ಹುಳಿಯಾರು: ಹುಳಿಯಾರು ಸಮೀಪದ ಶಿಡ್ಲಕಟ್ಟೆ ಗ್ರಾಮದ ಪರಿಶಿಷ್ಟರ ಕಾಲೋನಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಮೂಲಕ 2023-24ನೇ ಸಾಲಿನಲ್ಲಿ ಮಂಜೂರಾದ ಸಿಮೆಂಟ್ ರಸ್ತೆ ಕಾಮಗಾರಿ, ಸರ್ಕಾ ರದ ಅಧಿಕೃತ ಅಂದಾಜು ಪತ್ರಿಕೆ ಗೆ ವಿರುದ್ಧವಾಗಿ ಕಳಪೆ ಹಾಗೂ ಅವೈ ಜ್ಞಾನಿಕವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಕೆಆರ್‌ಐಡಿಎಲ್ ಸಿರಾ ಉಪವಿಭಾಗದಿಂದ ತಯಾರಿಸಿದ ಅಂದಾಜು ಪತ್ರಿಕೆಯ ಪ್ರಕಾರ, ಪೋಚಕಟ್ಟೆ ಮುಖ್ಯ ರಸ್ತೆ ಇಂದ ಶಿಡ್ಲಕಟ್ಟೆ ಪರಿಶಿ ಷ್ಟರ ಕಾಲೋನಿಗೆ ಸಂಪರ್ಕಿಸುವ ಸುಮಾರು 342 ಮೀಟರ್ ಉದ್ದ, 4 ಮೀಟರ್ ಅಗಲ ಮತ್ತು 0.15 ಮೀಟರ್ ದಪ್ಪದ ಸಿಮೆಂಟ್ ರಸ್ತೆ ನಿರ್ಮಿಸಬೇಕಾಗಿದೆ. ಈ ಕಾಮಗಾರಿಯಲ್ಲಿ ನೆಲ ವನ್ನು ಸಡಿಲಗೊಳಿಸಿ ಸಮಮಾಡುವುದು, ಜಲ್ಲಿ ಮತ್ತು ಮಣ್ಣನ್ನು ಹಾಕಿ ರೋಲರ್ ಮೂಲಕ ಬಿಗಿ ಮಾಡುವುದು, ನಂತರ ವೆಟ್ ಮಿಕ್ಸ್ ಮ್ಯಾಕಡಂ ಹಾಕಿ ವೈಜ್ಞಾನಿಕವಾಗಿ ರಸ್ತೆ ನಿರ್ಮಿಸಬೇಕು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.
ಆದರೆ ಜಲ್ಲಿ ಹಾಕಬೇಕಾದ ಸ್ಥಳದಲ್ಲಿ ಜಲ್ಲಿಯನ್ನು ಬಳಸದೇ ಒ–Sಚಿಟಿಜ ಮತ್ತು ಅರ್ಧ ಇಂಚಿನ ಚೂರು ಕಲ್ಲುಗಳನ್ನು ಮಾತ್ರ ಹಾಕಲಾಗುತ್ತಿದೆ. ನೆಲವನ್ನು ಬಿಗಿ ಮಾಡಲು ಅಗತ್ಯವಿರುವ ರೋಲರ್ ಕಾರ್ಯಾಚರಣೆ ನಡೆಸದೇ, ಯಾವುದೇ ತಾಂತ್ರಿಕ ಕ್ರಮ ಪಾಲಿಸದೇ ಬೇಕಾಬಿಟ್ಟಿಯಾಗಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಕಳಪೆ ಕಾಮಗಾರಿಯ ಪರಿಣಾಮವಾಗಿ ರಸ್ತೆ ಬದಿಗಳು ಈಗಾಗಲೇ ಕಿತ್ತು ಹೋಗಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಈ ರಸ್ತೆ ದೀರ್ಘಕಾಲ ಉಳಿಯುವುದಿಲ್ಲ ಎಂಬ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ. ಇದರಿಂದ ಸರ್ಕಾರ ಮಂಜೂರು ಮಾಡಿದ ೨೫ ಲಕ್ಷಾಂತರ ರೂ. ಅನುದಾನವನ್ನು ದುರುಪಯೋಗಪಡಿಸಲಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಇನ್ನೂ ಗಂಭೀರ ವಿಷಯವೆಂದರೆ, ಜನವಸತಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುವ ಮೊದ ಲು ಮಾಡಬೇಕಾದ ಚರಂಡಿ ವ್ಯವಸ್ಥೆಯನ್ನೇ ನಿರ್ಮಿಸದೇ ನೇರವಾಗಿ ರಸ್ತೆ ಹಾಕಲಾಗಿದೆ. ಇದನ್ನು ಗ್ರಾಮಸ್ಥರು ಸಂಪೂರ್ಣ ಅವೈಜ್ಞಾನಿಕ ಕ್ರಮ ಎಂದು ಖಂಡಿಸಿದ್ದಾರೆ. ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಂತು, ಆ ನೀರು ಮನೆಗಳೊಳಗೆ ನುಗ್ಗುವ ಸಾಧ್ಯತೆ ಹೆಚ್ಚಿದ್ದು, ಸೊಳ್ಳೆ-ನೊಣಗಳ ಹೆಚ್ಚಳದಿಂದ ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಸೇರಿದಂತೆ ಸಾಂಕ್ರಮಿಕ ರೋಗಗಳು ಹರಡು ವ ಭೀತಿ ಎದುರಾಗಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಅಂದಾಜು ಪತ್ರಿಕೆಯಲ್ಲಿ ಜಲ್ಲಿ, ರೋಲರ್, ವೈಜ್ಞಾನಿಕ ವಿಧಾನ ಎಂದು ಎಲ್ಲವೂ ದಾಖಲೆಗಳಲ್ಲಿ ಇದೆ. ಆದರೆ ಸ್ಥಳದಲ್ಲಿ ಅದ್ಯಾವುದೂ ಕಾಣುತ್ತಿಲ್ಲ. ಇದು ಅಭಿವೃದ್ಧಿ ಕೆಲಸವಲ್ಲ, ಸರ್ಕಾರದ ಹಣ ಒಡೆಯುವ ಕೆಲಸ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಬ0ಧಪಟ್ಟ PWD ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ಪರಿಶೀಲನೆ ನಡೆಸಿ, ಅಂದಾಜು ಪತ್ರಿಕೆಯಂತೆ ವೈಜ್ಞಾನಿಕವಾಗಿ ಮರುಕಾಮಗಾರಿ ನಡೆಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

(Visited 1 times, 1 visits today)