ಪೊಲೀಸರ ‘ಬಡವರ ಬಾಗಿಲು’ ಗೆ ಮುಖಂಡ ನರಸೇಗೌಡ ಸಹಾಯಹಸ್ತ!

ತುಮಕೂರು :


     ತುಮಕೂರಿನ ಹೆಗ್ಗೆರೆ ಬಸ್ ನಿಲ್ದಾಣದ ಬಳಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ವಿನೂತನವಾಗಿ ತೆರೆದಿರುವ ಬಡವರ ಬಾಗಿಲು ಹೊಸ ಕಾರ್ಯಕ್ರಮ ಏ.24 ರ ಶುಕ್ರವಾರ ಬೆಳಗ್ಗೆ ಆರಂಭವಾಗಿ ವಿಶೇಷ ಜನಾಕರ್ಷಣೆಯ ನೆರವಿನ ಹಸ್ತವಾಗಿ ಜನಮನ್ನಣೆ ಗಳಿಸಿತು.

ಎರಡನೆಯ ದಿನವಾದ ಇಂದು ಬಡವರ ಬಾಗಿಲು ಮಳಿಗೆಯಲ್ಲಿ ತುಮಕೂರು ನಗರದ ಜೆಡಿಎಸ್ ಮುಖಂಡ, ಗುತ್ತಿಗೆದಾರ ನರಸೇಗೌಡ ಇಂದು ಸಂಪೂರ್ಣ ಎಲ್ಲ ಪದಾರ್ಥಗಳನ್ನ ತಂದು ಅದರಲ್ಲಿ ಜೋಡಿಸಿ ನೆರವಿನ ಹಸ್ತ ಚಾಚಿದರು. ಸ್ಥಳೀಯ ಬಡವರು ಬಂದು ಅಗತ್ಯ ವಸ್ತುಗಳನ್ನು ತಮ್ಮ ಸ್ವಂತ ಮನೆಯ ಕಪಾಟಿನಂತೆ ಕೊಂಡೊಯ್ಯುತ್ತಿದ್ದುದು ವಿಶೇಷವಾಗಿತ್ತು. ಯಾರು ತಂದು ಕೈ ಎತ್ತಿ ಕೊಡುವುದಿಲ್ಲ. ಸಹಾಯ ಮಾಡಲಿಚ್ಚಿಸುವವರು ಈ ರ್ಯಾಕಿನಲ್ಲಿ ತಂದು ಜೋಡಿಸಿ ಹೋಗಿರುತ್ತಾರೆ. ಬೇಕಾದವರು ಬಂದು ಯಾವುದೇ ಆತಂಕ, ಮುಜುಗರಗಳಿಲ್ಲದೆ ಕೊಂಡೊಯ್ಯುತ್ತಿದ್ದಾರೆ.

      ಗ್ರಾಮಾಂತರ ಪೊಲೀಸ್ ಠಾಣೆಯಿಂದ ಮಾಡಿದ ಈ ವಿಶೇಷ ಕಾರ್ಯಕ್ರಮ ಜಿಲ್ಲೆಯಲ್ಲದೇ ರಾಜ್ಯದ ಹೊಸ ಮಾದರಿಯ ಕಾರ್ಯಕ್ರಮವಾಗಿರುವುದರಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಇನ್ನಷ್ಟು ಕಡೆಗಳಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳು ಆಗಲಿ ಎನ್ನುವುದು ಜನರ ಅಭಿಪ್ರಾಯ.

(Visited 289 times, 1 visits today)

Related posts

Leave a Comment