ತುಮಕೂರು : ಪ್ರಾಣಿ ಮತ್ತು ಸಂಚಾರಕರಿಗೆ ಊಟದ ವ್ಯವಸ್ಥೆ

ತುಮಕೂರು:

     ಅತಿಥಿ ಗೃಹ ಬಿಟ್ಟುಕೊಡುವ ಬಗ್ಗೆ ಜಮೀರ್ ಅಹಮದ್ ಅವರು ಕುಮಾರಸ್ವಾಮಿ ಬಗ್ಗೆ ಮಾತನಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಬೇಕು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಅಂತವರ ಬಗ್ಗೆ ಸರಿಯಾಗಿ ಮಾತನಾಡಲಿ ಎಂದರು.

      ಹದಿನೈದು ವರ್ಷದಿಂದ ಮೇಖ್ರಿ ಸರ್ಕ¯ನ ಅತಿಥಿಗೃಹವನ್ನು ಕುಮಾರಸ್ವಾಮಿ ಅವರೇ ಬಳಸುತ್ತಿದ್ದರು. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಕಳೆದ ಏಳೆಂಟು ವರ್ಷಗಳಿಂದ ಕುಮಾರ ಸ್ವಾಮಿ ಅಲ್ಲಿಗೆ ಹೋಗಿಲ್ಲ, ನನ್ನ ಕೆಲಸ ಮಾಡುವ ಕೆಲ ಹುಡುಗರು ಅಲ್ಲಿದ್ದರು, ಜೊತೆಗೆ ನನ್ನ ಶೂಟಿಂಗ್ ಉಪಕರಣಗಳು ಇದ್ದವು ಎಂದರು.

      ಕಳೆದ ಎರಡು ಮೂರು ದಿನದ ಹಿಂದೆ ಮನೆ ಖಾಲಿ ಮಾಡುವಂತೆ ತಿಳಿಸಿದ್ದರು ಆzರೆ ಹುಡುಗರೆಲ್ಲ ಕೊರೋನಾ ಕಾರಣದಿಂದ ಮನೆಗೆ ಹೋಗಿದ್ದರಿಂದ ಖಾಲಿ ಮಾಡಲು ಆಗಿರಲಿಲ್ಲ, ಅವರೇ ಹೋಗಿ ಮನೆ ಕಿ ಹೊಡೆದದಿದ್ದಾರೆ, ಅದನ್ನು ನಮ್ಮ ಹುಡುಗರು ಪ್ರಶ್ನಿಸಿದ್ದಕ್ಕೆ ವಾಗ್ವಾದವಾಗಿದೆ ಅಷ್ಟೇ ಹಲ್ಲೆ ಆಗಿಲ್ಲ, ಗೊಂದಲ ಸೃಷ್ಟಿಸಲು ಈ ರೀತಿಯಾಗಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

      ಅವರ ಒಡವೆ ಅವರು ಕೇಳುತ್ತಿದ್ದಾರೆ, ಅದನ್ನುಗೌರವಯುತವಾಗಿ ನೀಡುತ್ತೇವೆ, ಅವರ ರಾಜಕೀಯ ಬೆಳವಣಿಗೆಗೆ ಕಾರಣವಾಗಿರುವ ನಮ್ಮ ಕುಟುಂಬದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು, ಜನಪ್ರತಿನಿಧಿಗಳಾದವರು ಸಮಾಜಕ್ಕೆ ಒಳ್ಳೆ ಸಂದೇಶ ನೀಡಬೇಕು, ರಾಜಕಾರಣದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ ಎಂಬ ಅಹಂನಿಂದ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದರು.

(Visited 5 times, 1 visits today)

Related posts

Leave a Comment