ತುಮಕೂರು: ಜಿಲ್ಲಾಡಳಿತ ಹಾಗೂ ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ೭೫ ಲಕ್ಷ ರೂ. ವೆಚ್ಚದಲ್ಲಿ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿರುವ ಟೆನಿಸ್ ಕೋರ್ಟ್ ಹಾಗೂ ಆಟಗಾರರ ಕೊಠಡಿಯ ನವೀಕರಣಗೊಳಿಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತುಮಕೂರು ಬಹಳ ವೇಗವಾಗಿ ಬೆಳೆಯುತ್ತಿದೆ. ಇದರ ದೂರದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸಚಿವ ಪರಮೇಶ್ವರ ಅವರು ಹೇಳಿದರು.
೨೦೦೩ರಲ್ಲಿ ಎಟಿಪಿ ರ‍್ಯಾಂಕ್ ಟೆನಿಸ್ ಟೂರ್ನಿಮೆಂಟ್ ನಡೆಸಬೇಕು ಎಂಬ ಮನವಿ ಬಂದಿತ್ತು. ಆಗ ಈ ಜಾಗವನ್ನು ಗುರುತಿಸಿ, ಎರಡು ತಿಂಗಳಲ್ಲಿ ಟೆನಿಸ್ ಮೈದಾನ ನಿರ್ಮಿಸಲಾಯಿತು. ಅಂದಿನ ಟೂರ್ನಮೆಂಟ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಭಾಗವಹಿಸಿದರು. ತದನಂತರ ಇದರ ನಿರ್ವಹಣೆಯ ಹೊಣೆಯನ್ನು ತುಮಕೂರು ಟೆನಿಸ್ ಅಸೋಸಿಯೇಷನ್‌ಗೆ ವಹಿಸಲಾಯಿತು. ಕೆಲವು ದಿನ ನಿರ್ವಹಣೆ ಮಾಡಿದರು. ಸಂಪನ್ಮೂಲ ಕೊರತೆಯಿಂದ ಮುಂದುವರೆಯಲಿಲ್ಲ.
ನಾಲ್ಕೂ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಉದ್ಘಾಟನೆಯ ಸಂದರ್ಭದಲ್ಲಿ ಟೂರ್ನಮೆಂಟ್ ಆಯೋಜಿಸಲಾಗುವುದು. ರಾಜ್ಯದ ಕ್ರೀಡಾಕೂಟ ತುಮಕೂರಿನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬ್ಯಾಸ್ಕೆಟ್‌ಬಾಲ್, ಟೆನಿಸ್, ಜಿಮ್ನಾಸ್ಟಿಕ್ ಸೇರಿದಂತೆ ಎಲ್ಲ ರೀತಿಯ ಆಟಗಳು ನಡೆಯಲಿವೆ ಎಂದು ಅವರು ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು, ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಂ.ವೆAಕಟೇಶ್ವರಲು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಶೋಕ್ ಅವರು ಇದ್ದು.
(Visited 1 times, 1 visits today)