ತುರುವೇಕೆರೆ : ಮರಕ್ಕೆ ಕಾರು ಡಿಕ್ಕಿ; ಚಾಲಕ ಸಾವು!!

ತುರುವೇಕೆರೆ :

      ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು  ಚಾಲಕನಿಗೆ ತೀವ್ರ ರಕ್ತ ಸ್ರಾವವಾಗಿ ಚಾಲಕ ಸಾವನ್ನಪ್ಪಿರುವ ಘಟನೆ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಪೋಲಿಸ್ ಠಾಣಾ ಸರಹದ್ದಿನಲ್ಲಿ ನಡೆದಿದೆ.

      ವಿನಯ್ (31 ವರ್ಷ) ಮೃತ ಯುವಕ. ಈತ ನಿಟ್ಟೂರು ಬಳಿ ಬಂಡಿಹಳ್ಳಿ ಗ್ರಾಮ ವಾಸಿಯಾಗಿದ್ದು, ಇಟಿಯೋಸ್ ಕಾರಿನಲ್ಲಿ ಅಮ್ಮಸಂದ್ರದಿಂದ ತನ್ನ ಸ್ವಗ್ರಾಮಕ್ಕೆ ತೆರಳುವಾಗ ಕೊಡಗಲ್ ಪಾಳ್ಯ ಗೇಟ್ ಬಳಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ.

       ಪರಿಣಾಮ ಸ್ಥಳದಲ್ಲಿಯೇ ಕಾರು ಚಾಲನೆ ಮಾಡುತ್ತಿದ್ದ ವಿನಯ್ ಸಾವಿಗೀಡಾಗಿದ್ದಾರೆ. ಸ್ಥಳಕ್ಕೆ ದಂಡಿನಶಿವರ ಪೋಲಿಸರು ಆಗಮಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

 

(Visited 312 times, 1 visits today)

Related posts

Leave a Comment