ಡಾ.ರಾಜ್ ಚಿತ್ರಗಳ ಸಾಮಾಜಿಕ ಸಂದೇಶ ಯುವಜನತೆಗೆ ದಾರಿದೀಪ

ತುಮಕೂರು:
ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‍ಕುಮಾರ್ ಅವರು ಅಭಿನಯಿಸಿದ ಚಿತ್ರಗಳಲ್ಲಿ, ಕಲೆಯ ಜೊತೆಗೆ ಕನ್ನಡ ಸಾಹಿತ್ಯ, ಸಂಸ್ಕøತಿಗೆ ಹೆಚ್ಚು ಮೆರಗನ್ನು ನೀಡಿವೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕರಿಬಸವೇಶ್ವರ ಮಠದ ಆವರಣದಲ್ಲಿ,ಶ್ರೀಚನ್ನಬಸವರಾಜೇಂದ್ರ ಸ್ವಾಮೀಜಿಗಳ ನೇತೃತ್ವದಲ್ಲಿ ಶತಶೃಂಗ ಡಾ.ರಾಜ್ ಅಭಿಮಾನಿ ಬಳಗದವತಿಯಿಂದ ಆಯೋಜಿಸಿದ್ದ ಡಾ.ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,ಅವರ ಚಿತ್ರಗಳಲ್ಲಿ ಬಳಸಿರುವ ಭಾಷೆ, ಗೀತೆಗಳಲ್ಲಿರುವ ಸಾಹಿತ್ಯ ಎಲ್ಲವನ್ನು ಅವಲೋಕಿಸಿ ದಾಗ, ಕನ್ನಡ ಸಾಹಿತ್ಯ ಲೋಕಕ್ಕೆ ಆಪಾರ ಕೊಡುಗೆಯನ್ನು ಡಾ.ರಾಜ್ ಚಿತ್ರಗಳು ನೀಡಿವೆ. ಅಲ್ಲದೆ ಉತ್ತಮ ಸಾಮಾಜಿಕ ಸಂದೇಶವನ್ನು ನೀಡುವ ಮೂಲಕ ಅಂದಿನ ಯುವಜನತೆ ದಾರಿ ದೀಪವಾಗಿವೆ ಎಂದರು.
ಪದ್ಮಭೂಷಣ ಡಾ.ರಾಜಕುಮಾರ್ ಅವರು ನಟಿಸಿದ ಬಂಗಾರದ ಮನುಷ್ಯ, ಬಂಗಾರದ ಪಂಜರ,ಬಲೆ ಬಸವ, ಜೀವನ ಜೈತ್ರ ಸೇರಿದಂತೆ ಹಲವಾರು ಸಿನಿಮಾಗಳನ್ನು ನೋಡಿ,ಲಕ್ಷಾಂತರ ತಮ್ಮ ಮನಃ ಪರಿವರ್ತನೆ ಮಾಡಿಕೊಂಡಿದ್ದನ್ನು ನಾವು ಹಿರಿಯರಿಂದ ಕೇಳಿ ತಿಳಿದಿದ್ದೇವೆ.ಆದರೆ ಇಂದು ಹೊಡಿ,ಬಡಿಯಂತಹ ಚಿತ್ರಗಳು ಹೆಚ್ಚಾಗಿ, ಸಾಮಾಜಿಕ ಸಂದೇಶಗಳಿರುವ ಚಿತ್ರಗಳು ಮರೆಯಾಗುತ್ತಿರುವುದು ವಿಷಾದನೀಯ ಎಂದು ಜಿ.ಬಿ.ಜೋತಿಗಣೇಶ್ ತಿಳಿಸಿದರು.
ಹಲವಾರು ವರ್ಷಗಳಿಂದ ಡಾ.ರಾಜ್ ಹುಟ್ಟು ಹಬ್ಬವನ್ನು ತಮ್ಮ ಮನೆಯ ಹಬ್ಬವೆಂಬಂತೆ ಆಚರಿಸುತ್ತಾ ಬಂದಿರುವ ಹರಳೂರು ಟಿ.ಜಿ.ಶಿವಕುಮಾರ್,ಕಳೆದ ಎರಡು ವರ್ಷಗಳಿಂದ ಕೋರೋನ ಇದ್ದ ಕಾರಣ,ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ.ಈ ಬಾರಿ ಡಾ.ರಾಜ್ ಅವರ ಬೆಳ್ಳಿ ಪುತ್ಥಳಿ ಅನಾವರಣ ಮಾಡುವುದರ ಜೊತೆಗೆ, ಕರಿಬಸವೇಶ್ವರ ವೃತ್ತದಿಂದ ಚರ್ಚ್ ಸರ್ಕಲ್ ವರೆಗಿನ ಹೊರಪೇಟೆ ಮುಖ್ಯರಸ್ತೆಗೆ ಈ ಭಾಗದ ನಾಗರಿಕರೆಲ್ಲರ ಸಹಕಾರದೊಂದಿಗೆ ಡಾ.ರಾಜಕುಮಾರ್ ರಸ್ತೆ ಎಂದು ನಾಮಕರಣ ಸಹ ಮಾಡಿ,ಅವರ ಹೆಸರನ್ನು ಚಿರಸ್ಥಾಯಿಯಾಗಿಸುವ ಕಾರ್ಯವನ್ನು ಹರಳೂರು ಶಿವಕುಮಾರ್ ಮಾಡಿದ್ದಾರೆ.ಇದರ ಜೊತೆಗೆ ಡಾ.ರಾಜ್‍ಕುಮಾರ್ ಅವರ ಬೆಳ್ಳಿ ಪುತ್ಥಳಿ ಮತ್ತು ಅವರ ಪುತ್ರ ಪುನಿತ್ ರಾಜಕುಮಾರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆಯನ್ನು ವಿವಿಧ ಕಲಾತಂಡಗಳೊಂದಿಗೆ ಸಹ ಏಪ್ರಿಲ್ 25 ರಂದು ಹಮ್ಮಿಕೊಂಡಿದ್ದಾರೆ. ಈ ಎಲ್ಲಾ ಕಾರ್ಯಗಳಿಗೆ ನಮ್ಮ ಸಹಕಾರವಿದೆ ಎಂದರು.
ಕಾರ್ಯಕ್ರಮದ ರೂವಾರಿ ಹರಳೂರು ಟಿ.ಜಿ.ಶಿವಕುಮಾರ್ ಮಾತನಾಡಿ,ಸಮಾಜದಲ್ಲಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂಬುದಕ್ಕೆ ಪ್ರೇರಣೆಯೇ ಡಾ.ರಾಜಕುಮಾರ್,ನಾವು ರಾಜಕುಮಾರ್ ಹೆಸರನ್ನು ಹೊರಪೇಟೆ ಮುಖ್ಯರಸ್ತೆಗೆ ಇಡಬೇಕೆಂದು ಈ ಭಾಗದ ಕಾರ್ಪೋರೇಟರ್ ಶ್ರೀಮತಿ ರೂಪಶ್ರೀ ಶೆಟ್ಟಾಳಯ್ಯ ಅವರನ್ನು ಕೇಳಿದ ಅವರು ಎಲ್ಲಾ ಸದಸ್ಯರನ್ನು ಒಪ್ಪಿಸಿ ಪಾಲಿಕೆಯ ಅನುಮತಿ ಕೊಡಿಸುವ ಮೂಲಕ ಅನುಕೂಲ ಮಾಡಿಕೊಟ್ಟಿದ್ದಾರೆ. ಇದೇ ರೀತಿ ಶಾಸಕರು, ಕರಿಬಸವೇಶ್ವರ ಮಠದ ಶ್ರೀಚನ್ನಬಸವರಾಜೇಂದ್ರ ಶ್ರೀಗಳು ಸಹ ಬೆನ್ನುತಟ್ಟಿ ಸಹಕಾರ ನೀಡಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.ಅವರ ಬಂಗಾರದ ಮನುಷ್ಯ ಚಿತ್ರದಿಂದ ಪ್ರೇರೆಪಿರಾಗಿ ಹೊಟೇಲ್ ಉದ್ಯಮ ಆರಂಭಿಸಿದ ನಮಗೆ ಇಂದಿಗು ಅವರೇ ಸ್ಪೂರ್ತಿ, ನಮ್ಮ ಹೊಟೇಲ್‍ಗೆ ಬಂದು ತಿಂಡಿ ತಿಂದ ದಿನವನ್ನು ನಾವು ಮರೆಯಲು ಸಾಧ್ಯವೇ ಇಲ್ಲ.ಅವರ 200 ಚಿತ್ರಗಳನ್ನು ಕನಿಷ್ಠವೆಂದರೂ 4-5 ನೋಡಿದ್ದೇನೆ.ಪ್ರತಿವರ್ಷ ಅವರ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇವೆ. ಏಪ್ರಿಲ್ 25ರ ಸೋಮವಾರ ಡಾ.ರಾಜಕುಮಾರ್ ಅವರ ಬೆಳ್ಳಿ ಪುತ್ಥಳಿ ಮತ್ತು ಪುನಿತ್ ರಾಜಕುಮಾರ್ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಲಿದೆ. ನಾಗರಿಕರು ಭಾಗವಹಿಸಬೇಕೆಂದು ಮನವಿ ಮಾಡಿದರು. ವೇದಿಕೆಯ ದಿವ್ಯ ಸಾನಿಧ್ಯವನ್ನು ಶ್ರೀಶ್ರೀ ಜಗದ್ಗುರು ಚನ್ನಬಸವರಾಜೇಂದ್ರ ಮಹಾಸ್ವಾಮೀಜಿಗಳು ವಹಿಸಿದ್ದರು. ನಗರಪಾಲಿಕೆ ಸದಸ್ಯರಾದ ಟಿ.ಎಂ.ಮಹೇಶ್,ಶ್ರೀಮತಿ ರೂಪಶ್ರೀ ಶೆಟ್ಟಾಳಯ್ಯ,ಇನಾಯತ್‍ವುಲ್ಲಾ ಖಾನ್,ಕೊಪ್ಪಳ ನಾಗರಾಜು,ಶತಶೃಂಗ ಡಾ.ರಾಜಕುಮಾರ್ ಕನ್ನಡ ಅಭಿಮಾನಿಗಳ ಸಂಘದ ಅಧ್ಯಕ್ಷ ಟಿ.ಜಿ.ಶಿವಕುಮಾರ್ ಹರಳೂರು,ಟಿ.ಜಿ.ಬಸವರಾಜು,ಮನು ಹರಳೂರು,ಟಿ.ಸಿ.ದಯಾನಂದ್,ಬಂಬೂ ಮೋಹನ್, ಟಿ.ಹೆಚ್.ವಾಸುದೇವರಾವ್,ಟಿ.ಆರ್.ತೋಂಟದಾರಾಧ್ಯ, ಚಂದ್ರಮೌಳಿ, ರಾಜಣ್ಣ, ಟಿ.ಎಸ್.ಗಟ್ಟಿ, ನಿಶ್ಚಯ್, ಎನ್.ರಾಜ್, ಜೀವನ್ ವಿ, ಮತ್ತಿತರರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ಮತ್ತು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

(Visited 1 times, 1 visits today)

Related posts