ಹುಳಿಯಾರು: ಆಯುಧ ಪೂಜೆ ಹಾಗೂ ವಿಜಯದಶಮಿ ಬಂತೆAದರೆ ಕುಂಬಳಕಾಯಿಗೆ ಭಾರಿ ಬೇಡಿಕೆ ಸೃಷ್ಟಿಯಾಗುವುದು ಸಾಮಾನ್ಯ. ವಾಹನಗಳು, ಯಂತ್ರೋಪಕರಣಗಳು, ಅಂಗಡಿ-ಮುAಗಟ್ಟುಗಳಿಗೆ ಪೂಜೆ ಸಲ್ಲಿಸಿ ಕುಂಬಳಕಾಯಿ ಒಡೆಯುವ ಸಂಪ್ರದಾಯವಿರುವುದರಿAದ ಈ ಹಬ್ಬದ ಸಂದರ್ಭದಲ್ಲಿ ಕುಂಬಳಕಾಯಿ ವ್ಯಾಪಾರ ಜೋರಾಗಿರುತ್ತದೆ. ಆದರೆ ಈ ಬಾರಿ ಹುಳಿಯಾರಿನಲ್ಲಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದ್ದು, ನಿರೀಕ್ಷೆಗೂ ಮೀರಿ ಮಾರುಕಟ್ಟೆಗೆ ಬಂದ ಕುಂಬಳಕಾಯಿಗಳಿಗೆ ಖರೀದಿದಾರರೇ ಇಲ್ಲದಂತಾಗಿದೆ. ಪಟ್ಟಣದ ಪ್ರಮುಖ ಬೀದಿಗಳು, ವೃತ್ತಗಳು ಹಾಗೂ ರಸ್ತೆ ಬದಿಗಳಲ್ಲಿ ಕುಂಬಳಕಾಯಿ ರಾಶಿ ರಾಶಿಯಾಗಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ ರೈತರು ಮತ್ತು ವ್ಯಾಪಾರಿಗಳು ಭಾರಿ ನಷ್ಟದಿಂದ ಕಂಗಾಲಾಗಿದ್ದಾರೆ.
ಕುAಬಳಕಾಯಿ ಮಾರಾಟದಿಂದ ಉತ್ತಮ ಆದಾಯ ಗಳಿಸಬಹುದು ಎಂಬ ನಿರೀಕ್ಷೆಯೊಂದಿಗೆ ರೈತರು ಹಾಗೂ ವ್ಯಾಪಾರಿಗಳು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕುಂಬಳಕಾಯಿಗಳನ್ನು ಮಾರುಕಟ್ಟೆಗೆ ತಂದಿದ್ದರು. ಸ್ಥಳೀಯ ವ್ಯಾಪಾರಿಗಳಷ್ಟೇ ಅಲ್ಲದೆ, ಹೊರ ಊರುಗಳಿಂದಲೂ ರೈತರು ಟ್ರಾ÷್ಯಕ್ಟರ್, ಟಾಟಾ ಏಸ್ ಹಾಗೂ ಇತರ ವಾಹನಗಳಲ್ಲಿ ಕುಂಬಳಕಾಯಿಗಳನ್ನು ತಂದು ಮಾರಾಟಕ್ಕೆ ಇಟ್ಟಿದ್ದರು. ಹುಳಿಯಾರು ಬಸ್ ನಿಲ್ದಾಣ, ರಾಮಗೋಪಾಲ್ ಸರ್ಕಲ್, ಕನಕದಾಸ ಸರ್ಕಲ್ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕುಂಬಳಕಾಯಿ ಮಾರಾಟ ಜೋರಾಗಿ ಕಂಡುಬAದರೂ, ಖರೀದಿದಾರರ ಸಂಖ್ಯೆ ಮಾತ್ರ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಪರಿಣಾಮವಾಗಿ ವ್ಯಾಪಾರವಾಗದೆ ಸಾವಿರಾರು ಕುಂಬಳಕಾಯಿಗಳು ಹಾಗೆಯೇ ಉಳಿದುಕೊಂಡಿವೆ.
ಬೆಲೆ ಕುಸಿತ; ವ್ಯಾಪಾರಿಗಳ ಕೈಗೆ ಬಾರದ ಬಂಡವಾಳ: ಈ ಬಾರಿ ಮಾರುಕಟ್ಟೆಗೆ ಯಥೇಚ್ಛವಾಗಿ ಕುಂಬಳಕಾಯಿಗಳು ಬಂದಿರುವುದರಿAದ ಬೆಲೆ ತೀವ್ರವಾಗಿ ಕುಸಿದಿದೆ. ಮಾರುಕಟ್ಟೆಗೆ ಬಂದ ಮೊದಲ ದಿನಗಳಲ್ಲಿ ಕೆಲವು ಕಡೆ ಕೆಜಿ ಲೆಕ್ಕದಲ್ಲಿ ಕುಂಬಳಕಾಯಿ ಮಾರಾಟವಾಗಿತ್ತು. ಆದರೆ ಆಯುಧ ಪೂಜೆಯ ಹಿಂದಿನ ದಿನ ಹಾಗೂ ಹಬ್ಬದ ದಿನಗಳಲ್ಲಿಯೂ ನಿರೀಕ್ಷಿತ ಬೇಡಿಕೆ ಕಂಡುಬರಲಿಲ್ಲ. ಐವತ್ತು ರೂಪಾಯಿಗೆ ಎರಡು ಕುಂಬಳಕಾಯಿ, ನೂರು ರೂಪಾಯಿಗೆ ಐದು ಕುಂಬಳಕಾಯಿ ಎಂಬAತೆ ಮಾರಾಟ ಮಾಡಲು ಮುಂದಾದರೂ ವ್ಯಾಪಾರ ಚೇತರಿಸಿಕೊಳ್ಳಲಿಲ್ಲ. ಕೊನೆಗೆ ಕೆಲವು ವ್ಯಾಪಾರಿಗಳು ಒಂದೊAದು ಕುಂಬಳಕಾಯಿಯನ್ನು ಕೇವಲ ೨೦ ರೂಪಾಯಿಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಯಿತು.
ಹಿಂದಿನ ವರ್ಷಗಳಲ್ಲಿ ಆಯುಧ ಪೂಜೆಯ ಸಂದರ್ಭದಲ್ಲಿ ಉತ್ತಮ ವ್ಯಾಪಾರವಾಗುತ್ತಿತ್ತು. ಆದರೆ ಈ ಬಾರಿ ಟನ್ಗಟ್ಟಲೆ ಕುಂಬಳಕಾಯಿಗಳು ಮಾರಾಟವಾಗದೆ ಉಳಿದಿವೆ. ಕಳೆದ ವರ್ಷ ಉತ್ತಮ ಲಾಭ ಗಳಿಸಿದ್ದ ವ್ಯಾಪಾರಿಗಳಿಗೆ ಈ ಬಾರಿ ನಷ್ಟವೇ ಎದುರಾಗಿದೆ ಎನ್ನುತ್ತಾರೆ ಸ್ಥಳೀಯವಾಗಿ ಕಲ್ಲೇನಹಳ್ಳಿ ಹಾಗೂ ಭೈರಾಪುರದಲ್ಲಿ ಕುಂಬಳಕಾಯಿಗಳನ್ನು ಖರೀದಿಸಿ ತಂದಿದ್ದ ಹಜರತ್ ಜಾನ್. ಈ ಬಾರಿ ಅವರಿಗೂ ನಿರೀಕ್ಷಿತ ವ್ಯಾಪಾರವಾಗದೆ ಸಂಕಷ್ಟ ಎದುರಾಗಿದೆ. ಹಿಂದಿನ ವರ್ಷ ಉತ್ತಮ ವ್ಯಾಪಾರವಾಗಿದ್ದರೂ ಈ ಬಾರಿ ಕುಂಬಳಕಾಯಿಗಳು ಹಾಗೆಯೇ ಉಳಿದಿವೆ; ಮುಂದೆ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
೧೨ ಟನ್ ಕುಂಬಳಕಾಯಿ ಖರೀದಿಸಿ ಲಕ್ಷಾಂತರ ರೂಪಾಯಿ ನಷ್ಟ: ಸುಮಾರು ೧೨ ಟನ್ ಕುಂಬಳಕಾಯಿಗಳನ್ನು ಪ್ರತಿ ಕೆಜಿಗೆ ೧೮ ರೂಪಾಯಿಯಂತೆ ಖರೀದಿಸಿದ್ದೇನೆ. ಸಾಗಣೆ ಸೇರಿದಂತೆ ಇತರ ಖರ್ಚುಗಳನ್ನು ಸೇರಿಸಿದರೆ ಪ್ರತಿ ಕೆಜಿಗೆ ಸುಮಾರು ೨೦ ರೂಪಾಯಿ ವೆಚ್ಚವಾಗಿದೆ. ಆದರೆ ಇಷ್ಟೊಂದು ಬಂಡವಾಳ ಹೂಡಿದರೂ ಕೇವಲ ೧೦ ಸಾವಿರ ರೂಪಾಯಿಗಳಷ್ಟು ಮಾತ್ರ ವ್ಯಾಪಾರವಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎಂದು ವ್ಯಾಪಾರಿ ಬಾಬು ತಮ್ಮ ಸಂಕಷ್ಟವನ್ನು ವಿವರಿಸಿದ್ದಾರೆ.
ಬರಗಾಲದ ನಡುವೆಯೂ ಬೆಳೆದ ಬೆಳೆಗೆ ಬೆಲೆ ಇಲ್ಲ: ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ಸಾಕಷ್ಟು ಶ್ರಮವಹಿಸಿ ಕುಂಬಳಕಾಯಿ ಬೆಳೆದಿದ್ದೇವೆ. ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಹಾಕಿ, ಕಷ್ಟಪಟ್ಟು ಬೆಳೆಸಿದ್ದರೂ ಇಂದು ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಂತಾಗಿದೆ. ಇಂದಿನ ಪರಿಸ್ಥಿತಿ ನೋಡಿದರೆ ಕುಂಬಳಕಾಯಿ ಬೆಳೆದಿದ್ದಾದರೂ ಏಕೆ ಎಂಬ ಬೇಸರವಾಗುತ್ತದೆ ಎಂದು ರೈತ ಮಲ್ಲಿಕಣ್ಣ ತಮ್ಮ ನೋವನ್ನು ಹಂಚಿಕೊAಡಿದ್ದಾರೆ.
ರಸ್ತೆ ಬದಿಯಲ್ಲಿ ಕುಂಬಳಕಾಯಿ ಬಿಟ್ಟು ಹೋದ ವ್ಯಾಪಾರಿಗಳು: ವ್ಯಾಪಾರವಾಗದೆ ಉಳಿದ ಕುಂಬಳಕಾಯಿಗಳನ್ನು ಏನು ಮಾಡಬೇಕು ಎಂಬ ಚಿಂತೆ ವ್ಯಾಪಾರಿಗಳನ್ನು ಕಾಡುತ್ತಿದೆ. ಸಾಗಣೆ ವೆಚ್ಚ, ವಾಹನ ಬಾಡಿಗೆ, ಖರೀದಿ ಬೆಲೆ ಹಾಗೂ ಇತರ ಖರ್ಚುಗಳನ್ನು ಭರಿಸಿದರೂ ಆದಾಯ ದೊರೆಯದ ಕಾರಣ ಕೆಲವರು ಕುಂಬಳಕಾಯಿಗಳನ್ನು ರಸ್ತೆ ಬದಿಯಲ್ಲಿಯೇ ಬಿಟ್ಟು ಹೋಗಿರುವ ದೃಶ್ಯಗಳು ಕಂಡುಬAದಿವೆ. ಇನ್ನೂ ಕೆಲವರು ಗಾಡಿಗಳಲ್ಲಿಯೇ ಕುಂಬಳಕಾಯಿಗಳನ್ನು ತುಂಬಿಕೊAಡು ಮುಂದೇನು ಮಾಡಬೇಕೆಂದು ತೋಚದೆ ನಿಂತಿದ್ದಾರೆ.
೧೫ ಟನ್ ಕುಂಬಳಕಾಯಿ ಧರ್ಮಸ್ಥಳದ ಅನ್ನದಾಸೋಹಕ್ಕೆ: ಮಾರಾಟವಾಗದೆ ರಸ್ತೆಯಲ್ಲಿ ಹಾಗೂ ವಾಹನಗಳಲ್ಲಿ ಉಳಿದಿದ್ದ ಕುಂಬಳಕಾಯಿಗಳನ್ನು ಕಂಡ ಗವಿರಂಗನಾಥ ಲಾರಿ ಟ್ರಾನ್ಸ್ಪೋರ್ಟ್ ಮಾಲೀಕ ರಂಗನಾಥ ಪ್ರಸಾದ್ ಅವರು ಮಾನವೀಯ ನಿರ್ಧಾರ ಕೈಗೊಂಡಿದ್ದಾರೆ. ಕುಂಬಳಕಾಯಿಗಳು ವ್ಯರ್ಥವಾಗುವ ಬದಲು ಧರ್ಮಸ್ಥಳದ ಅನ್ನದಾಸೋಹಕ್ಕೆ ತಲುಪಿದರೆ ಭಕ್ತರಿಗೆ ನೀಡುವ ಅನ್ನಪ್ರಸಾದಕ್ಕೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ ತಮ್ಮ ಸ್ವಂತ ಲಾರಿಯನ್ನು ತರಿಸಿ ಕುಂಬಳಕಾಯಿಗಳನ್ನು ಸಂಗ್ರಹಿಸಿ ಕಳುಹಿಸಿದ್ದಾರೆ.
ವ್ಯಾಪಾರವಾಗದೆ ಉಳಿದ ಕುಂಬಳಕಾಯಿಗಳನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ರಂಗನಾಥ ಪ್ರಸಾದ್ ಅವರು ಸ್ವಂತ ಲಾರಿಯ ಮೂಲಕ ಉಚಿತವಾಗಿ ಸಾಗಣೆ ವ್ಯವಸ್ಥೆ ಮಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ನಷ್ಟದಿಂದ ಕಂಗಾಲಾಗಿದ್ದ ವ್ಯಾಪಾರಿಗಳಿಗೆ ಇದರಿಂದ ಒಂದಷ್ಟು ನೆಮ್ಮದಿ ದೊರೆತಿದ್ದು, ಕುಂಬಳಕಾಯಿಗಳು ವ್ಯರ್ಥವಾಗುವುದನ್ನು ತಡೆಯುವ ಪ್ರಯತ್ನವೂ ಆಗಿದೆ.
(Visited 1 times, 1 visits today)



