
ಹುಳಿಯಾರು: ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆ ಗ್ರಾಮದಲ್ಲಿನ ನೂತನವಾಗಿ ನಿರ್ಮಿಸಲಾಗಿರುವ ಬೋರನಕಣಿವೆ ಸರ್ಕಾರಿ ಐಟಿಐ ಕಾಲೇಜಿನ ಉದ್ಘಾಟನೆಗೊಂಡು ಇನ್ನೂ ಒಂದು ತಿಂಗಳು ಸಹ ಕಳೆದಿಲ್ಲ. ಅಷ್ಟರಲ್ಲೇ ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕಾಲೇಜಿನ ಕಾಂಪೌAಡ್ ಗೋಡೆ ಬೇಸ್ಮೆಂಟ್ ಸಮೇತ ಕುಸಿದು ಬಿದ್ದು, ಕಳಪೆ ಕಾಮಗಾರಿಯ ಮುಖವಾಡ ಬಯಲಾಗಿದೆ.
ಮಳೆಯ ಅಬ್ಬರಕ್ಕೆ ಧರೆಗುರುಳಿದ ಗೋಡೆ: ಮಂಗಳವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕಾಲೇಜು ಆವರಣದ ಸುಮಾರು ೪೦ ರಿಂದ ೫೦ ಅಡಿ ಉದ್ದದ ಕಾಂಪೌAಡ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಕಾಲೇಜಿನ ಕಟ್ಟಡವು ತಗ್ಗು ಪ್ರದೇಶದಲ್ಲಿ ನೆಲೆಗೊಂಡಿರುವುದರಿAದ, ಮೇಲ್ಭಾಗದಿಂದ ಹರಿದು ಬಂದ ಮಳೆ ನೀರು ನೇರವಾಗಿ ಕಾಂಪೌAಡ್‌ಗೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಗೋಡೆಯು ಕುಸಿದು ಬಿದ್ದು, ಅಲ್ಲಿದ್ದ ಬೀದಿ ದೀಪದ ಕಂಬವೊAದು ಕೂಡ ಧರೆಗುರುಳಿ ಸಂಪೂರ್ಣ ಜಖಂ ಆಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಅವೈಜ್ಞಾನಿಕ ಕಾಮಗಾರಿಯೇ ದುರಂತಕ್ಕೆ ಕಾರಣ: ಕಾಲೇಜು ಇರುವ ಪ್ರದೇಶವು ತಗ್ಗು ಪ್ರದೇಶದಲ್ಲಿರುವುದರಿಂದ, ಮುನ್ನೆಚ್ಚರಿಕೆ ಕ್ರಮವಾಗಿ ಕಾಂಪೌAಡ್‌ಗೆ ಕನಿಷ್ಠ ಐದಾರು ಅಡಿಗಳಷ್ಟು ಎತ್ತರದ ಭದ್ರವಾದ ಬೇಸ್ಮೆಂಟ್ ನಿರ್ಮಿಸಬೇಕಿತ್ತು. ಆದರೆ ಗುತ್ತಿಗೆದಾರರು ಕೇವಲ ಒಂದೆರಡು ಅಡಿ ಮಾತ್ರ ಬೇಸ್ಮೆಂಟ್ ನಿರ್ಮಿಸಿ ಕಾಂಪೌAಡ್ ಕಟ್ಟಿರುವುದು ಈ ಅವಘಡಕ್ಕೆ ಪ್ರಮುಖ ಕಾರಣವಾಗಿದೆ. ಮೇಲಿನಿಂದ ರಭಸವಾಗಿ ಹರಿದು ಬಂದ ನೀರಿಗೆ ಬೇಸ್ಮೆಂಟ್ ಬಳಿ ಕೊರಕಲು ಉಂಟಾಗಿ, ಸಂಪೂರ್ಣ ಗೋಡೆ ಕುಸಿದು ಬಿದ್ದಿದೆ ಎಂದು ಚಿತ್ರಗಳು ಸಾಕ್ಷು÷್ಯ ನುಡಿಯುತ್ತವೆ.
ಮರುಬಳಕೆಗೆ ಸಿಗುವ ಮೆಟೀರಿಯಲ್ಸ್: ಈ ಕಾಂಪೌAಡ್ ನಿರ್ಮಾಣಕ್ಕೆ ಸೈಜ್‌ಗಲ್ಲುಗಳನ್ನು ಬಳಸಿ ಬೇಸ್ಮೆಂಟ್ ಮಾಡಲಾಗಿದ್ದು, ಗೋಡೆಯ ಮೇಲ್ಭಾಗವನ್ನು ಸಿಮೆಂಟ್ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಗೋಡೆ ಕುಸಿದು ಬಿದ್ದಿದ್ದರೂ ಅದರಲ್ಲಿ ಬಳಸಿರುವ ಬಹುತೇಕ ಮೆಟೀರಿಯಲ್ಸ್ ಹಾಳಾಗದೆ ಮರುಬಳಕೆಗೆ ಬರುವಂತಿದೆ. ಹೀಗಾಗಿ, ಗುತ್ತಿಗೆದಾರರು ಪುನಃ ಕಾಂಪೌAಡ್ ನಿರ್ಮಿಸಿಕೊಟ್ಟರೂ ಹೆಚ್ಚಿನ ಆರ್ಥಿಕ ನಷ್ಟವೇನು ಉಂಟಾಗುವುದಿಲ್ಲ.
ಸAಬAಧಪಟ್ಟ ಅಧಿಕಾರಿಗಳೇ ಎಚ್ಚೆತ್ತುಕೊಳ್ಳಬೇಕು: ಕೂಡಲೇ ಸಂಬAಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಗುತ್ತಿಗೆದಾರರಿಗೆ ಕೇವಲ ತಾತ್ಕಾಲಿಕ ಕೆಲಸ ಮಾಡದೆ ಮುಂದಿನ ದಿನಗಳಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ಕನಿಷ್ಠ ೫-೬ ಅಡಿ ಎತ್ತರದ ಗಟ್ಟಿಯಾದ ಬೇಸ್ಮೆಂಟ್ ನಿರ್ಮಿಸಿ, ಗುಣಮಟ್ಟದ ಕಾಂಪೌAಡ್ ಅನ್ನು ಮರುಸ್ಥಾಪಿಸಲು ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.



