ತುರುವೇಕೆರೆ: ಮಕ್ಕಳನ್ನು ಕೇವಲ ಸ್ಪರ್ಧೆಗಷ್ಟೇ ಸೀಮಿತಗೊಳಿಸದೆ ಮುಂದಿನ ಪೀಳಿಗೆಗೆ ಹಿಂದಿನ ಸಂಸ್ಕಾರಗಳು, ಪರಂಪರೆ ಹಾಗೂ ಇತಿಹಾಸದ ಬಗ್ಗೆ ಅರಿವು ಮೂಡಿಸುವಂತಹ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಸಾಹಿತಿ ತುರುವೇಕೆರೆ ಪ್ರಸಾದ್ ಹೇಳಿದರು.
ಪಟ್ಟಣದ ಗ್ಲೋಬಲ್ ಎಂಬಸ್ಸಿ ಶಾಲಾ ಆವರಣದಲ್ಲಿ ರೋಟರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಛದ್ಮವೇಷಣ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಒಂದು ಮಗು ಒಬ್ಬ ವ್ಯಕ್ತಿಯ ವೇಷಭೂಷಣ ತೊಟ್ಟ ಸಂಧರ್ಭದಲ್ಲಿ ಆ ವ್ಯಕ್ತಿಯ ಬಗ್ಗೆ ಅಂತಹ ಮಕ್ಕಳಿಗೆ ಪ್ರೇರಣೆಯಾಗುವಂತಿರಬೇಕು. ಹೊಸ ಹೊಸ ಪಾತ್ರಗಳನ್ನು ಹುಡುಕಿ ಮಕ್ಕಳನ್ನು ತಯಾರಿ ಮಾಡುವ ಸಂಧರ್ಭದಲ್ಲಿ ನಮ್ಮಲ್ಲೊಬ್ಬ ಆದರ್ಶ ಪುರುಷನಿರಬೇಕು. ಗಾಂಧಿ, ಬುದ್ದ, ನೆಹರು, ವಿವೇಕಾನಂದ, ಝಾನ್ಸಿ ಯಂತ ಮಹಾನ್ ಹೋರಾಟಗಾರರ ವೇಷ ತೊಡಿಸಿದ ತಾಯಂದಿರು ಅವರ ಬಗ್ಗೆ ಅರಿವು ಮೂಡಿಸುವ ಮೂಲಕ ಮಕ್ಕಳಿಗೆ ಸ್ಪೂರ್ತಿ ತುಂಬಬೇಕು. ಅಲ್ಲದೆ ಗಾಂಧಿ ಬುದ್ದ ಹೊರತುಪಡಿಸಿ ಎಲೆಮರೆ ಕಾಯಿಯಂತೆ ಹೋರಾಡಿದ ಅದೆಷ್ಟೋ ಸಾಧಕರಿದ್ದು ಅಂತಹವರನ್ನು ಸಹಾ ಗುರ್ತಿಸುವಂತಹ ಕೆಲಸವಾಗಬೇಕೆಂದರು.
ಗ್ಲೋಬಲ್ ಎಂಬಸ್ಸಿ ಶಾಲೆಯ ಮುಖ್ಯಸ್ಥರಾದ ಗಂಗಾಧರ ದೇವರಮನೆ ಮಾತನಾಡಿ ರೋಟರಿ ಸಂಘಸAಸ್ಥೆಗಳು ಛದ್ಮವೇಷದಂತಹ ಹತ್ತು ಹಲವು ಹೊಸ ಹೊಸ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇಂದಿನ ಮಕ್ಕಳಲ್ಲಿ ಸ್ಪೂರ್ತಿ ತುಂಬುವAತಹ ಕೆಲಸವನ್ನು ರೋಟರಿ ಸಂಸ್ಥೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ರೋಟರಿ ಕ್ಲಬ್ ಅಧ್ಯಕ್ಷರಾದ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಬಿಎಮ್ ಎಸ್ ಉಮೇಶ್, ಕಾರ್ಯದರ್ಶಿ ಉಪೇಂದ್ರ ಕುಮಾರ್, ಖಜಾಂಚಿ ಸುನಿಲ್, ಟ್ರಸ್ಟ್ ಅಧ್ಯಕ್ಷ ಸಾ.ಶಿ.ದೇವರಾಜು, ಸದಸ್ಯರಾದ ಪ್ರಸನ್ನಕುಮಾರ್, ಜಿಲನ್ ಬೇಗ್, ರಾಮಚಂದ್ರು, ಗಂಗಾಧರಯ್ಯ, ಶಿವರಾಜು, ಅಶ್ವಿನ್, ದಯಾನಂದ್ ಪ್ರಾಯೋಜಕರಾದ ಲೋಹಿತ್‌ಆನೇಕೆರೆ ಮತ್ತು ಭಾನುಪ್ರಕಾಶ್, ಮುಖ್ಯ ಶಿಕ್ಷಕಿ ಶರಿತದೇವರಮನೆ, ಮೇಘಸಂತೋಷ್ ಸೇರಿದಂತೆ ಕ್ಲಬ್ ಸದಸ್ಯರು ಮತ್ತು ಪೋಷಕರು ಹಾಗೂ ವೇಷಭೂಷಣ ತೊಟ್ಟ ಮಕ್ಕಳು ಪಾಲ್ಗೊಂಡಿದ್ದರು. ತೀರ್ಪುಗಾರರಾಗಿ ಲೋಕೇಶ್, ಜಯಶೀಲಾ, ನೇತ್ರಾ ಪಾಲ್ಗೊಂಡಿದ್ದರು.
(Visited 1 times, 1 visits today)



