ತುಮಕೂರು : ಜಿಲ್ಲಾಸ್ಪತ್ರೆಗೆ 4 ಎಚ್‍ಎಫ್‍ಎನ್‍ಸಿ ಸಾಧನ ವಿತರಣೆ!

ತುಮಕೂರು :

      ತುಮಕೂರಿನ ಜಿಲ್ಲಾಸ್ಪತ್ರೆಯ ಕೊರೊನಾ ತೀವ್ರ ನಿಗಾ ಘಟಕಕ್ಕೆ ಬೆಂಗಳೂರಿನ ಯುನೈಟೆಡ್ ವೇ ಸಂಸ್ಥೆ ವತಿಯಿಂದ 4 ಎಚ್.ಎಫ್.ಎನ್.ಸಿ. ಯಂತ್ರಗಳನ್ನು ನೀಡಲಾಯಿತು. 

      ಬೆಂಗಳೂರಿನ ಯುನೈಟೆಡ್ ವೈ ಸಂಸ್ಥೆಯು ಜಿಲ್ಲಾಡಳಿತ ಮೂಲಕ ಜಿಲ್ಲಾಸ್ಪತ್ರೆಯ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಉಪವಿಭಾಗಾಧಿಕಾರಿ ಅಜಯ್ ಅವರಿಗೆ ನೀಡಲಾಯಿತು.

      ಜಿಲ್ಲಾಡಳಿತದ ಕಡೆಯಿಂದ ಪಡೆದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯ ಅವರು, ಈ ಸಾಧನಗಳು ಐಸಿಯುನಲ್ಲಿರುವ ಕೊರೊನಾ ರೋಗಿಗಳಿಗೆ ಉಪಯೋಗಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.

      ಈ ಸಾಧನಗಳು ಕೊರೊನಾ ರೋಗಿಗಳಿಗೆ ಆಕ್ಸಿಜನ್‍ನ್ನು ಅತಿ ಸಾಂಧ್ರತೆಯಲ್ಲಿ ವೇಗವಾಗಿ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿವೆ. 8 ಲಕ್ಷ ರೂ. ಮೌಲ್ಯದ ಸಾಧನಗಳನ್ನು ನೀಡಿದ ಯುನೈಟೆಡ್ ವೇ ಸಂಸ್ಥೆಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.

      ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ, ಡಾ. ಸನತ್, ಯುನೈಟೆಡ್ ವೇ ಸಂಸ್ಥೆಯ ಮುನೇಗೌಡ ಮತ್ತಿತರರು ಉಪಸ್ಥಿತರಿದ್ದರು.

(Visited 3 times, 1 visits today)

Related posts