ತುಮಕೂರು : ಜಿಲ್ಲೆಯಲ್ಲಿ 208 ಕ್ಕೇರಿದ ಕೊರೊನಾ ಪಾಸಿಟೀವ್!!

ತುಮಕೂರು:

      ತುಮಕೂರು ಜಿಲ್ಲೆಯಲ್ಲಿ 3.7.2020ರ ಸಂಜೆಯ ವರದಿಯ ಪ್ರಕಾರ ಶುಕ್ರವಾರ ಒಂದೇ ದಿನ 25 ಪ್ರಕರಣಗಳು ಕೋವಿಡ್ – 19 ಸೋಂಕಿನಿಂದ ದೃಢಪಟ್ಟಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಕೋವಿಡ್-19 ಸೋಂಕು ಆರಂಭವಾದ ದಿನದಿಂದ ಇಂದಿನವರೆಗೆ 208 ಪ್ರಕರಣಗಳು ಪತ್ತೆಯಾಗಿದ್ದು, ಅವುಗಳ ಪೈಕಿ ಐಸಿಯುನಲ್ಲಿ 4 ಪ್ರಕರಣಗಳು ದಾಖಲಾಗಿದ್ದು, 141 ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿ ಚಿಕಿತ್ಸಾ ಹಂತದಲ್ಲಿವೆ.

       ಆಸ್ಪತ್ರೆಯಿಂದ 60 ಪ್ರಕರಣಗಳು ಬಿಡುಗಡೆ ಹೊಂದಿದು ಶುಕ್ರವಾರದಂದು 11 ಪ್ರಕರಣಗಳು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆ ಹೊಂದಿರುತ್ತಾರೆ. ಇದುವರೆವಿಗೂ 7 ಜನ ಕೋವಿಡ್ ಸೋಂಕಿತ ವ್ಯಕ್ತಿಗಳು ಮೃತಪಟ್ಟಿದ್ದಾರೆ. ಇದುವರೆಗೂ ಒಟ್ಟು 19540 ಕಫದ ಮಾದರಿಯನ್ನು ಪರೀಕ್ಷಿಸಿದ್ದು, 15756 ಮಾದರಿಗಳು ನೆಗಿಟೀವ್ ಬಂದಿರುತ್ತವೆ. 1395 ಜನರನ್ನು ನಿಗಾವಣೆಯಲ್ಲಿ ಇರಿಸಲಾಗಿದೆ. 208 ಪ್ರಕರಣಗಳು ಕೋವಿಡ್-19 ಸೋಂಕಿ ತರೆಂದು ವರದಿ ದೃಢಪಟ್ಟಿದೆ.

      ಶುಕ್ರವಾರ ಪಾಸಿಟೀವ್ ವರದಿ ಬಂದಿದೆ ಎಂದು ಅಧಿಕೃತವಾಗಿ ದೃಢಪಡಿಸಿರುವ ಆರೋಗ್ಯ ಇಲಾಖೆಯ ಪಟ್ಟಿಯಲ್ಲಿ

ಕೊರಟಗೆರೆ-3,

ಕುಣಿಗಲ್-2,

ಮಧುಗಿರಿ-12,

ಶಿರಾ -2,

ತುಮಕೂರು -4,

ತುರುವೇಕೆರೆ-1 

      ದಿನೇ ದಿನೇ ಕೊರೊನಾ ಪಾಸಿಟೀವ್‍ಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಜನರು ಜೀವನ ಸಾಗಿಸುವುದು ಕಷ್ಟಕರವಾಗುತ್ತಿದೆ. ತಾಲೂ ಕುವಾರು ವರದಿಗಳನ್ನ ಪ್ರಕಟ ಮಾಡುವಲ್ಲಿ ಆರೋಗ್ಯ ಇಲಾಖೆ ಬಹಳಷ್ಟು ಯಡವಟ್ಟು ಮಾಡುತ್ತಿದೆ ಎಂಬ ಅನುಮಾನ ಜಿಲ್ಲೆಯ ಜನತೆಯಲ್ಲಿ ಕಾಡುತ್ತಿದೆ ಎನ್ನಲಾಗುತ್ತಿದೆ.

(Visited 8 times, 1 visits today)

Related posts

Leave a Comment