ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ, ದೊಡ್ಡಬೀರನಕೆರೆ ಮತ್ತು ಡಿ.ಬಿ.ಪಟ್ಟ ಡಣನಾಯಕನಪುರ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ತಾಲೂಕು ಆಡಳಿತ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ ಎಂದು ರಾಜ್ಯ ಕೃಷಿಕ ಸಮಾಜದ ಮಾಜಿ ಅದ್ಯಕ್ಷ ಮಂಜುನಾಥ್ ಗೌಡ ಆರೋಪಿಸಿ.
ಪಟ್ಟಣದ ತಾಲೂಕು ಕಚೇರಿ ಮುಂಭಾಗದಲ್ಲಿ ದೊಡ್ಡಬೀರನಕೆರೆ, ಡಿ.ಬಿ.ಹಟ್ಟಿ ಹಾಗೂ ಡಣನಾಯಕನಪುರ ಗ್ರಾಮದ ರೈತರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾಯಸಂದ್ರ ಹೋಬಳಿ, ದೊಡ್ಡವೀರನಕೆರೆ ಗ್ರಾಮದ ಸರ್ವೇ ನಂಬರ್ ೧೦೧,೧೦೪,೧೦೭, ಮತ್ತು ೧೦೮ ರಲ್ಲಿ ಸರ್ಕಾರಿ ಜಮೀನಿದ್ದು, ಈ ಜಮೀನುಗಳಲ್ಲಿ ಈಗಾಗಲೇ ತುರುವೇಕೆರೆ ತಾಲೂಕಿನ ರೈತರು ಹಾಗೂ ನಾಗಮಂಗಲ ತಾಲ್ಲೂಕಿನ ಒಡ್ಡರಹಳ್ಳಿಯ ನೂರಾರು ರೈತರು ಉಳುಮೆ ಮಾಡುತ್ತಿದ್ದು ತಾಲೂಕು ಕಚೇರಿಯಲ್ಲಿ ನಮೂನೆ ೫೦,೫೩,೫೭ ರಲ್ಲಿ ಅರ್ಜಿ ಮತ್ತು ಟಿ ಟಿ ಹಣ ಕಟ್ಟಿ ಕೃಷಿ ಮಾಡುತಿದ್ದಾರೆ. ಈ ಜಮೀನುಗಳಿಗೆ ಸಂಬAಧಪಟ್ಟAತೆ ಕೆಲವು ಮುಖಂಡರು ತಹಶೀಲ್ದರ್ ಹಾಗೂ ತಾಲೂಕು ಅಧಿಕಾರಿಗಳಿಗೆ ತಪುö್ಪ ಮಾಹಿತಿ ನೀಡಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ತಹಶೀಲ್ದರ್ ಸಹ ಸರಿಯಾಗಿ ಮಾಹಿತಿಯನ್ನು ಪಡೆಯದೇ ಅರಣ್ಯ ಇಲಾಖೆಯ ಜಮೀನು ಎಂದು ಹೇಳಿಕೆ ನೀಡುತ್ತಿರುವುದು ಖಂಡನೀಯ ಭಾನುವಾರ ತಹಶೀಲ್ದರ್ ಹಾಗೂ ಅರಣ್ಯ ಇಲಾಖೆಯವರು ಸ್ಥಳಕ್ಕೆ ಬೇಟಿ ನೀಡಿ ಉಳುಮೇ ಮಾಡುತ್ತಿರುವ ರೈತರ ಮೇಲೆ ದೌರ್ಜನ್ಯ ನೆಡೆಸಿ ರೈತರನ್ನು ಕೇಸ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ..ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಸಾಲ ಮಾಡಿ ಅಭಿವೃದ್ಧಿ ಮಾಡಿರುವ ರೈತರು ಹಾಗೂ ಅವರ ಕುಟುಂಬಗಳ ಜೀವನದ ಪ್ರಶ್ನೆಯಾಗಿದೆ. ಅರಣ್ಯ ಇಲಾಖೆ ಎಂಬುದಕ್ಕೆ ಯಾವುದೇ ಸರಿಯಾದ ದಾಖಲೆ ಇಲ್ಲ ಅದ್ದರಿಂದ ತಹಶೀಲ್ದರ್ ದಾಖಲೆಗಳನ್ನು ಪರಿಶೀಲನೆ ನೆಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಯಾರೋದ ವ್ಯಕ್ತಿಯ ಒತ್ತಡಕ್ಕೆ ಸಿಲುಕಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಎಚ್ಚರಿಸಿದರು.
ಡಿಎಸ್.ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ ತಾಲ್ಲೂಕಿನ ಮಾಯಸಂದ್ರ ಹೋಬಳಿ, ದೊಡ್ಡಬೀರನಕೆರೆ ಮತ್ತು ಡಿ.ಬಿ.ಪಟ್ಟ ಡಣನಾಯಕನಪುರ ಗ್ರಾಮಗಳ ರೈತರು ಉಳುಮೆ ಮಾಡಿರುವ ಭೂಮಿ ಅರಣ್ಯ ವಲಯ ಸೇರಿದೆ ಎಂದು ಹೇಳಲು ಯಾವುದೇ ಪುರಾವೆಗಳು ಇಲ್ಲ. ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸರ್ವೇ ನಡೆಸಿ ಅರಣ್ಯ ಇಲಾಖೆಗೆ ಸೇರಿದೆ ಎಂಬುದಕ್ಕೆ ಸರಿಯಾದ ಯವುದೇ ದಾಖಲೆಗಳು ಲಭ್ಯವಿಲ್ಲ. ಎಂದು ಸರ್ಕಾರಕ್ಕೆ ವರದಿ ನೀಡಿರುತ್ತಾರೆ. ಈ ಸಂಬAಧ ರೈತರನ್ನು ತಹಶೀಲ್ದರ್ ಒಕ್ಕಲೆಬ್ಬಿಸಲು ಕ್ರಮ ಸರಿಯಲ್ಲ ಈ ರೈತರ ಪರವಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆ ನಂತರ ಶಿರಸ್ತೆದಾರ್ ಅಂಬುಜಾಕ್ಷಿ ಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಣನಾಯಕನಪುರ ಗ್ರಾಮದ ಅಶೋಕ ಕುಮಾರ್. ಹನುಮಂತರಾಜು.ಗೋವಿAದಪ್ಪ.ದಾಸಪ್ಪ. ಅಭಿ. ನಾಗೇಶ್.ರಾಜಣ್ಣ. ಡಿ. ಬಿ.ಹಟ್ಟಿ ಗ್ರಾಮದ ಧನಂಜಯ ಶಿವರಾಜು ರಾಧಾಕೃಷ್ಣ. ರಮಾನಂದ ನಗರ ವಡ್ಡರಹಟ್ಟಿ ಗ್ರಾಮದ ಮೂರ್ತಿ ರಾಮಕೃಷ್ಣ ಗೀತಾ ಕಿರಣ್ ಕುಮಾರ್ ಚೆನ್ನಮ್ಮ ಸೇರಿದಂತೆ ಹಲವಾರು ಮಹಿಳಾ ರೈತರು ದಲಿತ ಸಂಘರ್ಷ ಸಮಿತಿಯ ಮುಂತಾದ ಪದಾಧಿಕಾರಿಗಳು, ಮುಂತಾದವರು ಪಾಲ್ಗೊಂಡಿದ್ದರು.

(Visited 1 times, 1 visits today)