ತುಮಕೂರು: ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆಯ ಈ ವರ್ಷದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನಾ ಮಹೋತ್ಸವ ವೈಭವದಿಂದ ನೆರವೇರಿದ್ದು, ಮುಂದಿನ ವರ್ಷ ೧೦ನೇ ಮಹೋತ್ಸವವನ್ನು ವಿಶಿಷ್ಠವಾಗಿ ಆಚರಣೆ ಮಾಡಲು ಸ್ವಾಗತ ಅಧ್ಯಕ್ಷ ಟಿ.ಬಿ. ಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ವೇಳೆ ೧೦ನೇ ವರ್ಷದ ಆಚರಣೆಯ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಮುಂದಿನ ವರ್ಷ ಹಿಂದೂ ಮಹಾ ಗಣಪತಿಯ ಹತ್ತನೇ ಮಹೋತ್ಸವ ನಡೆಯಬೇಕಿದ್ದು, ಶ್ರದ್ಧಾಭಕ್ತಿ, ಧಾರ್ಮಿಕ ಪರಂಪರೆಯAತೆ, ಆಕರ್ಷಣೀಯವಾಗಿ ಅದ್ದೂರಿಯಾಗಿ ಆಚರಣೆ ಮಾಡಬೇಕು. ಈ ಸಂಬAಧ ಈಗಿನಿಂದಲೇ ಯೋಜನೆಗಳನ್ನು ರೂಪಿಸಲು ಸಭೆ ತೀರ್ಮಾನಿಸಿತು.
ಹಿಂದೂ ಸಮಾಜದ ಹಾಗೂ ಲೋಕ ಕಲ್ಯಾಣಾರ್ಥ ಕಳೆದ ವರ್ಷ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಹಿಂದೂ ಮಹಾ ಗಣಪತಿಯನ್ನು ಪ್ರತಿಷ್ಠಾಪಿಸಿ ೯ನೇ ವರ್ಷದ ಸ್ವಾಮಿಯ ವಿರ್ಸಜನೆಯನ್ನು ಅದ್ಧೂರಿಯಾಗಿ ನೆರವೇರಿಸಲಾಗಿದ್ದು, ಸಾವಿರಾರು ಜನ ಉತ್ಸವದ ಸಂಭ್ರಮವನ್ನು ಕಣ್ತುಂಬಿಕೊAಡರು. ಈ ಯಶಸ್ಸಿನಿಂದ ಪ್ರೇರಿತವಾಗಿರುವ ಸ್ವಾಗತ ಸಮಿತಿ ಮುಂದಿನ ವರ್ಷ ಮತ್ತಷ್ಟು ವಿಶಿಷ್ಠತೆ, ವೈಭವದಿಂದ ಆಚರಿಸಲು ನಿರ್ಧರಿಸಿತು.
ಈ ವರ್ಷದ ಹಿಂದೂ ಮಹಾಗಣಪತಿಯ ಉತ್ಸವದ ಯಶಸ್ಸಿಗೆ ಸಹಕರಿಸಿದ ಹರ-ಗುರು ಚರಮೂರ್ತಿಗಳು, ಹಿಂದೂ ಸಮಾಜದ ಬಾಂಧವರು, ಕಲಾತಂಡಗಳ ಕಲಾವಿದರು, ಪೊಲೀಸ್, ಬೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳಿಗೆ, ಶ್ರಮಿಸಿದ ಸ್ವಾಗತ ಸಮಿತಿ ಸದಸ್ಯರಿಗೆ ಅಧ್ಯಕ್ಷ ಟಿ.ಬಿ. ಶೇಖರ್ ಧನ್ಯವಾದ ತಿಳಿಸಿದರು. ಗಣೇಶೋತ್ಸವದ ದಶಮಾನೋತ್ಸವವನ್ನು ಗೌರವಾಧ್ಯಕ್ಷ ಸಿ.ವಿ. ಮಹದೇವಯ್ಯರವರ ನೇತೃತ್ವ ಹಾಗೂ ಟಿ.ಬಿ. ಶೇಖರ್‌ರವರ ಅಧ್ಯಕ್ಷತೆಯಲ್ಲೇ ನಡೆಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಉಪಾಧ್ಯಕ್ಷರಾದ ಮಂಜೇಶ್ ಕುಮಾರ್, ಮನು, ಗೌರವ ಪ್ರಧಾನ ಕಾರ್ಯದರ್ಶಿ ಡಾ.ಆರ್.ಎಲ್. ರಮೇಶ್‌ಬಾಬು, ಗೌರವ ಕಾರ್ಯದರ್ಶಿ ಆರ್. ಕೃಷ್ಣಯ್ಯ, ಸಹ ಕಾರ್ಯದರ್ಶಿ ಮಾರಣ್ಣ ಪಾಳೆಗಾರ್, ಖಜಾಂಚಿ ಟಿ.ವೈ. ಯಶಸ್, ನಿರ್ದೇಶಕರಾದ ಎಸ್.ಎನ್. ಕೃಷ್ಣಯ್ಯ, ಬಿ.ಎಸ್. ಮಹೇಶ್, ವಸಂತ್‌ಕುಮಾರ್, ಭಾನುಪ್ರಕಾಶ್ ಡಿ, ರವಿ ಕುಮಾರ್, ಶ್ರೀಧರ್, ಗೋಕುಲ್ ಮಂಜುನಾಥ್, ರೇಣುಕಾರಾದ್ಯ, ದಿವಾಕರ್‌ನಾಯ್ಡು, ಸುಬ್ರಹ್ಮಣ್ಯ, ನೇತಾಜಿ ರಾಮಕೃಷ್ಣ, ನಾಗರತ್ನಮ್ಮ, ಶೃತಿ ಮಧುಕರ್, ಸುಜಾತ ನಂಜೇಗೌಡ, ಬೃಂದಾಮಣಿ, ಮಧುಶ್ರೀ ಮತ್ತು ಹಲವು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

(Visited 1 times, 1 visits today)