ತುಮಕೂರು: ಜಿಲ್ಲೆಯ ಶಿರಾ, ಮಧುಗಿರಿ, ಕೊರಟಗೆರೆ ಮತ್ತು ತುಮಕೂರು ಸೇರಿದಂತೆ, ನಾಲ್ಕು ತಾಲ್ಲೂಕುಗಳನ್ನು ಒಳಗೊಂಡ ಪ್ರದೇಶದಲ್ಲಿ ತುಮಕೂರು ಏರ್ ಪೋರ್ಟ್ ನಿರ್ಮಾಣ ಮಾಡಲು ಕಳೆದ ಕೆಲವಾರು ವರ್ಷಗಳಿಂದ ಸುದ್ಧಿಯಲ್ಲಿದೆ.
ತುಮಕೂರಿನ ಮಾಜಿ ಲೋಕಸಭಾ ಸದಸ್ಯರಾದ ಜಿ.ಎಸ್.ಬಸವರಾಜ್ ಅವರ ಅವಧಿಯಲ್ಲಿ ಅಡಿಪಾಯ ಹಾಕಿದ್ದು, ಶಿರಾ ಶಾಸಕರು ಹಾಗೂ ದೆಹಲಿ ವಿಶೇಷ ಪ್ರತಿನಿಧಿಯವರಾದ ಟಿ.ಬಿ.ಜಯಚಂದ್ರರವರು ಮತ್ತು ಎಲ್ಲಾ ಪಕ್ಷಗಳ ಉತ್ತರ ಕರ್ನಾಟಕದ ಸುಮಾರು ೩೭ಕ್ಕೂ ಹೆಚ್ಚು ಶಾಸಕರು ನಿರಂತರವಾಗಿ ಕಡತಗಳ ಹಂತದಲ್ಲಿ ಲಾಭಿ ಮಾಡುತ್ತಿದ್ದಾರೆ.
ಅರವಿಂದಬೆಲ್ಲದ್‌ರವರ ಕಳಕಳಿ ನಿಜಕ್ಕೂ ಮೆಚ್ಚುವಂತದ್ದು. ಕರ್ನಾಟಕ ಬಿಜೆಪಿ ರಾಜ್ಯದ್ಯಾಕ್ಷರಾದ ಬಿ.ಎಸ್. ವಿಜಯೇಂದ್ರರವರ ನಿಲುವು ಸ್ವಾಗಾತಾರ್ಹವಾಗಿದೆ. ಕೇಂದ್ರ ಸರ್ಕಾರದ ನಿಲುವು ಸಹ ಪೂರಕವಾಗಿದೆ.
ಇಲ್ಲಿ ಸರ್ಕಾರಿ ಭೂಮಿಯೇ ೨೦೦೦ ಕ್ಕೂ ಹೆಚ್ಚು ಎಕರೆ ದೊರೆಯಲಿದೆಯಂತೆ, ಕೇಂದ್ರ ಸರ್ಕಾರದ ಮಿತ್ರ ಯೋಜನೆಯಡಿಯಲ್ಲಿ ಮೆಗಾ ಟೆಕ್ಸ್ಟೈಲ್ಸ್ ಪಾರ್ಕ್ಗೆ ಪ್ರಸ್ತಾವನೆ ಸಲ್ಲಿಸುವಾಗ ೧೦೦೦ ಎಕರೆಗೂ ಹೆಚ್ಚು ಸರ್ಕಾರಿ ಜಮೀನಿನನ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪಾರ್ಕ್ನ್ನು ಕೇಂದ್ರ ಸರ್ಕಾರ ಕಲ್ಬುರ್ಗಿಗೆ ಮಂಜೂರು ಮಾಡಲಾಯಿತು.
ಕೇಂದ್ರ ಸರ್ಕಾರ ನ್ಯಾಷನಲ್ ಮ್ಯಾನುಫ್ಯಾಕ್ಚುರಿಂಗ್ ಇಂಡಸ್ಟಿçಯಲ್ ಝೋನ್ (ನಿಮ್ಜ್) ಮಾರ್ಗದರ್ಶಿ ಸೂತ್ರದಲಿ,್ಲ ಎರ್ ಕಾರ್ಗೋ ಮತ್ತು ವಿಮಾನ ನಿಲ್ಧಾಣ ಮಾಡುವುದಾಗಿ ಯುಪಿಎ ಸರ್ಕಾರ ಘೋಷಣೆ ಮಾಡಿತ್ತು. ದಕ್ಷಿಣ ಭಾರತಕ್ಕೆ ಒಂದೆ ಒಂದು ನಿಮ್ಜ್ ಮಂಜೂರಾಗಿರುವುದು ಇದೇ ಪ್ರದೇಶದಲ್ಲಿ. ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್‌ರವರು ಅದೇ ಕಾರಣಕ್ಕೆ ‘ತುಮಕೂರಿನಲ್ಲಿ ಸಿಲಿಕಾನ್ ಮಾದರಿ ಸಿಟಿ’ ನಿರ್ಮಾಣ ಮಾಡಿ ಎಂದು, ರಾಜ್ಯ ಸರ್ಕಾರದ ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್‌ರವರಿಗೆ ಬಹಿರಂಗ ಸಭೆಯಲ್ಲಿಯೇ ಸಲಹೆ ನೀಡಿದ್ದರು.
ಚನ್ನೆöÊ-ಬೆಂಗಳೂರು-ಚಿತ್ರದುರ್ಗ ಇಂಡಸ್ಟಿçಯಲ್ ಕಾರಿಡಾರ್ ಮತ್ತು ಬೆಂಗಳೂರು – ಮುಂಬೈ ಎಕನಾಮಿಕ್ ಕಾರಿಡಾರ್‌ನಲ್ಲಿ ಬರುವ ಈ ಪ್ರದೇಶ ಬಹಳ ಸೂಕ್ತವಾಗಿದೆ. ಮುರುಗೇಶ್ ನಿರಾಣಿಯವರು ಬೃಹತ್ ಕೈಗಾರಿಕಾ ಸಚಿವರಾಗಿದ್ದ ಅವಧಿಯಲ್ಲಿ ಇನ್ನೇನು ಅಧಿಕೃತ ಘೋಷಣೆಯಾಗಲಿದೆ ಎನ್ನುವ ಮಟ್ಟಕ್ಕೂ ಹೋಗಿತ್ತು. ಇರುವ ಬೆಂಗಳೂರನ್ನು ‘ಸ್ವಚ್ಚ ಸುಂದರ ಹಸಿರು ನಗರ’ ಮಾಡಿ, ಮುಂದಿನ ಎಲ್ಲಾ ಬೃಹತ್ ಯೋಜನೆಗಳನ್ನು ತುಮಕೂರಿನಿಂದ ಆರಂಭಿಸಿ, ರಾಜ್ಯದ ಉದ್ದಗ¯ಕ್ಕೂ ವಿಸ್ಥರಣೆ ಮಾಡುವುದು ‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ’ ದ ಪ್ರತಿಪಾದನೆ.
‘ಗ್ರೇಟರ್ ತುಮಕೂರು’ ಮಾಡಲು ಮೊದಲು ಆಗಬೇಕಾಗಿರುವುದು ೨ ನೇ ಅಂತರರಾಷ್ಟಿçÃಯ ವಿಮಾನ ನಿಲ್ಧಾಣ, ಮುಂದಿನ ಹತ್ತು-ಹದಿನೈದು ವರ್ಷದಲ್ಲಿ ಬೆಂಗಳೂರಿಗೆ ೩ ಅಂತರರಾಷ್ಟಿçÃಯ ವಿಮಾನ ನಿಲ್ಧಾಣಗಳ ಅಗತ್ಯವಿರಲಿದೆ. ಈ ಹಿನ್ನಲೆಯಲ್ಲಿ ತುಮಕೂರು ಏರ್ ಪೋರ್ಟ್ ಜಮೀನು ಗುರುತಿಸುವುದು ‘ಅಭಿವೃದ್ಧಿ ಪರ ಸರ್ಕಾರದ’ ನಿಲುವು ಆಗಿರಬೇಕು ಎಂದು ರಾಜ್ಯ ಮಟ್ಟದ ದಿಶಾ ಸಮಿತಿ ಮಾಜಿ ಸದಸ್ಯ ಕುಂದರನಹಳ್ಳಿ ರಮೇಶ್ ತಿಳಿಸಿದ್ದಾರೆ.

(Visited 1 times, 1 visits today)