ತುಮಕೂರು
ವಿಶ್ವ ನಾಯಕ ಶ್ರೀ ನರೇಂದ್ರ ಮೋದಿ ಜೀ ರವರ 25 ವರ್ಷದ ಸಾರ್ಥಕವಾದ ಸಾಧನೆಯ ಸೇವಾರ್ಥದ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮವನ್ನು 19ನೇ ವಾರ್ಡ್ ಶ್ರೀ ರಾಮನಗರದ ಅಶ್ವಥ್ ಕಟ್ಟಿಯಲ್ಲೆ ಮಾಡಲಾಯಿತು, ಹಾಗೂ 19 ನೇ ವಾರ್ಡ್ ನ ನೂತನ ಪದಾಧಿಕಾರಿಗಳನ್ನು , ವಾರ್ಡಿನ ಅಧ್ಯಕ್ಷರಾದ ಕಿರಣ್ (ಗಜ)ರವರ ಅಧ್ಯಕ್ಷತೆಯಲ್ಲಿ ನೇಮಿಸಲಾಯಿತು, ಉಪಾಧ್ಯಕ್ಷರಾಗಿ -ಶಕುಂತಲಾ ಮೇಸ್ತ್ರಿ ರಾಮಣ್ಣ,ಜಗದೀಶ, ಕಾರ್ಯದರ್ಶಿಗಳಾಗಿ- ಭಾರತ್, ವೆಂಕಟೇಶ್ , ಸಿದ್ದರಾಜು, ಕಾರ್ತಿಕ್, ಕಾರ್ಯಕಾರಿಣಿ ಸದಸ್ಯರು – ಶ್ರೀಧರ್,ಸಂತು, ಹಿತೇಂದ್ರ,ಮೋಹನ್,ಶೀಲಾ.ಬಿ.ಪಿ, ಲಕ್ಷ್ಮಿಕಾಂತ್ ಮ್ಮ,ಕುಶಾಲ,ಆನಂದ್,
ವಾರ್ಡ್- ಮಹಿಳಾ ಮೋರ್ಚಾ ಅಧ್ಯಕ್ಷರಾಗಿ- ಲೀಲಾವತಿ, ಕಾರ್ಯದರ್ಶಿ – ವಿಜಯಲಕ್ಷ್ಮಿ, ವಾರ್ಡ್ ಯುವ ಮೋರ್ಚಾ ಅಧ್ಯಕ್ಷರಾಗಿ- ಸಂತೋಷ್, ಕಾರ್ಯದರ್ಶಿ-ಕೀರ್ತೀ ಅವರನ್ನು ನಿಯೋಜನೆ ಮಾಡಲಾಗಿದೆ, ಈ ಸಂದರ್ಭದಲ್ಲಿ ಕಿರಣ್ ರವರು ಮಾತನಾಡಿ ಜವಾಬ್ದಾರಿ ಪಡೆದಿರುವ ನಾವು ಮುಂದಿನ ದಿನಗಳಲ್ಲಿ ಹೆಚ್ಚಿನ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಈ ಭಾಗದಲ್ಲಿ ಒಬ್ಬ ಮಹಾನಗರ ಪಾಲಿಕೆ ಸದಸ್ಯರನ್ನು ಗೆಲ್ಲಿಸಲು ಶ್ರಮಿಸೋಣ ,ಹಾಗೂ ನಮ್ಮ ಕೈಯಲ್ಲಿ ಆಗುವಷ್ಟು ಜನಪರ ಕೆಲಸ ಮಾಡೋಣ ಎಂದು ತಿಳಿಸಿದರು,ಕಾರ್ಯಕ್ರಮದಲ್ಲಿ ತುಮಕೂರು ನಗರ ಮಂಡಲ ಉಪಾಧ್ಯಕ್ಷರಾದ ಬಂಬೂ ಮೋಹನ್ ರವರು, ಪ್ರಧಾನ ಕಾರ್ಯದರ್ಶಿಗಳಾದ ಹನುಮಂತರಾಜು ರವರು, ತುಮಕೂರು ನಗರ ಯುವ ಮೋರ್ಚಾ ಅಧ್ಯಕ್ಷರಾದ ಪ್ರೀತಮ್, ವಾರ್ಡ್ ಉಸ್ತುವಾರಿ ನಾಗರತ್ನಮ್ಮ ಹಾಗೂ ಬೂತ್ ಅಧ್ಯಕ್ಷರು,ನಗರ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

(Visited 1 times, 1 visits today)