ತುಮಕೂರು: ಇಂದಿನ ತಂತ್ರಜ್ಞಾನಾಧಾರಿತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಹೊಂದಿಕೊಳ್ಳಲು ಹಾಗೂ ಭವಿಷ್ಯದ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಎಬಿಸಿಡಿ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್, ಕ್ಲೌಡ್ ಕಂಪ್ಯೂಟಿAಗ್ ಮತ್ತು ದತ್ತಾಂಶ ವಿಶ್ಲೇಷಣೆ ಕುರಿತು ಜ್ಞಾನ ಹಾಗೂ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬೇಕು ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಮಾಜಿ ಡೀನ್ ಪ್ರೊ. ಕೆ. ಈರೇಶಿ ಅವರು ತಿಳಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ (ಎಂಕಾA – ಮಾಹಿತಿ ವ್ಯವಸ್ಥೆಗಳು)ದ ವತಿಯಿಂದ ಆಯೋಜಿಸಲಾಗಿದ್ದ ಈಐಂಖಇ-೨೦೨೬: ಎ ಜರ್ನಿ ಫ್ರಮ್ ಸ್ಪಾರ್ಕ್ ಟು ಶೈನ್ ಫ್ರೆಶರ್ಸ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕಗಳ ಜ್ಞಾನಕ್ಕೆ ಸೀಮಿತವಾಗದೆ, ಹೊಸ ತಂತ್ರಜ್ಞಾನಗಳನ್ನು ಕಲಿಯುವ ಮೂಲಕ ತಮ್ಮ ಡಿಜಿಟಲ್ ಹಾಗೂ ಸಂವಹನ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಯಶಸ್ಸಿನ ಜೀವನಕ್ಕೆ ಅಗತ್ಯವಾದ ೪ಎಚ್ ಸೂತ್ರಗಳಾದ ಕಠಿಣ ಪರಿಶ್ರಮ, ವಿನಯ ಮತ್ತು ಪ್ರಾಮಾಣಿಕತೆ ಗುಣಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಜಾಗತಿಕ ಮಟ್ಟದ ಅವಕಾಶಗಳಿಗಾಗಿ ವಿದೇಶಿ ಭಾಷೆಗಳನ್ನು ಕಲಿಯಬೇಕು ಎಂದರು.
ಸಿದ್ಧಗAಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್.ವಿ. ದಿನೇಶ್ ಮಾತನಾಡಿ ವಿದ್ಯಾರ್ಥಿಗಳು ಪೋಷಕರು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಸಾಗಬೇಕು. ಉದ್ಯೋಗಾರ್ಹತೆ ಹೆಚ್ಚಿಸಿಕೊಳ್ಳಲು ವಿವಿಧ ಸಂಸ್ಥೆಗಳಲ್ಲಿ ಇಂಟರ್ನ್ಶಿಪ್‌ಗಳನ್ನು ಕೈಗೊಂಡು ಪ್ರಾಯೋಗಿಕ ಕಾರ್ಯಾನುಭವ ಪಡೆಯಬೇಕು ಎಂದರು. ಯುವಜನತೆ ಮಾದಕ ದ್ರವ್ಯಗಳಂತಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದರು.
ಹಿರಿಯ ಪ್ರಾಧ್ಯಾಪಕರಾದ ಪ್ರೊ. ಬಿ. ಶೇಖರ್ ಅವರು ಮಾತನಾಡಿ ಜಾತಿ, ಧರ್ಮ, ಅಂತಸ್ತುಗಳ ಭೇದಭಾವವಿಲ್ಲದೆ ವ್ಯಕ್ತಿಯ ನಿಜವಾದ ಮೌಲ್ಯವು ಅವರ ಜ್ಞಾನ ಮತ್ತು ಸಾಮರ್ಥ್ಯದಲ್ಲಿದೆ ಎಂದರು.
ವಿಭಾಗದ ಅಧ್ಯಕ್ಷರಾದ ಪ್ರೊ. ಪಿ. ಪರಮಶಿವಯ್ಯ ಅವರು, ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಹಾಗೂ ಸಮಾಜದ ಒಳಿತಿಗೆ ಬಳಸುವ ಮಾಧ್ಯಮವಾಗಬೇಕು ಎಂದರು.
ಹಿರಿಯ ಪ್ರಾಧ್ಯಾಪಕರಾದ ಪ್ರೊ. ಜಿ. ಸುದರ್ಶನ್ ರೆಡ್ಡಿ, ಪ್ರೊ. ಸುರೇಶ್ ಬಿ.ಕೆ., ಉಪನ್ಯಾಸಕರಾದ ಮಂಜುಳಾದೇವಿ, ವರುಣ್, ದಿವ್ಯಾ, ಅರುಂಧತಿ ಉಪಸ್ಥಿತರಿದ್ದರು.

(Visited 1 times, 1 visits today)