ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಜೋನಿಗರಹಳ್ಳಿ ಗ್ರಾಮದಲ್ಲಿ. ಕ್ರಷರ್ ಲಾರಿಗಳನ್ನು ತಡೆದು ಮೂರು ಗಂಟೆಗಳ ಕಾಲ ಗ್ರಾಮದ ಜನರಿಂದ ಪ್ರತಿಭಟನೆ ಮಾಡಲಾಗಿತ್ತು.
ಜೋನಿಗರಹಳ್ಳಿ ಗ್ರಾಮದ ತೋವಿನಕೆರೆ ಹಾಗೂ ಕೊರಟಗೆರೆ ಹೋಗುವ ರಸ್ತೆಯ ಮೈನಿಂಗ್ ಅಥವಾ ಕ್ರಷರ್ ಗಣಿಗಾರಿಕೆ ನಡೆಯುವ ಗ್ರಾಮೀಣ ಪ್ರದೇಶಗಳಲ್ಲಿ ಹಗಲು ಹೊತ್ತಿನಲ್ಲಿ ಪ್ರತಿಭಟನೆ ನಡೆಸಿ, ಹಗಲು ಮತ್ತು ರಾತ್ರಿ ವೇಳೆ ಜೆಲ್ಲಿ ಮತ್ತು ಡಸ್ಟ್ ಲಾರಿಗಳನ್ನು ವೇಗವಾಗಿ ಓಡಿಸಲಾಗುತ್ತಿದೆ. ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದ ಜಲ್ಲಿ, ಎಂ ಸ್ಯಾಂಡ್, ಡಸ್ಟ್ ಮಾದರಿಯ ವಸ್ತುಗಳನ್ನು ಲಾರಿಗಳಲ್ಲಿ ಅತಿಯಾದ ಮತ್ತು ಅನಿಯಂತ್ರಿತ ಸಂಚಾರದಿAದಾಗಿ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದು, ಲಾರಿಗಳನ್ನು ತಡೆದು ನಿಲ್ಲಿಸಿ ಪ್ರತಿಭಟನೆ ನಡೆದಿಸಿದರು.
ಜಲ್ಲಿಯನ್ನು ಬೀಳಿಸಿಕೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿದ್ದ. ಲಾರಿಯನ್ನು ತಡೆದು ಪ್ರತಿಭಟನೆ ಮಾಡಿದರು. ಇದರಿಂದ ಇತ್ತೀಚೆಗೆ ಜುಂಜು ರಾಮನಹಳ್ಳಿ ಸಮೀಪ ಮೂರು ನಾಲ್ಕು ಅಪಘಾತಗಳಾಗಿದ್ದು ನಾಲ್ಕು ಸಾವುಗಳಾಗಿವೆ. ರಸ್ತೆಯ ಮಿತಿಮೀರಿ ಲಾರಿಗಳಿಗೆ ಜಲ್ಲಿ ಮತ್ತು ಲೋಡ್ ಮಾಡುತ್ತಾರೆ.
ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿದೆ ಬೇಕಾಬಿಟ್ಟಿ ಲಾರಿಗಳನ್ನು ಚಲಾಯಿಸುತ್ತಾರೆ. ಲಾರಿಗಳು ಓಡಾಡುವ ರಸ್ತೆ ಗುಂಡಿಗಳು ಹೆಚ್ಚಾಗಿದ್ದು ಲಾರಿಗಳು ಬರುವ ಮಾರ್ಗದಲ್ಲಿ ಲಾರಿಗಳು ಸಂಚರಿಸುವಾಗ ದೂಳು ಹೆಚ್ಚಾಗಿ ಬರುತ್ತಿದ್ದು. ರಸ್ತೆಯಲ್ಲಿ ಲಾರಿಗಳನ್ನು ನಿಲ್ಲಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
(Visited 1 times, 1 visits today)



