ಮಧುಗಿರಿ: ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ (ರಿ) ೨೫ನೇ ವರ್ಷದ ರಜತ ಮಹೋತ್ಸವ, ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ ೬ ರಂದು ಅದ್ಧೂರಿಯಾಗಿ ಆಯೋಜಿಸಲು ಶರವೇಗದ ಸಿದ್ಧತೆಗಳು ನಡೆದಿವೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಕೆ. ಎಂ. ರಾಮಚಂದ್ರಪ್ಪ,”ಮಾಜಿ ಸಿಎಂ ಡಿ. ದೇವರಾಜ ಅರಸು ಅವರು ಹಾಲನೂರು ಸಮೀಕ್ಷಾ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದು ಹಿಂದುಳಿದ ವರ್ಗಗಳಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ನ್ಯಾಯ ಒದಗಿಸಿದ್ದರು. ಅವರ ಹಾದಿಯಲ್ಲೇ ಸಾಗುತ್ತಿರುವ ಸಿದ್ದರಾಮಯ್ಯನವರು ಈ ಸಮುದಾಯಗಳ ಆಶಾಕಿರಣವಾಗಿದ್ದಾರೆ. ಪ್ರಸ್ತುತ ಹಿಂದುಳಿದ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಡೆಯಲು ಕಾಂತರಾಜು ಹಾಗೂ ಮಧುಸೂದನ ನಾಯಕ್ ವರದಿಗಳನ್ನು ತಕ್ಷಣ ಅನುಷ್ಠಾನಗೊಳಿಸಬೇಕಿದೆ” ಎಂದು ಪ್ರತಿಪಾದಿಸಿದರು.
ಮಾಜಿ ಸದಸ್ಯರು ಹಿಂದುಳಿದ ವರ್ಗಗಳ ಆಯೋಗದ ಜೆ. ಡಿ. ಗೋಪಾಲ್ ಮಾತನಾಡಿ ಹಿಂದುಳಿದ ವರ್ಗಗಳ ಮೀಸಲಾತಿ ಹಕ್ಕುಗಳನ್ನು ಪಡೆದುಕೊಳ್ಳಲು ಹಾಗೂ ವರದಿಗಳ ಜಾರಿಗೆ ಒತ್ತಾಯಿಸಿ ಸೆಪ್ಟೆಂಬರ್ ೬ರ ರಜತ ಮಹೋತ್ಸವ ಸಮಾವೇಶವನ್ನು ಯಶಸ್ವಿಗೊಳಿಸಬೇಕು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಚಿತ್ರದುರ್ಗ ನಿರ್ದೇಶಕರಾದ ಬಿ. ಟಿ. ಜಗದೀಶ್ ಮಾತನಾಡಿ ಸಮಾಜದ ಧ್ವನಿ ಗಟ್ಟಿಗೊಳಿಸಲು ಬೆಂಗಳೂರಿನ ತ್ರಿಪುರವಾಸಿನಿ ಮೈದಾನದಲ್ಲಿ ನಡೆಯುವ ಈ ಬೃಹತ್ ಕಾರ್ಯಕ್ರಮಕ್ಕೆ ಅಹಿಂಧ ವರ್ಗಗಳ ಪ್ರತಿಯೊಬ್ಬ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು.
ಕುಂಬಾರ ಸಮುದಾಯದ ಮುಖಂಡ ವೆಂಕಟರಮಣಪ್ಪಎA. ಜಿ. ಮಾತನಾಡಿ ಹಾಲನೂರು ವರದಿ ಆಧರಿಸಿ ಹಿಂದುಳಿದ ವರ್ಗಗಳನ್ನು ಪ್ರವರ್ಗವಾರು ವಿಂಗಡಿಸಿ ಮೀಸಲಾತಿ ನೀಡಿದ್ದು ಡಿ. ದೇವರಾಜ ಅರಸು ಅವರು. ಸಿದ್ದರಾಮಯ್ಯ ಸರ್ಕಾರ ಸ್ವೀಕರಿಸಿರುವ ಸಾಮಾಜಿಕ-ಆರ್ಥಿಕ ಸಮೀಕ್ಷೆ ವರದಿಯ ಜಾರಿಗೆ ಎಲ್ಲರೂ ಶ್ರಮಿಸಬೇಕು.
ಸಿದ್ಧಾಪುರ ರಂಗಶಾಮಣ್ಣ ಮಾತನಾಡಿ ಸಚಿವ ಕೆ. ಎನ್. ರಾಜಣ್ಣ ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಈ ಬೃಹತ್ ಸಮಾವೇಶವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗುವುದು.
ನರಸಿಂಹಸ್ವಾಮಿ ಮುಂಬರುವ ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳು ಒಗ್ಗಟ್ಟು ಪ್ರದರ್ಶಿಸಿ ರಾಜಕೀಯ ಅಧಿಕಾರ ಹಿಡಿಯಲು ಸಂಘಟಿತರಾಗಬೇಕು.
ಸಭೆಯಲ್ಲಿ ಗೊಲ್ಲ ಸಮುದಾಯದ ನಾಯಕ ರಘು ಯಾದವ್, ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾಧ್ಯಕ್ಷ ಮೈಲಪ್ಪ, ಹಿಂದುಳಿದ ವರ್ಗಗಳ ಮುಖಂಡರಾದ, ಮರಿಯಣ್ಣ, ರಘುರಾಮ್ ಏಕೇಶ್, ದೇವರಾಜ್, ಕೆಂಪಣ್ಣ, ರಘುನಂದನ್, ರಂಗಸ್ವಾಮಿ, ಅಯ್ಯಪ್ಪ, ಸುರೇಶ್, ರಂಗಧಾಮಯ್ಯ, ರಾಮಾಂಜನಿ, ಮುಂತಾದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
(Visited 1 times, 1 visits today)



