ತುಮಕೂರು :ಆರೋಗ್ಯ ಇಲಾಖೆಯ ಸಿಬ್ಬಂದಿಗೆ ವಕ್ಕರಿಸಿದ ಕೊರೊನಾ

 ತುಮಕೂರು :

      ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರಿಗೆ ಕೊರೊನಾ ವಕ್ಕರಿಸಿದೆ.

      ಸೋಂಕಿತ ವ್ಯಕ್ತಿ ಡಿಎಚ್‍ಓ ಕಛೇರಿಯಲ್ಲಿ ತಾಂತ್ರಿಕ ಸಿಬ್ಬಂಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,  ಈತನು 2 ಖಾಸಗಿ ಲ್ಯಾಬ್‍ಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ.  ಸೋಂಕಿತನ 2 ಲ್ಯಾಬ್‍ಗಳು ಮತ್ತು ಈತನ ಮನೆಯ ಏರಿಯಾವನ್ನು ಸೀಲ್‍ಡೌನ್ ಮಾಡಲು ತಯಾರಿ ನಡೆಯುತ್ತಿದೆ.

      ಈತ ಡಿಎಚ್‍ಓ ಕಛೇರಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಸದರಿ ಕಛೇರಿಯಲ್ಲಿದ್ದ ಅಧಿಕಾರಿಗಳು ನೌಕರರು ಮತ್ತು ಸಿಬ್ಬಂಧಿಗಳಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

      ಈತನೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಪತ್ತೆಹಚ್ಚುವಿಕೆಗೆ ಡಿಎಚ್‍ಓ ಕಛೇರಿಯ ಸಿಬ್ಬಂಧಿಯೇ ದಿಗ್ಭ್ರಮೆಗೊಳಗಾಗಿದ್ದು, ಅಂತೂ ಇಂತು ಜಿಲ್ಲೆಯ ಆರೋಗ್ಯ ಇಲಾಖೆಯನ್ನೇ ಬಿಡದ ಕೊರೊನಾ ನಂಟು ಇನ್ಯಾರನ್ನ ಬಿಟ್ಟೀತು ಎಂಬುದು ಹಲವರ ಪ್ರಶ್ನೆಯಾಗಿದೆ.

 

(Visited 765 times, 1 visits today)

Related posts