ತುಮಕೂರು: ಆಡುವುದೊಂದು ಮಾಡುವುದೊಂದು ಆದರೆ ವ್ಯಕ್ತಿಯನ್ನು ಸಮಾಜ ಗೌರವಿಸುವುದಿಲ್ಲ. ಮಾತು ಕೃತಿಗೆ ಬಂದಾಗಲೇ ವ್ಯಕ್ತಿ ಶ್ರೇಷ್ಠನೆನಿಸಿಕೊಳ್ಳುವುದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಬಸವೇಶ್ವರ ಅಧ್ಯಯನ ಪೀಠ ಬುಧವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿವಿ ಆವರಣದಲ್ಲಿರುವ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಬಸವಣ್ಣ ಮೊದಲಾದ ಮಹಾತ್ಮರನ್ನು ನಿರ್ದಿಷ್ಟ ಜಾತಿ, ಸಮುದಾಯಗಳಿಗೆ ಸೀಮಿತಗೊಳಿಸಬಾರದು. ಅವರ ತತ್ವಗಳ ಸ್ಮರಣೆ ಜಯಂತಿಗಳಿಗೂ ಸೀಮಿತವಾಗಬಾರದು ಎಂದರು. ಕಾಯಕವೇ ಕೈಲಾಸ ತತ್ವವೊಂದನ್ನು ಅಳವಡಿಸಿಕೊಂಡರೆ ವ್ಯಕ್ತಿ ಮಹಾತ್ಮನಾಗುತ್ತಾನೆ. ಸಮಾಜ ಸುಧಾರಣೆಯ ಪ್ರಕ್ರಿಯೆ ವಿಶ್ವವಿದ್ಯಾನಿಲಯಗಳಿಂದ ಆರಂಭವಾಗಬೇಕು ಎಂದು ಅಭಿಪ್ರಾಯಪಟ್ಟರು. ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ಸಮಾನತೆಯ ಹರಿಕಾರರಾದ ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲೇ ಮಹಿಳಾ ಸಬಲೀಕರಣದ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಿದವರು. ಗುಡಿಯಲ್ಲಿದ್ದ ದೇವರನ್ನು ಅಂಗೈಗಳಿಗೆ ತಂದಿಟ್ಟವರು ಎಂದರು. ಬಸವೇಶ್ವರ ಅಧ್ಯಯನ ಪೀಠದ ಸಂಚಾಲಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಮಾತನಾಡಿ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಬಸವಣ್ಣನವರು ನೀಡಿದ ಕೊಡುಗೆ ಅಪಾರ.…
Author: News Desk Benkiyabale
ತುಮಕೂರು: ೨ನೇ ಶತಮಾನದಲ್ಲಿ ದೇವನೊಬ್ಬ ನಾಮ ಹಲವು,ಕಾಯಕವೇ ಕೈಲಾಸ,ಪರಸ್ತಿçà ಸಹೋದರಿಯ ಸಮ,ಪರಧನ ನಮ್ಮದಲ್ಲ,ದೇವನೊಬ್ಬ ನಾಮ ಹಲವು,ಕೆಲಸದಲ್ಲಿ ಮೇಲು ಕೀಳು ಅಂತ ಯಾ ವುದೂ ಇಲ್ಲ,ದುಡಿದು ತಿನ್ನುವ ಕೈಗಳೇ ಶ್ರೇಷ್ಠ,ವಿಶ್ವದ ಮೊದಲ ಪಾರ್ಲಿಮೆಂಟ್ ಎಂದು ಅನುಭವ ಮಂಟಪವನ್ನು ಸ್ಥಾಪಿಸಿ ಅಲ್ಲಿ ಎಲ್ಲಾ ಜಾತಿ ಜನಾಂಗದವರನ್ನು ಒಂದೆಡೆ ಸೇರಿಸಿ ಸಮಾಜದ ಹಲವು ಸಮಸ್ಯೆಗಳಿಗೆ ಚರ್ಚಿಸಿ ತಕ್ಷಣವೇ ಪರಿ ಹಾರ ಕಂಡುಕೊAಡು ವಿಶ್ವದ ಶಕ್ತಿಯಾಗಿ ವಿಶ್ವದ ಜ್ಯೋತಿಯಾಗಿ ಬಾಳಿ ಬದುಕಿ ನಮಗೆ ಉತ್ತಮ ದಾರಿ ಕಲ್ಪಿಸಿದ್ದು ಜಗಜ್ಯೋತಿ ಬಸವೇಶ್ವರರು ಎಂದು ಸಮಾಜಸೇವಕ,ವೀರಶೈವ ಮುಖಂಡರಾದ ಎಸ್.ಆರ್.ಶಿವಶಂಕರ್ ರವರು ತಿಳಿಸಿದರು. ಅವರು ಇಂದು ಜಯನಗರಪೂರ್ವ ಬಡಾವಣೆಯ ೧ನೇ ಮುಖ್ಯರಸ್ತೆಯಲ್ಲಿರುವ ಅಶ್ವತ್ಥಕಟ್ಟೆಯ ಬಳಿ ಜಯನಗರ ಕ್ಷೇಮಾಭಿವೃದ್ಧಿ ಸಂಘ,ಸ್ಮಾರ್ಟ್ಸಿಟಿ ಹಣ್ಣು-ತರಕಾರಿ ಮಾರುಕಟ್ಟೆ ವ್ಯಾಪಾರಸ್ಥರಿಂದ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ವೀರಶೈವ ಮುಖಂಡರೂ ಬಡಾವಣೆಯ ಹಿರಿಯರಾದ ಪಾಲಾಕ್ಷಯ್ಯನವರು ಮಾತನಾಡುತ್ತಾ ಜಾತಿ,ಮತ,ಪಂಥಗಳನ್ನು ಪಕ್ಕಕ್ಕೆ ಸರಿಸಿ ಮಾನವ ಜಾತಿಯೇ ಶ್ರೇಷ್ಠ,ಬಡಿದು ತಿನ್ನುವುದಕ್ಕಿಂತ ದುಡಿದು ತಿನ್ನುವವನೇ ಶ್ರೇಷ್ಠ,ಮಾನವೀಯತೆ,ದಯೆ ಇಲ್ಲದ ಧರ್ಮವು ಧರ್ಮವೇ…
ತುಮಕೂರು: ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬAಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯ ಯೋಜನೆಯಡಿ ಆಟೋ ಚಾಲಕರು ಹಾಗೂ ಇಶ್ರಮ್ ಯೋಜನೆಯಡಿ ವಿವಿಧ ವರ್ಗದ ಕಾರ್ಮಿಕರನ್ನು ನೋಂದಣಿ ಮಾಡುವ ಅಭಿಯಾನವನ್ನು ಮೇ ೫ರಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯು ಕರ್ನಾಟಕ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ. ಅಭಿಯಾನದಲ್ಲಿ ನೋಂದಾ ಯಿಸುವವರ ವಯೋಮಿತಿ ೧೮ ರಿಂದ ೬೦ ವರ್ಷದೊಳಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇ.ಪಿ.ಎಫ್. ಹಾಗೂ ಇ.ಎಸ್.ಐ ಸೌಲಭ್ಯ ಹೊಂದಿರಬಾರದು. ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಲಭ್ಯವಾಗುತ್ತವೆ. ಚಾಲಕರು, ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ವಾಣಿಜ್ಯ ವಾಹನ ಚಲಾಯಿಸಲು ಊರ್ಜಿತ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಅರ್ಹರು ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಊರ್ಜಿತ ಚಾಲನಾ ಪರವಾನಗಿ, ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಅಭಿಯಾನದಲ್ಲಿ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ/ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು…
ಪಾವಗಡ: ವಿಶ್ವದಾದ್ಯಂತ ಸಮಾನತೆಯನ್ನು ಪ್ರತಿಪಾದಿಸಿದ ಬಸವಣ್ಣ ಅವರು ಸರ್ವ ಜನಾಂಗಗಳ ನಾಯಕರಾಗಿದ್ದರು ಎಂದು ತಹಶೀಲ್ದಾರ್ ಡಿ.ಎನ್. ವರದರಾಜು ತಿಳಿಸಿದರು, ಬುಧವಾರ ಪಟ್ಟಣದ ತಾಲೂಕು ಕಚೇರಿಯ ಸಭಾಂ ಗಣದಲ್ಲಿ ಜಗದ್ಗುರು ಬಸವಣ್ಣನವರ ಜಯಂತಿಯನ್ನು ಸರಳವಾಗಿ ಆಚರಿಸುವುದರ ಜೊತೆಗೆ ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿ ಮಾತನಾಡಿದ ಅವರು, ಪ್ರಪಂಚದಾದ್ಯAತ ಸಮಾಜದ ಒಳಿತಿಗಾಗಿ ವಚನಗಳ ಮೂಲಕ ಸಮಾನ ತೆಯನ್ನು ತಿಳಿ ಹೇಳಿದ ಬಸವಣ್ಣನವರು ನಮ್ಮೆಲ್ಲರಿಗೂ ಆದರ್ಶವಾಗಿದ್ದರು. ಜೊತೆಗೆ ತಮ್ಮ ಅನುಯಾಯಿಗಳ ಮೂಲಕವೂ ಸಹ ಮನೆಮನೆಗಳಿಗೆ ತೆರಳಿ ಸಮಾನತೆಯ ಬಗ್ಗೆ ತಿಳಿ ಹೇಳುವ ಕೆಲಸ ಮಾಡಿದ್ದರು ಎಂದರು. ಜಗದ್ಗುರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಗ್ರೇಡ್ ೨ ತಹಸೀಲ್ದಾರ್ ಚಂದ್ರಶೇಖರ್, ಆರ್. ರಾಜಗೋಪಾಲ್, ಗ್ರಾಮ ಆಡಳಿತ ಅಧಿಕಾರಿಗಳಾದ ಈರಣ್ಣ ಗೋರ್ನಾಳ್, ರಾಜೇಶ್, ರವಿಕುಮಾರ್, ಸಿಬ್ಬಂದಿ ಪದ್ಮಾ, ಬಲರಾಂ,ಅಸ್ಲಾA, ಲಿಂಗಾಯತ ಸಮಾಜದ ಮುಖಂಡರಾದ ಕಾರ್ತಿಕ್ ರಾಜನ್, ಪ್ರೇಸ್ ನಾಗಭೂಷಣ್, ಶ್ರೇಯಸ್, ಹೆಚ್ ಕೃಷ್ಣಮೂರ್ತಿ, ವಕೀಲರಾದ ಆರ್ ಹನುಮಂತರಾಯ, ಎಂ.ಜಿ.ಮAಜುನಾಥ್, ರೈತ ಸಂಘದ ಗೋಪಾಲ್ ಸೇರಿದಂತೆ…
ತುಮಕೂರು: ದಿ: ೦೬/೧೨/೨೦೨೨ ರಂದು ನೊಂದ ಬಾಲಕಿಯ ತಾಯಿ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಪಡೆದು ತುಮಕೂರು ಮಹಿಳಾ ಪೊಲೀಸ್ ಠಾಣಾ ಮೊನಂ: ೧೫೭/೨೦೨೨ ಕಲಂ: ೩೭೬,೫೦೬ ಐಪಿಸಿ ಮತ್ತು ಕಲಂ: ೦೬ ಪೋಕೋ ಆಕ್ಟ್ ಪ್ರಕರಣವನ್ನು ಮನೋಹರ ಬಾಬು ಮುಖ್ಯ ಪೇದೆ ರವರು ದಾಖಲಿಸಿರುತ್ತಾರೆ. ನಂತರ ಪೊಲಿಸ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಒ.ಃ ಮಹಿಳಾ ಪೊಲೀಸ್ ಠಾಣೆ ರವರು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿಯಾದ ಖಾಮಿಲ್ ಪಾಷ ವಾಸ: ಪಿ.ಹೆಚ್ ಕಾಲೋನಿ ತುಮಕೂರು ಟೌನ್ ರವರನ್ನು ದಸ್ತಗಿರಿ ಮಾಡಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತಾರೆ. ಸದರಿ ಪ್ರಕರಣವನ್ನು ಸ್ಪೆಷಲ್ ಸಿ.ಸಿ ನಂ:೫೦೬/೨೦೨೩ ರಲ್ಲಿ ಮಾನ್ಯ ತುಮಕೂರು ಎಫ್.ಟಿ.ಎಸ್.ಸಿ-೧ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿ ಆರೋಪಿಯ ವಿರುದ್ಧ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ದಿ: ೨೮/೦೪/೨೦೨೫ ರಂದು ಈ ಪ್ರಕರಣದ ಆರೋಪಿ ಖಾಮಿಲ್ ಪಾಷ ರವರಿಗೆ ಜೀವಾವಧಿ ಶಿಕ್ಷೆ ಮತ್ತು ೧ ಲಕ್ಷ ೫೦ ಸಾವಿರ…
ವಿಶ್ವ ಗುರು, ಜಾಗತಿಕ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವಣ್ಣ ರವರ ಜಯಂತಿಯ ದಿನವಾದ ಇಂದು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಬೆಳಗ್ಗೆ ೦೮:೩೦ ರ ಸಮಯದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ಐಪಿಎಸ್ ರವರು ಪುಪ್ಪಾರ್ಚನೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಲಾಯಿತು. ಈ ಸಮಯದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಅಬ್ದುಲ್ ಖಾದರ್, ಸಿ. ಗೋಪಾಲ್ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತಿತರಿದ್ದರು.
ತುಮಕೂರು: ಜಗತ್ತಿನ ಮೊದಲ ಸಂಸತ್ತು ಎಂದು ಕರೆಯಲ್ಪಡುವ ಅನುಭವ ಮಂಟಪ, ವಿವಿಧ ಸಮುದಾಯಗಳ ಜನರ ಅನುಭವ ಮತ್ತು ಆನುಭಾವದ ಸಮ್ಮೀಲನ ಎಂದು ಅಪರಜಿಲ್ಲಾಧಿಕಾರಿಡಾ.ತಿಪ್ಪೇಸ್ವಾಮಿಅಭಿಪ್ರಾಯಪಟ್ಟಿದ್ದಾರೆ. ನಗರದಕನ್ನಡ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಮಹಾನಗರಪಾಲಿಕೆ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ವೀರಶೈವ, ಲಿಂಗಾಯಿತ ಸಮುದಾಯದ ಸಂಘಟನೆಗಳ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದಅವರು,ಜಾತಿ, ಮತ, ಲಿಂಗ ಭೇದವಿಲ್ಲದೆಎಲ್ಲ ಸಮುದಾಯವರಿಗೂತಮ್ಮ ನೋವು, ನಲಿವುಗಳನ್ನು ಅಭಿವ್ಯಕ್ತಿಗೊಳಿಸಲು ಅವಕಾಶವಿದ್ದ ಮೊದಲು ವೇದಿಕೆ ಅನುಭವ ಮಂಟಪಎAದರು. ಬಸವಣ್ಣನವರ ವಚನಗಳಲ್ಲಿ ನಾಡಿನ ಸಾಂಸ್ಕೃತಿಕ, ಸಾಮಾಜಿಕ,ಆರ್ಥಿಕ, ರಾಜಕೀಯ, ಧಾರ್ಮಿಕ ವಿಚಾರಗಳನ್ನು ಒಳಗೊಂಡಿದ್ದು, ಇಂದಿಗೂ ಪ್ರಸ್ತು ತವಾಗಿದೆ. ಪಂಡಿತ, ಪಾಮರರ ಭಾಷೆಗೆ ಬದಲಾಗಿ, ಜನರಆಡು ಭಾಷೆಯಾದಕನ್ನಡದ ಮೂಲಕ ಜಗತ್ತಿನ ಆಗು ಹೋಗುಗಳನ್ನು ತಿಳಿಸುವ ಮೂಲಕ ಜನರನ್ನು ಜಾಗೃತಗೊಳಿಸುವ ಕೆಲಸವನ್ನು ಬಸವಣ್ಣವರು ವಚನ ಸಾಹಿತ್ಯದ ಮೂಲಕ ಮಾಡಿದರು.ಸಕಲ ಜೀವರಾಶಿಗಳಿಗೆ ಲೇಸನ್ನೇ ಬಯಸಿದ ಅವರು, ನುಡಿದಂತೆ ನಡೆದವರು.ಅಲ್ಲದೆ ಸಮಾಜದಲ್ಲಿ ನಡೆ, ನುಡಿಗಳು ಹೇಗಿರಬೇಕುಎಂಬುದನ್ನು ತೋರಿಸಿಕೊಟ್ಟರು.ಕಾಯಕ, ದಾಸೋಹದ ಎಂಬ…
ತುಮಕೂರು: ವಿಶ್ವದಲ್ಲಿ ಪಶು ವೈದ್ಯಕೀಯ ಕ್ಷೇತ್ರವು ವೈದ್ಯಕೀಯ ಕ್ಷೇತ್ರಕ್ಕೆ ಸರಿಸಮನಾಗಿ ಬೆಳೆದಿದೆ ಎಂದು ಕರ್ನಾಟಕ ಪಶು ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ವೈ.ಜಿ. ಕಾಂತರಾಜು ಅಭಿಪ್ರಾಯಪಟ್ಟರು. ಕರ್ನಾಟಕ ಪಶುವೈದ್ಯಕೀಯ ಸಂಘ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸಂಘದ ಸಹಯೋಗದಲ್ಲಿ ನಗರದಲ್ಲಿ ಏ. ೨೬ರಂದು ಹಮ್ಮಿಕೊಂಡಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆ ಮತ್ತು ತಾಂತ್ರಿಕ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಶು ವೈದ್ಯಕೀಯ ವೃತ್ತಿ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿದೆ. ಅಮೋಘವಾದ ಸಂಶೋಧನೆಗಳ ಮೂಲಕ ಉತ್ತಮ ರಾಸುಗಳ ತಳಿಗಳನ್ನು ಅಭಿವೃದ್ಧಿಗೊಳಿಸಿದೆ. ನಾಗಾಲೋಟದಲ್ಲಿ ಬೆಳೆದಿರುವ ಮಾನವ ಸಂಕುಲಕ್ಕೆ ಸಾಕಾಗುವಷ್ಟು ಪ್ರಾಣಿಜನ್ಯ ಪೋಷಕಾಂಶಗಳನ್ನು ಒದಗಿಸುವ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಪ್ರಾಣಿಜನ್ಯ ರೋಗಗಳನ್ನು ಪತ್ತ ಹಚ್ಚಿ ತಡೆಗಟ್ಟುವ ಮೂಲಕ ಸಾರ್ವಜನಿಕ ಆರೋಗ್ಯ ರಕ್ಷಣೆ ಹಾಗೂ ವಿಶ್ವದ ಆರ್ಥಿಕ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಿದೆ ಎಂದು ತಿಳಿಸಿದರು. ಒನ್ ಹೆಲ್ತ್ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಪಶುವೈದ್ಯಕೀಯ ಕ್ಷೇತ್ರ ಮಹತ್ತರವಾದ ಪಾತ್ರವಹಿಸಿದೆ. ಪಶುವೈದ್ಯಕೀಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಮಹನೀಯರನ್ನು ಹಾಗೂ ಅವರ…
ತುರುವೇಕೆರೆ: ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಅಮ್ಮಸಂದ್ರ ಹಾಗೂ ದಂಡಿನಶಿವರ ಗ್ರಾಮಸ್ಥರು ಅಮ್ಮಸಂದ್ರ ಶುದ್ದನೀರಿನ ಘಟಕದ ಬಳಿ ಸೋಮವಾರ ರಸ್ತೆಗೆ ತೆಂಗಿನ ಸಸಿ ನೆಡುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾ.ಪಂ.ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಕೆ.ಸಿದ್ದಗಂಗಯ್ಯ ಬಿ.ಹೆಚ್. ರಸ್ತೆಯಿಂದ ಕಲ್ಲೂರು, ತುರುವೇಕೆರೆ ಹಾಗೂ ಬಾಣಸಂದ್ರ ಮುಖ್ಯ ಸಂಪರ್ಕ ರಸ್ತೆಯಾಗಿದ್ದು ಈ ರಸ್ತೆಯಲ್ಲಿ ದಿನಾಲು ನೂರಾರು ವಾಹನಗಳು ಈ ಭಾಗದಲ್ಲಿ ಸಂಚರಿಸಲಿವೆ. ಇಲ್ಲಿ ರೈಲ್ವೇ ನಿಲ್ದಾಣವೂ ಇರುವುದರಿಂದ ಈ ಭಾಗದಲ್ಲಿ ಹೆಚ್ಚು ವಾಹನಗಳು ಸಂಚರಿಸಲಿದ್ದು. ಅಮ್ಮಸಂದ್ರದಿAದ ನಾಗರಕಟ್ಟೆ ವರೆಗೆ ಮದ್ಯೆ ಮದ್ಯೆ ರಸ್ತೆ ಗುಂಡಿ ಬಿದ್ದು ಸಂಪೂರ್ಣ ರಸ್ತೆ ಹಾಳಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರಾದಿಯಾಗಿ ಪ್ರಯಾಸ ಪಡುವಂತಾಗಿದೆ. ಈಗಾಗಲೇ ಅದೆಷ್ಟೋ ಆವಘಡಗಳು ಸಂಭವಿಸಿವೆ. ಇದೀಗ ಒಂದು ವಾರಗಳ ಕಾಲ ನಡೆಯುವ ದಂಡಿನಶಿವರ ಗ್ರಾಮದೇವತೆ ಶ್ರೀ ಹೊನ್ನಾದೇವಿ ಜಾತ್ರೆ ಪ್ರಾರಂಬವಾಗುತ್ತಿದ್ದು ಪ್ರತಿ ದಿನ ಸಾವಿರಾರು ಜನ ಜಾತ್ರೆಗೆ ಆಗಮಿಸಲಿದ್ದಾರೆ. ನೂರಾರು ವಾಹನಗಳು ಈ…
ತುರುವೇಕೆರೆ: ಹಲ್ಲೆ ಮಾಡಿ ಪರಾರಿಯಾಗಿರುವ ಮಹೇಶ್, ರಾಮಣ್ಣ, ತಂಗ್ಯಮ್ಮ, ಮಂಜುನಾಥ್ ಆರೋ ಪಿಗಳನ್ನು ಪೋಲೀಸರು ಬಂದಿಸುವಲ್ಲಿ ವಿಪಲರಾಗಿದ್ದಾರೆ ಎಂದು ಆರೋಪಿಸಿ ಹಲ್ಲೆಗೊಳಗಾದ ಕೆಂಪಮ್ಮ ಮತ್ತು ನವೀನ್ ಕುಟುಂಬದವರು ಪಟ್ಟಣದ ಪೋಲೀಸ್ ಠಾಣೆ ಮುಂಬಾಗ ಸೋಮವಾರ ಪ್ರತಿಭಟನೆ ನೆಡೆಸಿ ಒತ್ತಾಯಿಸಿದರು. ತಾಲ್ಲೂಕಿನ ನರೀಗೆಹಳ್ಳಿ ಗ್ರಾಮದ ಮುನೇಶ್ ಮಾತನಾಡಿ ಸಂಬAದಿಗಳಾದ ಆರೋಪಿಗಳು ಹಾಗಿರುವ ರಾಮಣ್ಣ, ತಂಗ್ಯಮ್ಮ, ಮಹೇಶ್, ಸಿದ್ದಮ್ಮ ರವರು ಕೆಲ ದಿನಗಳ ಹಿಂದೆ ಗಾಲಾಟೆ ನೆಡೆಸಿ ನಮ್ಮ ತಾಯಿ ಕೆಂಪಮ್ಮ, ಅಣ್ಣನಾದ ನವೀನ್ ಮೇಲೆ ಮಾರಾಣಂತಿಕ ಹಲ್ಲೆ ಮಾಡಿದ್ದರು. ಆಸ್ಪತ್ರೆ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು .ಈ ಘಟನೆ ಬಗ್ಗೆ ಪಟ್ಟಣದ ಪೋಲೀಸ್ ಠಾಣೆಯಲ್ಲಿ ಆರೋಪಿಗಳ ಮೇಲೆ ಕೇಸ್ ದಾಖಲಾಗಿತ್ತು. ಅದಲ್ಲದೇ ತುಮಕೂರು ಎಸ್.ಪಿ.ಕಛೇರಿ ಮುಂಬಾಗದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆ ಮಾಡಿದ್ದು ಈ ಸಂದರ್ಭದಲ್ಲಿ ಅಡಿಷನಲ್ ಎಸ್.ಪಿ. ಅಬ್ದುಲ್ ಖಾದರ್ ಆರೋಪಿಗಳನ್ನು ಬಂದಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದ್ದರು ಅದು ಸಹ ಹುಸಿಯಾಗಿದೆ. ಪ್ರಕರಣ ದಾಖಲಾಗಿ ಸುಮಾರು ೧೫ ದಿನಗಳು ಕಳೆದರು ಅರೋಪಿಗಳನ್ನು ಪೋಲೀಸರು…