ತುಮಕೂರು: ಹದಿನೈದನೇ ಶತಮಾನದಲ್ಲಿಯೇ ಜಾತಿ ತಾರತಮ್ಯದ ವಿರುದ್ದ ಧ್ವನಿ ಎತ್ತಿದ್ದ ಕನಕದಾಸರು, ಭಕ್ತಿ ಮತ್ತು ಮಾನವೀಯತೆಯ ಪ್ರತೀಕ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ವಿವಿಧ ಸಂಘಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಸಂತ ಕನಕದಾಸರ ೫೩೯ ನೇ ಜನ್ಮ ಜಯಂತಿ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆ ಕಾಲದಲ್ಲದ್ದ ಮೂಢನಂಬಿಕೆ, ಕಂದಾಚಾರ,ಜಾತಿ ತಾರತಮ್ಯ, ಶ್ರೇಷ್ಠತೆಯ ಮೇಲಾಟಗಳನ್ನು ತಮ್ಮ ಕೀರ್ತನೆಗಳ ಮೂಲಕ ಸರಿಪಡಿಸುವ ಕೆಲಸವನ್ನು ತಮ್ಮ ರಾಮಧಾನ್ಯ ಚರಿತದ ಮೂಲಕ ಮಾಡಿದ್ದರು ಎಂದರು.
ಕನಕದಾಸರ ೫೩೯ ನೇ ಜನ್ಮ ಜಯಂತಿಯ ಉಪನ್ಯಾಸ ನೀಡಿದ ಉಪನ್ಯಾಸಕ ಡಾ.ಮಂಜುನಾಥ್, ಕಲ್ಯಾಣದ ಬಸವಣ್ಣನ ನಂತರ ಸಮಾಜ ಸುಧಾಕರರಲ್ಲಿ ಕನಕದಾಸರು ಒಬ್ಬರು, ಅವರು ರಚಿಸಿರುವ ರಾಮಧಾನ್ಯ ಚರಿತ, ಮೋಹನತರಂಗಿಣಿ, ನಳಚರಿತ್ರೆ,ಹರಿಭಕ್ತಿಸಾರ ಪ್ರಮುಖ ಕೃತಿಗಳು ಸಮಾಜದಲ್ಲಿ ಜಾಗೃತಿ ಮೂಡಿಸುವ ಮೂಲಕ ೯೮ ವರ್ಷಗಳ ಕಾಲ ದೇವ ಮಾನವರಂತೆ ಬದುಕಿದರು ಎಂದರು.
ಪತ್ರಕರ್ತ ಡಾ.ಎಸ್.ನಾಗಣ್ಣ ಮಾತನಾಡಿ, ಹಿಂದುಳಿದ ಜಾರತಿಗಳಲ್ಲಿ ಹುಟ್ಟಿ ಸಾಧನೆ ಮಾಡಿದ ಮಹನೀಯರುಗಳನ್ನು ಮುಂದುವರೆದ ಜಾತಿಗಳ ಜನರು ಕಬ್ಜಾ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ನಾಯಕರುಗಳ ಬಗ್ಗೆ ನಮಗಿರುವ ಅಸಡ್ಡೆಯೇ ಕಾರಣ.ವ್ಯಾಸ,ವಾಲ್ಮೀಕಿ, ಕನಕದಾಸರು ಹೀಗೆ ಹತ್ತು ಹಲವು ಜನರು ಬೇರೆ ಸುಮುದಾಯಗಳ ಪಾಲಾಗಿ ಬಹಳ ವರ್ಷಗಳ ಕಳೆದಿವೆ. ಹಾಗಾಗಿ ಹಿಂದುಳಿದ ಸಮುದಾಯದ ದಾರ್ಶಾನಿಕರನ್ನು ಅವರವರ ಜಾತಿಗಳಿಗೆ ಸಿಮೀತಗೊಳಿಸದೆ ಎಲ್ಲಾ ತಳ ಸಮುದಾಯಗಳು ಒಗ್ಗೂಡಿ ಆಚರಿಸಿದಾಗ ಹೆಚ್ಚಿನ ಅರ್ಥ ಬರುತ್ತದೆ. ಜನಪ್ರತಿನಿಧಿ ಓಟಿನ ಭಯಕ್ಕೆ ಇಂತಹ ಕಾರ್ಯಕ್ರಮಗಳಿಗೆ ಬರುತ್ತಾರೆ.ಆದರೆ ಅವರು ಭಕ್ತಿಯಿಂದ ಬರುವಂತಹ ವಾತಾವರಣವನ್ನು ನಾವು ಸೃಷ್ಟಿಸಬೇಕಿದೆ.ಈ ನಿಟ್ಟಿನಲ್ಲಿ ತಳ ಸಮುದಾಯಗಳ ಮುಖಂಡರಲ್ಲಿ ಆತ್ಮಾವಲೋಕನ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ನಗರ ಶಾಸಕ ಜಿ.ಬಿ.ಜೋತಿ ಗಣೇಶ್ ಮಾತನಾಡಿ, ಕೀರ್ತನೆಗಳೇ ದಾಸ ಸಾಹಿತ್ಯದ ಜೀವಾಳ.ಅಂತಹ ಕೀರ್ತನೆಗಳ ಮೂಲಕವೇ ಸಮಾಜದ ಅಂಕು,ಡೊAಕುಗಳನ್ನು ತಿದ್ದಲು ಪ್ರಯತ್ನಿಸಿದ ಕನಕದಾಸರು, ದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ೧೫ ನೇ ಶತಮಾನದಲ್ಲಿ ಅವರು ಪ್ರತಿರೋಧಿಸಿ ಜಾತಿ ತಾರತಮ್ಯಗಳು ಇಂದಿಗೂ ಮುಂದುವರೆದಿವೆ.ಶಿಕ್ಷಣದಿAದ ಕಡಿಮೆಯಾಗುತ್ತಿವೆ. ಕನಕದಾಸರ ವಾಣಿಯಂತೆ ಜಾತಿ ಶ್ರೇಷ್ಟತೆಯಿಂದ ನಾವೆಲ್ಲರೂ ಹೊರಬಂದಾಗ ಮಾತ್ರ ಇಂತಹ ಮಹನೀಯರ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ರೇವಣ್ಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ ಓಡೆಯರ್ ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಕು ಮಿರ್ಜಿ, ಕಾಳಿದಾಸ ವಿದ್ಯಾವರ್ದಕ ಸಂಘದ ಅಧ್ಯಕ್ಷ ಮೈಲಪ್ಪ, ಪ್ರಧಾನ ಕಾರ್ಯದರ್ಶಿ ಭೀಮರಾಜು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಕರ್ನಾಟಕ ಪ್ರದೇಶ ಕುರುಬರ ಸಂಘದ ಅಂತರಿಕ ಲೆಕ್ಕ ಪರಿಶೋಧಕ ಟಿ.ಇ.ರಘುರಾಮ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಂಕರ್.ಎಸ್, ನಿರ್ದೇಶಕರಾದ ಭಾಗ್ಯರವಿಕುಮಾರ್,ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಕ್ಷಿ÷್ಮ ನರಸಿಂಹರಾಜು, ಜಿಲ್ಲಾ ಕನಕ ಯುವಸೇನೆಯ ಅಧ್ಯಕ್ಷ ಪಿ.ಕೆಂಪರಾಜು, ಜಿಲ್ಲಾ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಟಿ.ಹೆಚ್.ಅನಿಲ್ ಕುಮಾರ್, ಕನಕ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸುನಿತಾ ನಟರಾಜು, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಅಧ್ಯಕ್ಷ ಎ.ಮಹಾಲಿಂಗಯ್ಯ, ಮಾಜಿ ಕಾರ್ಪೋರೆಟರ್ ಗಳಾದ ನಳಿನಾ ಇಂದ್ರಕುಮಾರ್, ಮಹೇಶ್, ಇಂದ್ರಕುಮಾರ್, ಹೆಚ್.ಡಿ.ಕೆ.ಮಂಜುನಾಥ್, ದೊಡ್ಡಯ್ಯ ಎಸ್. ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಸಾಧನೆ ಮಾಡಿದ ಕುರುಬ ಸಮುದಾಯದ ೨೦ ಜನರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ನಗರದ ನಾಲ್ಕು ದಿಕ್ಕಿನಿಂದ ಹೊರಟ ಕನಕದಾಸರ ಭಾವಚಿತ್ರ ಮೆರವಣಿಗೆ ಟೌನ್ ಹಾಲ್ ಬಳಿ ಸಮಾವೇಶಗೊಂಡು ನಂತರ ಗುಬ್ಬಿ ವೀರಣ್ಣ ಕಲಾಕ್ಷೇತ್ರ ತಲುಪಿತು.

(Visited 1 times, 1 visits today)