ತುಮಕೂರು: ಜಾಗತೀಕರಣದ ಪ್ರಭಾವದಿಂದ ಪ್ರಾದೇಶಿಕ ಅಸ್ಮಿತೆಗಳು ಅಳಿಸಿಹೋಗುವ ಆತಂಕ ಎದುರಾಗಿರುವ ಇಂದಿನ ಸಂದರ್ಭದಲ್ಲಿ ನಾಟಕಗಳು, ವಿವಿಧ ರಂಗರೂಪಗಳು ನಮ್ಮ ಮೂಲ ಬೇರುಗಳನ್ನು ಹಾಗೂ ಭಾಷಾ ವೈವಿಧ್ಯತೆಯನ್ನು ಜೀವಂತವಾಗಿರಿಸುವ ಪ್ರಬಲ ಮಾಧ್ಯಮಗಳಾಗಿವೆ ಎಂದು ರಂಗನಿರ್ದೇಶಕ ಲಕ್ಷ÷್ಮಣ್ ಕೆ.ಪಿ. ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಅ. ೧೬ ರ ಶುಕ್ರವಾರದಂದು ಆಯೋಜಿಸಲಾಗಿದ್ದ ರಂಗಭೂಮಿ ಮತ್ತು ಅಸ್ಮಿತೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮನ್ನು ನಾವು ಗುರುತಿಸಿಕೊಳ್ಳಲು ಮತ್ತು ಅಸ್ಮಿತೆಯನ್ನು ಕಂಡುಕೊಳ್ಳಲು ಕಲಾ ಮಾಧ್ಯಮವಾಗಿ ರಂಗಭೂಮಿ ಅತ್ಯಂತ ಸಹಕಾರಿಯಾಗಿದೆ. ಜಾಗತೀಕರಣದ ಈ ಯುಗದಲ್ಲಿ ಪ್ರಾದೇಶಿಕ ಅಸ್ಮಿತೆಗಳು ಅಳಿಸಿಹೋಗುವ ಭೀತಿ ಎದುರಿಸುತ್ತಿದ್ದು, ಯಕ್ಷಗಾನ, ಬಯಲಾಟ ಮತ್ತು ವಿವಿಧ ರಂಗರೂಪಗಳು ನಮ್ಮ ಮೂಲ ಬೇರುಗಳನ್ನು ಹಾಗೂ ಪ್ರಾದೇಶಿಕ ಭಾಷಾ ವೈವಿಧ್ಯತೆಯನ್ನು ಜೀವಂತವಾಗಿಟ್ಟಿವೆ ಎಂದರು.
ಆಧುನಿಕ ರಂಗಭೂಮಿಯು ದಲಿತ, ಬಂಡಾಯ ಹಾಗೂ ಸ್ತಿçÃವಾದಿ ನೆಲೆಗಳಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಪಿತೃಪ್ರಧಾನ ವ್ಯವಸ್ಥೆ ಮತ್ತು ವರ್ಗಬೇಧದ ವಿರುದ್ಧ ಸದಾ ದನಿ ಎತ್ತಿರುವ ರಂಗಭೂಮಿ, ತುಳಿತಕ್ಕೊಳಗಾದ ಸಮುದಾಯಗಳಿಗೆ ತಮ್ಮ ಅಸ್ಮಿತೆಯನ್ನು ರೂಪಿಸಿಕೊಳ್ಳಲು ಪ್ರಬಲ ವೇದಿಕೆಯಾಗಿದೆ. ರಂಗದ ಮೇಲಿನ ಅಭಿವ್ಯಕ್ತಿಯು ಸಮಾಜದ ಆತ್ಮಾವಲೋಕನಕ್ಕೆ ಹಾದಿಮಾಡಿಕೊಡುತ್ತದೆ ಎಂದರು.
ಸಾಮಾಜಿಕ ಜಾಲತಾಣಗಳು ಮತ್ತು ದೃಶ್ಯ ಮಾಧ್ಯಮಗಳ ಭರಾಟೆಯ ನಡುವೆಯೂ ರಂಗಭೂಮಿಯ ಜೀವಂತಿಕೆ ಕಡಿಮೆಯಾಗಿಲ್ಲ. ಇಂದಿನ ಯುವಪೀಳಿಗೆ ಸಾಹಿತ್ಯಾಭ್ಯಾಸದೊಂದಿಗೆ ಸ್ಥಳೀಯ ಕಲೆ ಮತ್ತು ಸಾಂಸ್ಕöÈತಿಕ ಅಸ್ಮಿತೆಯನ್ನು ಉಳಿಸಿಕೊಳ್ಳಲು ರಂಗಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್. ಶ್ರೀನಿವಾಸ, ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ಜ್ಯೋತಿ, ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ವಿಜಯ್ಕುಮಾರ್ ಜಿ. ಆರ್., ಸಹಾಯಕ ಪ್ರಾಧ್ಯಾಪಕರಾದ ಡಾ. ಭರತ್ ಶಿಲ್ಪಿ, ಹಾಗೂ ಉಪನ್ಯಾಸಕರಾದ ರಾಮಾಂಜಿನಪ್ಪ ಎಸ್.ಬಿ., ಸೀಮಾ ಕೆ., ಅಜಿತ್ ಟಿ.ಆರ್., ಮತ್ತು ಸಾಗರ್ ಬಿ.ಉಪಸ್ಥಿತರಿದ್ದರು.
(Visited 1 times, 1 visits today)



