ತುರುವೇಕೆರೆ: ಆರೋಗ್ಯ, ಶಿಕ್ಷಣ ಹಾಗೂ ಪರಿಸರ ಸಂರಕ್ಷಣೆಯAತಹ ಸೇವಾ ಕಾರ್ಯಗಳೇ ರೋಟರಿ ಕ್ಲಬ್ ನ ಮೂಲ ದ್ಯೇಯೊದ್ದೇಶ ಎಂದು ಲೆಪ್ಟಿನಲ್ ಗೌರ್ನರ್ ಬೆಳೆಗರೆ ಶುವಕುಮಾರ್ ತಿಳಿಸಿದರು.
ತಾಲೂಕಿನ ಮಾದಿಹಳ್ಳಿಯಲ್ಲಿ ರೋಟರಿ ಕ್ಲಬ್, ಆದಿಚುಂಚನಗಿರಿ ಆಸ್ಪತ್ರೆ, ಒಕ್ಕಲಿಗರ ಸಂಘ ದಂತ ವೈದ್ಯ ಕಾಲೇಜು ಬೆಂಗಳೂರು, ಮಾದಿಹಳ್ಳಿ ಗ್ರಾಮ ಪಂಚಾಯಿತಿ, ಮಾದಿಹಳ್ಳಿ ಮತ್ತು ಅರಳೀಕೆರೆ ಗ್ರಾಮಸ್ಥರ ಸಹಕಾರದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ರೋಟರಿ ಸಂಸ್ಥೆ ಸುಮಾರು ವರ್ಷಗಳಿಂದ ನಿರಂತರವಾಗಿ ಸೇವಾಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ರೋಟರಿ ಕ್ಲಬ್ ವತಿಯಿಂದ ರಾಜ್ಯಾದ್ಯಂತ ೧೨ಸಾವಿರ ರೋಗಿಗಳಿಗೆ ಉಚಿತ ಹೃದಯ ಚಿಕಿತ್ಸೆ ಮಾಡಿಸಲಾಗಿದೆ.ಸುಮಾರು ೬೮ ಸಾವಿರ ಕೃತಕ ಕಾಲು ಜೋಡಣೆ ಮಾಡಿಸಲಾಗಿದೆ. ಅರೋಗ್ಯ ಸೇವೆಯಲ್ಲಿ ರೋಟರಿ ಸದಾ ಮುಂದಿದೆ. ಇಂತಹ ಆರೋಗ್ಯ ಶಿಬಿರಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ರೋಟರಿ ಕ್ಲಬ್ ನ ತಾಲೂಕು ಅಧ್ಯಕ್ಷ ಸಂತೋಷ್ ಅದ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್ ನ ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್, ರೋಟರಿ ಕ್ಲಬ್ ಸ್ಥಾಪಕ ಅದ್ಯಕ್ಷ ಎನ್.ಆರ್.ಜಯರಾಮ್, ಅನಿಕೇತನ ಕ್ಲಬ್ ಅದ್ಯಕ್ಷ ಶಿವಲಿಂಗಯ್ಯ, ಶ್ರೀಧರ್ ಬಾಬು, ದಂತ ವೈದ್ಯ ಜಯಲಕ್ಷಿ÷್ಮ, ನಾರ್ತ್ ವೆಸ್ಟ್ ರೋಟರಿ ಕ್ಲಬ್ ಅದ್ಯಕ್ಷೆ ಜಯಂತಿ, ನಿಟ್ಟೂರು ರೋಟರಿ ಕ್ಲಬ್ ಅದ್ಯಕ್ಷ ಬಸವರಾಜು, ಎ.ಜಿ.ಮಹಾಲಿಂಗಯ್ಯ, ರೋಟರಿ ಕ್ಲಬ್ ತಾಲೂಕು ಕಾರ್ಯದರ್ಶಿ ಉಪೇಂದ್ರ, ಮುಖಂಡರಾದ ಮಾದಿಹಳ್ಳಿ ಕಾಂತರಾಜು, ಕೃಷ್ಣಪ್ಪ, ಚಂದ್ರಣ್ಣ, ರೋಟರಿ ಟ್ರಸ್ಟ್ ಅದ್ಯಕ್ಷ ಸಾ.ಶಿ.ದೇವರಾಜು, ಮಾಜಿ ಅದ್ಯಕ್ಷ ಬಿ.ಎಂ.ಎಸ್.ಉಮೇಶ್, ಸುನಿಲ್ ಕುಮಾರ್, ಪ್ರಸನ್ನಕುಮಾರ್, ಶಿವರಾಜ್ ಸೇರಿದಂತೆ ಇತರರು ಇದ್ದರು.
ಬೃಹತ್ ಆರೋಗ್ಯ ಶಿಬಿರದಲ್ಲಿ ಮಧುಮೇಹ, ಸ್ತಿçà ರೋಗ, ಕೀಲು ಮೂಳೆ, ದಂತ, ಕಿವಿ, ಮೂಗು, ಗಂಟಲು, ಮಕ್ಕಳು, ಚರ್ಮರೋಗ, ಮಾನಸಿಕ ರೋಗ, ಸೇರಿದಂತೆ ವಿವಿಧ ರೋಗಗಳ ತಜ್ಞರು ಆಗಮಿಸಲಿದ್ದರು. ವಿಶೇಷವಾಗಿ ದಂತ ರೋಗಕ್ಕೆ ಸಂಬAಧಿಸಿದAತೆ ಚಿಕಿತ್ಸಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಸಾರ್ವಜನಿಕ ಆಗಮಿಸಿ ಸದುಪಯೋಗ ಪಡಿಸಿಕೊಂಡರು.

(Visited 1 times, 1 visits today)