ತುಮಕೂರು: ಜಿಲ್ಲೆಗೆ ನೀಡಿದ ಗೊಬ್ಬರ ಜಿಲ್ಲೆಗೆ ಮಾತ್ರ ಮೀಸಲು

ತುಮಕೂರು:

      ಜಿಲ್ಲೆಗೆ ನಿಗಧಿಪಡಿಸಿದ ರಸಗೊಬ್ಬರವನ್ನು ಜಿಲ್ಲಾ ವ್ಯಾಪ್ತಿಯ ಚಿಲ್ಲರೆ ಮಾರಾಟಗಾರರಿಗೆ ಮಾತ್ರ ನೀಡಬೇಕು. ಯಾವುದೇ ಕಾರಣಕ್ಕೂ ಹೊರ ಜಿಲ್ಲೆಗೆ ವಿತರಣೆ ಮಾಡಬಾರದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಸೂಚಿಸಿದರು.

      ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮುಂಗಾರು ಹಂಗಾಮಿನ ಕೃಷಿ ಪರಿಕರಗಳ ಪೂರ್ವ ಸಿದ್ಧತೆ ಕುರಿತು ಕೃಷಿ ಪರಿಕರಗಳ ಸರಬರಾಜುದಾರರ ಸಭೆ ನಡೆಸಿ ಮಾತನಾಡಿದರು.

      ಹಳೆಯ ರಸಗೊಬ್ಬರಗಳು (ಮಾರ್ಚ್ 21ರ ಹಿಂದಿನ ದಾಸ್ತನು) ದಾಸ್ತನು ಇದ್ದಲ್ಲಿ ಅದನ್ನು ಹಳೆಯ ದರದಲ್ಲಿ ಮಾರಾಟ ಮಾಡಬೇಕು. ಎಲ್ಲಾ ಸರಬರಾಜು ದಾರರು ಪಾಯಿಂಟ್ ಆಫ್ ಸೇಲ್ (ಪಿಓಎಸ್) ಉಪಕರಣ ಹೊಂದಿರಬೇಕು. ಪ್ರತಿ ವಹಿವಾಟನ್ನು ಪಾಯಿಂಟ್ ಆಫ್ ಸೇಲ್ (ಪಿಓಎಸ್) ಉಪಕರಣ ಮೂಲಕವೇ ನಿರ್ವಹಿಸಬೇಕು. ರೈತರಿಗೆ ಕಡ್ಡಾಯವಾಗಿ ರಶೀದಿ ನೀಡಬೇಕು. ಯಾವುದೇ ರೀತಿಯ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ರಸ ಗೊಬ್ಬರ ನಿಯಂತ್ರಣ ಕಾಯ್ದೆ 1985 ರ ಆದೇಶದ್ವನಯ ಅಗತ್ಯ ವಸ್ತುಗಳ ಕಾಯಿದೆಯಡಿ ಸೂಕ್ತ ಕ್ರಮ ಜರುಗಿಸಲಾಗುವುದೆಂದು ಎಂದು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ಆಶೋಕ್ ಪಿ.ಎನ್., ಜಿಲ್ಲೆಯ ರಸ ಗೊಬ್ಬರ ಮಾರಾಟಗಾರರು, ಬಿತ್ತನೆ ಬೀಜಗಳ ಸರಬರಾಜುದಾರರು, ಸೇರಿದಂತೆ ಕೃಷಿ ಪರಿಕರ ಉಪಕರಣ ಸರಬರಾಜುದಾರರು ಹಾಜರಿದ್ದರು.

(Visited 5 times, 1 visits today)

Related posts

Leave a Comment