ಕೋವಿಡ್ ಲಕ್ಷಣ ಕಂಡುಬಂದರೆ ಫೀವರ್ ಕ್ಲಿನಿಕ್‍ಗೆ ಬನ್ನಿ: ಎಸಿ

 ತುಮಕೂರು:

      ಕೋವಿಡ್-19(ಕೋರೋೀನಾ ವೈರಸ್) ಸಾಂಕ್ರಮಿಕ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರೋಗದ ಲಕ್ಷಣಗಳು ಕಂಡು ಬಂದ ಕೂಡಲೇ ಜ್ವರ ಕ್ಲೀನಿಕ್(ಪೀವರ್ ಕ್ಲೀನಿಕ್) ಬೇಟಿ ನೀಡಿ ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕೆಂದು ಉಪವಿಭಾಗಾಧಿಕಾರಿ ಅಜಯ್ ಅವರು ತಿಳಿಸಿದ್ದಾರೆ.

      ವಿಶ್ವದಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಜಿಲ್ಲಾಡಳಿತವು ಮುಂದಾಗಿದೆ. ಈ ರೋಗದ ಲಕ್ಷಣಗಳಾದ ಕೆಮ್ಮು, ಸೀನು, ಜ್ವರ, ತಲೆನೋವು, ವಾಂತಿ ಬೇಧಿ, ಮೈ ಕೈ ನೋವು ಹಾಗೂ ಇತರೆ ಲಕ್ಷಣಗಳು ಕಂಡು ಬಂದರೆ ತಕ್ಷಣ ಜ್ವರ ಕ್ಲೀನಿಕ್ ನಲ್ಲಿ (ಪೀವರ್ ಕ್ಲೀನಿಕ್) ಪರೀಕ್ಷೆಗೆ ಒಳಗಾಗಿ ಹಾಗೂ ರೋಗ ದೃಢಪಟ್ಟರೆ ಸೋಕಿತರು ಯಾವುದೇ ರೀತಿಯ ಭಯಬೀತರಾಗದೆ ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್(ಸಿ,ಸಿ,ಸಿ) ಅಥವಾ ಹೋಂ ಐಸೋಲೇಷನ್ ನಲ್ಲಿ ವೈದ್ಯರ ನಿರ್ದೇಶನದಂತೆ ಪೂರಕ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

      ಜಿಲ್ಲೆಯಲ್ಲಿ ಈಗಾಗಲೇ ರ್ಯಾಪಿಡ್ ಅಂಟಿಜೆನ್ ಟೆಸ್ಟ್ ಕಿಟ್‍ಗಳನ್ನು ಸರಬರಾಜು ಮಾಡಲಾಗಿದ್ದು ಈ ಪರೀಕ್ಷೆಯಲ್ಲಿ ಕೇವಲ 15 ನಿಮಿಷಗಳಲ್ಲಿ ಕೋವಿಡ್-19ರ ಫಲಿತಾಂಶವು ದೊರಕಲಿದೆ. ಜಿಲ್ಲೆಯಲ್ಲಿ ಸ್ಥಾಪಿಸಿರುವ ಆರ್.ಟಿ.ಪಿ.ಸಿ.ಆರ್ ಲ್ಯಾಬ್‍ಗಳಲ್ಲಿ ಗಂಟಲು ದ್ರವ ಪರೀಕ್ಷಗೆ ಕಳುಹಿಸಿಕೊಟ್ಟ ನಂತರ ಫಲಿತಾಂಶ ಬರುವ ತನಕ ಪ್ರತ್ಯೇಕವಾಗಿ ಮನೆಯ ಒಂದು ಕೊಠಡಿಯಲ್ಲಿ ಕ್ವಾರಂಟೈನ್ ಆಗಲು ಸೂಚಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಸಾಂಕ್ರಮಿಕ ರೋಗದಿಂದ ದೂರವಿರಲು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸಾಧ್ಯವಾದಷ್ಟು ಮನೆಯಲ್ಲಿ ಇರುವುದು, ಮನೆಗೆ ಇತರರನ್ನು ಬರಮಾಡಿಕೊಳ್ಳುವುದನ್ನು ತಡೆಗಟ್ಟುವುದು, ಮನೆಯ ಅಕ್ಕಪಕ್ಕದ ಮನೆಗೆ ಬೇರೆ ರಾಜ್ಯ, ಜಿಲ್ಲೆಗಳಿಂದ ಬರುವ ವ್ಯಕ್ತಿಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸುವುದು, ಹಾಗೂ ತಮಗೆ ತಿಳಿದಿರುವ ಯಾವುದೇ ವ್ಯಕ್ತಿಗೆ ಕೋವಿಡ್-19 ಲಕ್ಷಣಗಳು ಕಂಡು ಬಂದಲ್ಲಿ ತುರ್ತಾಗಿ ಅಧಿಕಾರಿಗಳಿಗೆ ಮಾಹಿತಿ ತಿಳಿಸುವಂತೆ ಅವರು ಮನವಿ ಮಾಡಿದ್ದಾರೆ.

      ರೋಗದ ಬಗ್ಗೆ ಜನರು ಮುಂಜಾಗ್ರತ ಕ್ರಮಗಳನ್ನು ಪಾಲಿಸುವುದರಿಂದ ಈ ರೋಗದಿಂದ ತಮ್ಮ ಕುಟುಂಬ ಹಾಗೂ ಎಲ್ಲಾ ಸಾರ್ವಜನಿಕರು ಸುರಕ್ಷಿತವಾಗಿರಬೇಕೆಂದು ಮನವಿ ಮಾಡಿರುವ ಅವರು ಪೌಷ್ಟಿಕಾಂಶದ ಆಹಾರ, ಎಲ್ಲಾ ರೀತಿ ಮೂಲಭೂತ ಸೌಲಭ್ಯಗಳನ್ನು ಹೊಂದಿರುವ ಕೋವಿಡ್ ಕೇರ್ ಸೆಂಟರ್‍ಗಳನ್ನು ಎಲ್ಲಾ ತಾಲ್ಲೂಕುಗಳಲ್ಲಿ ತೆರೆಯಲಾಗಿದೆ. ತುಮಕೂರು ಉಪ ವಿಭಾಗಕ್ಕೆ ಸೇರಿದ ತುಮಕೂರು, ಕುಣಿಗಲ್ ಮತ್ತು ಗುಬ್ಬಿ ತಾಲ್ಲೂಕುಗಳಲ್ಲಿ ಬಹಳ ಒಳ್ಳೆಯ ವ್ಯವಸ್ಥೆಗಳನ್ನು ಈಗಾಗಲೇ ಕಲ್ಪಿಸಲಾಗಿದೆ. ಬಹಳಷ್ಟು ಜನ ಈಗಾಗಲೇ ಗುಣಮುಖವೊಂದಿ ಮನೆಗೆ ತೆರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

      ಅನಗತ್ಯವಾಗಿ ರಸ್ತೆಯಲ್ಲಿ ಒಡಾಡದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ಈ ರೋಗದಿಂದ ದೂರವಿರಲು ಸಾಧ್ಯವಾಗುತ್ತದೆ, ಆದ್ದರಿಂದ ಎಲ್ಲರೂ ಒಂದಾಗಿ ಈ ರೋಗದ ನಿಯಂತ್ರಣಕ್ಕೆ ಕೈ ಜೋಡಿಸಿ ಕೊರೊನ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸೋಣ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

      ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ತಾಲ್ಲೂಕು ಸಮನ್ವಯಾಧಿಕಾರಿಗಳಾದ ತುಮಕೂರು: ಡಾ|| ಶರತ್ ಚಂದ್ರ-9880105993/ ಡಾ|| ಕೇಶವರಾಜ್ 9449843210, ಕುಣಿಗಲ್: ಡಾ|| ಜಗದೀಶ್-9591414700 / ಡಾ|| ಚೇತನ್-8971884715 ಗುಬ್ಬಿ: ಡಾ|| ಬಿಂದುಮಾಧವನ್-8277507011/ ಡಾ|| ರಜನಿ 9448613666ನ್ನು ಸಂಪರ್ಕಿಸಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 5 times, 1 visits today)

Related posts