ತುಮಕೂರು: ನಾವು ವಾಸಿಸುತ್ತಿರುವ ಈ ಸುಂದರ ಭೂಮಿ ಇಂದು ಅನೇಕ ಗಂಭೀರ ಪರಿಸರ ಸವಾಲುಗಳನ್ನು ಎದುರಿಸುತ್ತಿದೆ. ಜಾಗತಿಕ ತಾಪಮಾನ ಏರಿಕೆ, ಮಳೆಯ ಕೊರತೆ, ವಾಯು ಮತ್ತು ಜಲ ಮಾಲಿನ್ಯ, ಕಾಡುಗಳ ನಾಶ ಮತ್ತು ಪ್ಲಾಸ್ಟಿಕ್ ಹಾವಳಿ ನಮ್ಮ ಬದುಕನ್ನೇ ಬುಡಮೇಲು ಮಾಡುತ್ತಿವೆ. ಋತುಚಕ್ರಗಳು ಬದಲಾಗುತ್ತಿವೆ, ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪ್ರಕೃತಿಯ ಅ ಸಮತೋಲನದಿಂದಾಗಿ ಪ್ರವಾಹ, ಬರಗಾಲದಂತಹ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿವೆ. ಪರಿಸರ ಸಂರಕ್ಷಣೆ ಜೀವನ ಶೈಲಿಯಾಗಲಿ ಎಂದು ಸಂಪನ್ಮೂಲ ವ್ಯಕ್ತಿಗಳಾದ ಡಾ.ಕೆ ಟಿ ತಿಪ್ಪೇಸ್ವಾಮಿ ಅವರು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ರಾಷ್ಟಿçÃಯ ಸೇವಾ ಯೋಜನಾ ಕೋಶ, ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಸಂಪನ್ಮೂಲ ಅಭಿವೃದ್ಧಿ ಮತ್ತು ಪರಿಸರ ಪುನ:ಶ್ವೇತನ ಸಂಸ್ಥೆ, ಧಾನ್ಯ ಸಂಸ್ಥೆ ಹಾಗೂ ವೃಕ್ಷ ಮಿತ್ರ ಸಂಘಟನೆಯ ಸಹಯೋಗದೊಂದಿಗೆ ದೇವರಾಯನದುರ್ಗದಲ್ಲಿ ಆ.೨೪ ಸೋಮವಾರ ದಂದು ಹಮ್ಮಿಕೊಂಡಿದ್ದ ಜಯಮಂಗಲಿ ನದಿ ನಡಿಗೆ ಮತ್ತು ಪರಿಸರ ಜಾಗೃತಿ ಶಿಬಿರದ ೨ನೆ ದಿನದ ಕಾರ್ಯಕ್ರಮದಲ್ಲಿ ಪರಿಸರ ಸವಾಲುಗಳು, ಜನರ ಸ್ಪಂದನೆ ಕುರಿತು ಉಪನ್ಯಾಸ ನೀಡಿದರು.
ಪರಿಸರ ಸಂರಕ್ಷಣೆ ಎಂಬುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. “ಮರ ಬೆಳೆಸಿ, ಮಳೆ ಪಡೆಯಿರಿ” ಎಂಬ ಮಾತು ಕೇವಲ ಘೋಷಣೆಯಾಗಬಾರದು, ನಮ್ಮ ಜೀವನಶೈಲಿಯಾಗಬೇಕು. ದಿನನಿತ್ಯದ ಜೀವನದಲ್ಲಿ ನೀರು ಮತ್ತು ವಿದ್ಯುತ್ ಉಳಿತಾಯ ಮಾಡುವುದು ಕೂಡ ಪ್ರಕೃತಿಗೆ ನಾವು ನೀಡುವ ದೊಡ್ಡ ಕೊಡುಗೆಯಾಗಿದೆ. ನಾವು ಭೂಮಿಯನ್ನು ನಮ್ಮ ಪೂರ್ವಿಕರಿಂದ ಎರವಲು ಪಡೆದಿದ್ದೇವೆಯೇ ಹೊರತು, ನಮ್ಮ ಸ್ವತ್ತಾಗಿ ಉಳಿಸಿಕೊಂಡಿಲ್ಲ.” ಮುಂದಿನ ಪೀಳಿಗೆಗೆ ಹಸಿರು ಮತ್ತು ಸ್ವಚ್ಛ ಭೂಮಿಯನ್ನು ಬಿಟ್ಟುಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ. ಎಂದರು.
ಸೋಮವಾರ ಬೆಳಿಗ್ಗೆ ೬.೩೦ ಗಂಟೆಗೆ ಶಿಬಿರಾರ್ಥಿಗಳಿಂದ ರಾಷ್ಟಿçÃಯ ಸೇವಾ ಯೋಜನೆಯ ಧ್ವಜಾರೋಹಣ ನೆರವೇರಿಸುವುದರೊಂದಿಗೆ ದಿನದ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಇದರ ಬೆನ್ನಲ್ಲೇ ಬೆಳಿಗ್ಗೆ ೭.೦೦ ರಿಂದ ಮಧ್ಯಾಹ್ನ ೧೨.೧೫ ಗಂಟೆಯವರೆಗೆ ಶ್ರಮದಾನ ಹಮ್ಮಿಕೊಂಡಿದ್ದರು. ಶಿಬಿರಾರ್ಥಿಗಳು ಬೋಂಡೆ ಕಲ್ಯಾಣಿ ಹಾಗೂ ಜಯಮಂಗಲಿ ನದಿ ಮೂಲದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಊಟದ ವಿರಾಮದ ಬಳಿಕ ಮಧ್ಯಾಹ್ನ ೨.೩೦ ರಿಂದ ೩.೩೦ ಗಂಟೆಯವರೆಗೆ ಬೆಂಗಳೂರಿನ ಡಾ. ಸಿ ಜಿ ಲಕ್ಷಿ÷್ಮÃಪತಿ ಅವರು “ಮನೋಭಾವದ ಬದಲಾವಣೆಯೇ ರಾ.ಸೇ.ಯೋ.” ಎಂಬ ವಿಷಯದ ಕುರಿತು ಮಾತನಾಡಿದರು. ಸಂಜೆ ೩.೩೦ ರಿಂದ ೪.೩೦ ಗಂಟೆಯವರೆಗೆ ಗಾಂಧಿ ಸಹಜ ಬೇಸಾಯ ಆಶ್ರಮದ ಡಾ. ಮಂಜುನಾಥ್ ಎಚ್ ಅವರು “ಕೃಷಿ ವೈವಿಧ್ಯತೆ ಮತ್ತು ಕೃಷಿ ಸಂಸ್ಕöÈತಿ” ಕುರಿತು ಉಪನ್ಯಾಸ ಮಂಡಿಸಿದರು.
ಸAಜೆ ೪.೩೦ ರಿಂದ ೫.೩೦ ಗಂಟೆಯ ಅವಧಿಯಲ್ಲಿ ಡಾ. ಸಿ ಜಿ ಲಕ್ಷಿ÷್ಮÃಪತಿ ಅವರು ಶಿಬಿರಾರ್ಥಿಗಳೊಂದಿಗೆ “ರಾಷ್ಟಿçÃಯ ಸೇವೆ” ಕುರಿತು ಸಂವಾದ ನಡೆಸಿದರು. ಸಂಜೆ ೫.೩೦ ರಿಂದ ೭.೩೦ ಗಂಟೆಯವರೆಗೆ ಕೌತಾಮಾರನಹಳ್ಳಿಯ ಶ್ರೀ ಕಾಂತರಾಜು ಅವರ ನೇತೃತ್ವದಲ್ಲಿ ಭಾವಗೀತೆಗಳ ತರಬೇತಿ ಕಾರ್ಯಕ್ರಮ ಜರುಗಿತು.
ರಾಷ್ಟಿçÃಯ ಸೇವಾ ಯೋಜನೆಯ ಸಂಯೋಜಕರಾದ ಡಾ. ನಾಗಭೂಷಣ ಬಗ್ಗನಡು, ತುಮಕೂರು ವಿವಿ ಸ್ನಾತಕೋತ್ತರ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಪ್ರೊ. ಕೆ. ಜಿ. ಪರಶುರಾಮ್ ಇದ್ದರು.
(Visited 1 times, 1 visits today)



