚಾರಣೆ ಮಾಡಿ ನಂತರ ಶೆಟ್ಟಿ ಹಳ್ಳಿ ಅಂಡರ್ ಪಾಸ್ ಮೂಲಕ ರಸ್ತ ಬದಿಗಳಲ್ಲಿ ತರಕಾರಿ ಮಾರುವವರಿಗೆ ಹಾಗೂ ಕೂಂಡುಕಳ್ಳುವವರಿಗೆ ಸಮಾಜಕ ಅಂತರದ ಬಗ್ಗೆ ತಿಳುವಳಿಕೆ ನೀಡಿದರು.

        ವಾಹನಗಳ ವಿವರ :

ದ್ವಿಚಕ್ರ ವಾಹನಗಳು : 02

       ದಿನಾಂಕ 07-04-2020 ನಾಲ್ಕು ಚಕ್ರದ ವಾಹನಗಳು – 09 ತ್ರಿ ಚಕ್ರ ವಾಹನಗಳು – 17 ಹಾಗೂ ದ್ವಿಚಕ್ರ ವಾಹನಗಳು – 96 ಜಿಲ್ಲೆಯಾದ್ಯಂತ ಒಟ್ಟು 122 ವಾಹನಗಳು.

(Visited 7 times, 1 visits today)

Related posts