ತುಮಕೂರು : ವಲಸೆ ಕೂಲಿಕಾರ್ಮಿಕರನ್ನು ತವರಿಗೆ ಕಳುಹಿಸಿದ ಜಿಲ್ಲಾಡಳಿತ!

ತುಮಕೂರು:

      ರಾಜ್ಯದ ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ, ಗುಲ್ಬರ್ಗಾ ಹಾಗೂ ವಿಜಯಪುರ ಮೂಲದ ಸುಮಾರು 316 ವಲಸೆ ಕೂಲಿ/ ಕಟ್ಟಡ ಕಾರ್ಮಿಕರನ್ನು ಜಿಲ್ಲಾಡಳಿತವು ಇಂದು ಅವರ ತವರಿಗೆ ಕೆಎಸ್‍ಆರ್‍ಟಿಸಿ ಬಸ್ ಮೂಲಕ ಕಳುಹಿಸಿಕೊಟ್ಟಿದೆ.

        ಕೂಲಿಯನ್ನು ಅರಸಿ ಬೆಂಗಳೂರಿಗೆ ಬಂದಿದ್ದ ಈ ಕೂಲಿ ಕಾರ್ಮಿಕರು ಕೋವಿಡ್-19 ಲಾಕ್‍ಡೌನ್ ಹಿನ್ನೆಲೆಯಲ್ಲಿ ತಮ್ಮ ಮೂಲಸ್ಥಳಕ್ಕೆ ಕಾಲ್ನೆಡಿಗೆಯಲ್ಲೇ ಹೋಗುತ್ತಿರುವುದನ್ನು ಕಂಡ ಜಿಲ್ಲಾಡಳಿತ ಕಾರ್ಮಿಕರನ್ನೆಲ್ಲಾ ತನ್ನ ವಶಕ್ಕೆ ತೆಗೆದುಕೊಂಡು ನಗರದ ಹನುಮಂತಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ಆಶ್ರಯ ನೀಡಿ ನಿರಾಶ್ರಿತರಿಗೆ ಊಟ, ವಸತಿ ಸೌಲಭ್ಯವನ್ನು ಕಲ್ಪಿಸಿತ್ತು.

      ವಲಸೆ ಕಾರ್ಮಿಕರು ತಮ್ಮ ತವರಿಗೆ ಹಿಂದಿರುಗುವ ಮನವಿಯನ್ನು ಜಿಲ್ಲಾಡಳಿತದ ಮುಂದಿಟ್ಟಿದ್ದರಿಂದ ಇಂದು ಇವರನ್ನು ಅವರ ಊರಿಗೆ ಹೋಗಲು 15 ಬಸ್ಸುಗಳಲ್ಲಿ ಕಳುಹಿಸಿ ಕೊಡಲಾಗಿದೆ. ಈ ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿ ಯಾವುದೇ ರೀತಿಯ ರೋಗ ಲಕ್ಷಣಗಳು ಕಂಡು ಬಂದಿಲ್ಲವೆಂದು ಉಪವಿಭಾಗಾಧಿಕಾರಿ ಅಜಯ್ ತಿಳಿಸಿದ್ದಾರೆ.

      ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್, ನರಸಿಂಹರಾಜು ಮತ್ತಿತರರು ಹಾಜರಿದ್ದರು.

(Visited 44 times, 1 visits today)

Related posts

Leave a Comment