ತುಮಕೂರು: ಸರ್ಕಾರಿ ಚಿತ್ರಕಲಾ ಕಾಲೇಜಿನಲ್ಲಿ ಅರ್ಹತೆಯೇ ಇಲ್ಲದಿದ್ದರೂ ತಪುö್ಪ ಮಾಹಿತಿ ನೀಡಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ಕಳೆದ ೩ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸಂತೋಷ್ ಕುಮಾರ್ ನಾಗರಾಳ ಮತ್ತು ರಂಗಸ್ವಾಮಿ ಆರ್ ಇಬ್ಬರ ವಂಚನೆ ಬಯಲಾಗಿದೆ.
ದಲಿತ ವಿದ್ಯಾರ್ಥಿ ಪರಿಷತ್, ತುಮಕೂರು ನೀಡಿದ ದೂರಿನ ಮೇರೆಗೆ ನಡೆದ ಕಾಲೇಜು ಶಿಕ್ಷಣ ಇಲಾಖೆ ನಡೆಸಿದ ತನಿಖೆಯಲ್ಲಿ ಈ ಅಕ್ರಮ ಬೆಳಕಿಗೆ ಬಂದಿದ್ದು, ಚಿತ್ರಕಲಾ ಇಲಾಖೆಯ ಜಂಟಿ ನಿರ್ದೇಶಕರು ಇಬ್ಬರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಿದ್ದಾರೆ.
ತನಿಖಾ ವರದಿಯ ಪ್ರಕಾರ, ಸಂತೋಷ್‌ಕುಮಾರ್ ನಾಗರಾಳ್ ಎಂಬಾತ ವಿಶ್ವವಿದ್ಯಾಲಯದ ಸರ್ವಿಸ್ ದಾಖಲೆ ತೋರಿಸಿ ಕಳೆದ ೩ ವರ್ಷಗಳಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸಿ ಇಲಾಖೆಗೆ ತಪ್ಪು ಮಾಹಿತಿ ನೀಡಿರುತ್ತಾರೆ ಎಂದು ವರದಿಯಲ್ಲಿ ದಾಖಲಾಗಿರುತ್ತದೆ.
ಇನ್ನು ರಂಗಸ್ವಾಮಿ. ಆರ್ ಎಂಬಾತ ಬಿವಿಎ/ಬಿಎಫ್‌ಎ ಪರೀಕ್ಷಾ ಮಂಡಳಿಯಲ್ಲಿ ನಿಯಮವನ್ನು ಉಲ್ಲಂಘಿಸಿ ಸದಸ್ಯತ್ವ ಪಡೆದಿದ್ದ. ತನ್ನ ರಕ್ತ ಸಂಬAಧಿಗಳೇ ವಿದ್ಯಾರ್ಥಿಗಳಾಗಿದ್ದರೂ ಅವರ ಪರೀಕ್ಷಾ ಪ್ರಶ್ನೆಪತ್ರಿಕೆ ತಯಾರಿಸುವುದು, ಮೌಲ್ಯಮಾಪನ ಮತ್ತು ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿ ಸ್ಪಷ್ಟ ಹಿತಾಸಕ್ತಿ ಸಂಘರ್ಷ ನಡೆಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಇಬ್ಬರ ಅಕ್ರಮ ನೇಮಕಾತಿಗೆ ಮತ್ತು ನಿಯಮ ಉಲ್ಲಂಘನೆಗೆ ಹಿಂದಿನ ಪ್ರಭಾರಿ ಪ್ರಾಂಶುಪಾಲರಾದ ಸಿ.ಸಿ. ಬಾರಕೇರ ಅವರ ಕೃಪಾ ಕಟಾಕ್ಷವೇ ಕಾರಣ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ. ಅರ್ಹ ಉದ್ಯೋಗ ವಂಚಿತ ಯುವಕರ ಅವಕಾಶವನ್ನು ಕಿತ್ತುಕೊಂಡು ಈ ರೀತಿ ಭ್ರಷ್ಟಾಚಾರಕ್ಕೆ ಪ್ರಾಂಶುಪಾಲರೇ ಕುಮ್ಮಕ್ಕು ನೀಡಿರುವುದು ಖಂಡನೀಯ.


ದಲಿತ ವಿದ್ಯಾರ್ಥಿ ಪರಿಷತ್ ನೀಡಿದ ದೂರನ್ನು ಮಾನ್ಯ ಮಾಡಿರುವ ಕಾಲೇಜು ಶಿಕ್ಷಣ ಇಲಾಖೆ, ಇಬ್ಬರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಲು ಆದೇಶಿಸಿದೆ. ಉದ್ಯೋಗ ವಂಚಿತ ಯುವಕರ ಪರವಾಗಿ ಈ ರೀತಿಯ ಪ್ರಕರಣಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಿರುವ ದಲಿತ ವಿದ್ಯಾರ್ಥಿ ಪರಿಷತ್‌ಗೆ ಈ ಪ್ರಕರಣದಲ್ಲಿ ಜಯ ಸಿಕ್ಕಂತಾಗಿದೆ.
ಭ್ರಷ್ಟಾಚಾರಕ್ಕೆ ಪ್ರಾಂಶುಪಾಲರ ಕುಮ್ಮಕ್ಕು: ಕ್ರಮಕ್ಕೆ ಡಿವಿಪಿ ಆಗ್ರಹ: ಶಿಕ್ಷಣ ಕ್ಷೇತ್ರದಲ್ಲಿಯೇ ಭ್ರಷ್ಟಚಾರ ತಾಂಡವವಾಡುತ್ತಿದೆ ಎಂಬುದಕ್ಕೆ ತುಮಕೂರು ನಗರದ ಸರ್ಕಾರಿ ಚಿತ್ರಕಲಾ ಕಾಲೇಜು ನೈಜ ಸಾಕ್ಷಿ. ಇಲ್ಲಿ ಕಳೆದ ಐದಾರು ವರ್ಷಗಳಿಂದಲೂ ಅಕ್ರಮ ನೇಮಕ ನೆಡೆದಿರುವುದು ದಾಖಲೆಯಲ್ಲಿ ಕಾಣಬಹುದು. ಇದಕ್ಕೆಲ್ಲಾ ಕಾರಣ ಈ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸಿ.ಸಿ.ಬಾರಕೇರ ಅವರು, ಪ್ರಾಂಶುಪಾಲರ ಹಂತದಲ್ಲಿ ಚಿತ್ರಕಲೆ ವಿಷಯಕ್ಕೆ ಸಂಬAಧಪಡದ ಅತಿಥಿ ಉಪನ್ಯಾಸಕನ್ನಾಗಿ ನೇಮಕ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಕಲಿಯುವ ವಿದ್ಯಾರ್ಥಿಗಳಿಗೆ ಇಂತಹ ಶಿಕ್ಷಕರಿಂದ ಇನ್ನೆಂತಹ ಶಿಕ್ಷಣ ಸಿಗಬಹುದು. ಶಿಕ್ಷಣ ಕೊಡುವವರೇ ಭ್ರಷ್ಟಾಚಾರ, ಅಕ್ರಮಕ್ಕೆ ನಿಂತರೆ ಮಕ್ಕಳು ಕಲಿಯುವುದಾದರೂ ಎಂತಹದ್ದನ್ನ ಎಂಬುದೇ ಪ್ರಶ್ನೆ. ಹಾಗಾಗಿ ಕಾಲೇಜು ಶಿಕ್ಷಣ ಇಲಾಖೆ ಕೂಡಲೇ ತಪ್ಪು ಯಾರೇ ಮಾಡಿರಲಿ ಯಾವುದೇ ಮುಲಾಜಿಗೂ ಒಳಗಾಗದೆ ಕಾನೂನು ನಿಯಮದಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಆಗ್ರಹಿಸುತ್ತದೆ.

(Visited 1 times, 1 visits today)