ತುಮಕೂರು: ತುಮಕೂರು ದಸರಾ ಸಮಿತಿಯ ೩೬ನೇ ವರ್ಷದ೩ ದಿನಗಳ ದಸರಾ ಉತ್ಸವ ಕಾರ್ಯಕ್ರಮಗಳಿಗೆ ಶಾಸಕ ಜಿ.ಬಿ. ಜ್ಯೋತಿಗಣೇಶ್ ಚಾಲನೆ ನೀಡಿದರು. ಕೆ.ಆರ್. ಬಡಾವಣೆಯ ಶ್ರೀರಾಮ ಮಂದಿರದಲ್ಲಿ ಬೆಳಿಗ್ಗೆ ಗಣಪತಿ ಪೂಜೆ, ದುರ್ಗಾ ಹೋಮ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.
ದಸರಾ ಸಮಿತಿ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷಿö್ಮÃಕಾಂತ್, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಮಹೇಶ್, ಕಾರ್ಯದರ್ಶಿ ಪರಶುರಾಮಯ್ಯ, ಖಜಾಂಚಿ ಜಿ.ಎಸ್. ಬಸವರಾಜು, ಸಂಯೋಜಕ ಕೆ.ಎನ್. ಗೋವಿಂದರಾವ್, ಸಹ ಸಂಯೋಜಕ ಕಿರಣ್, ಸಂಚಾಲಕರಾದ ಗ.ಸಿ.ಶ್ರೀನಿವಾಸಮೂರ್ತಿ, ಮುಖಂಡರಾದ ನಾಗೇಂದ್ರ ಪ್ರಸಾದ್, ಎಂ.ಕೆ. ನಾಗರಾಜರಾವ್, ರೇಖಾ ಶಿವಕುಮಾರ್, ಪದಾಧಿಕಾರಿಗಳಾದ ನಾಗರಾಜ ಶೆಟ್ಟಿ, ಓಂಕಾರೇಶ್ವರಿ, ಕಲ್ಪನಾ ಪ್ರಸಾದ್, ಅನಿತಾ ರಮೇಶ್, ಮಂಜುಳಾ ಲೋಕೇಶ್, ವಿಜಯ ರವೀಂದ್ರ, ಚೈತ್ರ ಮಂಜುನಾಥ್, ಶೃತಿ, ಹೆಚ್.ಎಂ. ರವೀಶಯ್ಯ, ವಿಜಯಕುಮಾರ್, ಸಿದ್ಧಗಂಗಯ್ಯ ಮೊದಲಾದವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀರಾಮ ಮಂದಿರದ ಪ್ರಧಾನ ಅರ್ಚಕರಾದ ಸಂತೋಷ್ಜೀ ಅವರ ನೇತೃತ್ವದಲ್ಲಿ ಹೋಮ, ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ದಸರಾ ಅಂಗವಾಗಿ ಪ್ರತಿದಿನ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆ ವಿಜೇತರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುತ್ತಿದೆ. ೨೦ರಂದು ಮಧ್ಯಾಹ್ನ ೧೨ ಗಂಟೆಗೆ ರಂಗಗೀತೆ ಗಾಯನದ ರಂಗ ಮಾಧುರ್ಯ ಸ್ಪರ್ಧೆ, ಮಧ್ಯಾಹ್ನ ೩ ಗಂಟೆಗೆ ಭಜನಾ ಸ್ಪರ್ಧೆ, ೨೧ರಂದು ಬೆಳಿಗ್ಗೆ ೧೧.೩೦ಕ್ಕೆ ರಂಗವಲ್ಲಿ ಸ್ಪರ್ಧೆ, ಸಂಜೆ ೫ ಗಂಟೆಗೆ ನೃತ್ಯ ವೈಭವ, ರಾತ್ರಿ ೮ ಗಂಟೆಗೆ ದಾಂಡಿಯಾ ಸಾಮೂಹಿಕ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
೨೧ರಂದು ವಿಜಯದಶಮಿ ಅಂಗವಾಗಿ ಮಧ್ಯಾಹ್ನ ೩ ಗಂಟೆಗೆ ಸಾಮೂಹಿಕ ಶಮೂ ಪೂಜೆ ಏರ್ಪಡಿಸಿದ್ದು, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಬಿ.ಸುರೇಶ್ ಗೌಡ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ.ಜೆ.ಲಕ್ಷಿö್ಮÃಕಾಂತ್, ದಸರಾ ಸಮಿತಿ ಅಧ್ಯಕ್ಷ ಬಾವಿಕಟ್ಟೆ ಮಂಜುನಾಥ್, ಸಮಿತಿ ಕಾರ್ಯಾಧ್ಯಕ್ಷ ಡಾ.ಎಸ್. ಪರಮೇಶ್, ಮೆರವಣಿಗೆ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ನಿಕಟಪೂರ್ವ ಅಧ್ಯಕ್ಷ ಡಾ.ಆರ್.ಎಲ್. ರಮೇಶ್ಬಾಬು ಭಾಗವಹಿಸುವರು.
(Visited 1 times, 1 visits today)



