ತುಮಕೂರು: ‘ಕೃಷಿ ಮತ್ತು ರೈತರನ್ನು ಕಡೆಗಣಿಸಿದಾಗಲೇ ಹೋರಾಟ ಅನಿವಾರ್ಯವಾಗುತ್ತದೆ. ಕೃಷಿ ಕೇಂದ್ರವಾಗಿರುವ ನಾಡಲ್ಲಿ ಬಡಾವಣೆಗಳೇ ಹೆಚ್ಚಾಗುತ್ತಿದ್ದು, ಹತ್ತಾರು ಯೋಜನೆಗಳಿಗೆ ಕೃಷಿಯೋಗ್ಯ ಭೂಮಿ ಬಲಿಯಾಗುತ್ತಿದೆಎಂದು ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಪಕ ಪ್ರೊ.ಜಿ.ಪ್ರಶಾಂತ ನಾಯಕ ಕಳವಳ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೊ.ಎಂ.ಡಿ. ನಂಜುAಡಸ್ವಾಮಿ ಅಧ್ಯಯನ ಪೀಠ ಮತ್ತು ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ಆಯೋಜಿಸಿದ್ದ, ಕರ್ನಾಟಕ ರೈತ ಚಳುವಳಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚಳಿಗಾಲದ ಬದಲಾಗಿ ಮತ್ತೊಂದು ಬೇಸಿಗೆ ಕಾಲದಲ್ಲಿ ಬದುಕುತ್ತಿದ್ದೇವೆ. ಇಂತಹ ಸಮಯದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಬರದ ಕಾರಣಕ್ಕಾಗಿ ರೈತರ ಸಾವು ಸಂಭವಿಸುತ್ತಿವೆ ಎಂದರು. ಜಮೀನಿನ ತೆರಿಗೆ, ಬರ ಮತ್ತು ಪ್ರವಾಹದ ಹೊಣೆಗಾರಿಕೆ ತೆರಿಗೆ ವಸೂಲಿಯಲ್ಲಿ ದಬ್ಬಾಳಿಕೆಯ ಕಾರಣದಿಂದ ದೊಡ್ಡ ಚಳುವಳಿಗಳು ನಡೆದಿದ್ದವು. ಮದವೇರಿದ ಅಧಿಕಾರಿಗಳಿಗೆ ಚಾಟಿ ಬೀಸಿದವರೇ ರೈತರು ಎಂದರು.
ರೈತ ಚಳಿವಳಿಗಳು ಗಾಂಧಿ ತತ್ವವನ್ನು ಸಾರಿದವು ಹಾಗೂ ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟವನ್ನೇ ಮಾಡಬೇಕಾಯಿತು. ಆದರೆ ಚಳುವಳಿಗಳನ್ನು ದಿಕ್ಕು ತಪ್ಪಿಸುವ ಪ್ರಯತ್ನಗಳು ನಡೆಯುತ್ತಿದ್ದವು.ಇದರ ನಡುವೆಯೂ ನಂಜುAಡಿಸ್ವಾಮಿ ಅವರು ತಾತ್ವಿಕತೆಯನ್ನು ಗಟ್ಟಿಯಾಗಿಸಿಕೊಂಡು, ರೈತಪರ ಹೋರಾಟವನ್ನು ಯಶಸ್ವಿಯಾಗಿ ಕಟ್ಟಿದ್ದರು ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಮೋಹನ ಹೆಚ್.ಎಸ್. ಮಾತನಾಡಿ, ಕೃಷಿ ಒಂದು ವಿಷಯಕ್ಕೆ ಸಂಬAಧಪಟ್ಟಿರುವುದಲ್ಲ, ಎಲ್ಲಾ ಕ್ಷೇತ್ರದ ಚಾಲಕ ಶಕ್ತಿಯೇ ಕೃಷಿ. ರೈತ ಉಳಿದರೆ ಮಾತ್ರ ದೇಶದ ಪ್ರಗತಿ. ರೈತ ಚಳುವಳಿಗಳು ಅನ್ನದಾತರ ಹಕ್ಕನ್ನು ಕಾಪಾಡಿಕೊಳ್ಳುವ ಒಂದು ಪ್ರಬಲ ಅಸ್ತç ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಎಂ.ಡಿ ನಂಜುAಡಸ್ವಾಮಿ ಅಧ್ಯಯನ ಪೀಠದ ನಿರ್ದೇಶಕರಾದ ಡಾ.ಮುನಿರಾಜು ಎಂ. ಹಾಗೂ ಸ್ನಾತಕೋತ್ತರ ಅರ್ಥಶಾಸ್ತç ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ರವೀAದ್ರ ಕುಮಾರ್ ಬಿ., ಹಿರಿಯ ಪ್ರಾಧ್ಯಾಪಕ ಪ್ರೊ. ವಿಲಾಸ್ ಎಂ.ಕದ್ರೋಲ್ಕರ್, ಡಾ.ನೀಲಕಂಠ ಎನ್. ಟಿ. ಮತ್ತಿತರರಿದ್ದರು.
(Visited 1 times, 1 visits today)



