ತುಮಕೂರು: ಉದ್ಯಮದ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಬೆಳವಣಿಗೆಗೆ ಉತ್ತಮ ಚಿಂತನೆ ಬಹಳ ಮುಖ್ಯ. ಒಂದು ಐಡಿಯಾ ನಿಮ್ಮ ಬದುಕನ್ನೇ ಬದಲಿಸುತ್ತದೆ. ಆ ಚಿಂತನೆ ನಿಮ್ಮಿಂದ ಬರಬೇಕೆ ವಿನಾ ಬೇರೆಯವರಿಂದ ಅಲ್ಲ ಎಂದು ಹೆಲ್ತ್ಕೇರ್ ಗ್ಲೋಬಲ್ ಕ್ಯಾನ್ಸರ್ ಸೆಂಟರ್ ಮತ್ತು ಅಕಾಡೆಮಿಕ್ ಸೆಂಟರ್‌ನ ಮುಖ್ಯಸ್ಥರಾಗಿರುವ ಡಾ. ಯು.ಎಸ್. ವಿಶಾಲ್ ರಾವ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಬಯೋಟೆಕ್ನಾಲಜಿ ಮತ್ತು ಮೈಕ್ರೋಬಯಾಲಜಿ ಅಧ್ಯಯನ ಮತ್ತು ಸಂಶೋಧನ ವಿಭಾಗದಿಂದ ಗುರುವಾರ ಆಯೋಜಿಸಿದ್ದ ಬಯೋ ಉನ್ನತಿ: ನೆಕ್ಸ್÷್ಟ ಜೆನರೇಷನ್ ಟೂಲ್ಸ್ ಫಾರ್ ಸಸ್ಟೆöÊನಬಲ್ ಅಪ್ಲಿಕೇಶನ್ಸ್ ಆಫ್ ಮೈಕ್ರೋಬಿಯಲ್ ಬಯೋಟೆಕ್ನಾಲಜಿ ಎಂಬ ಮೂರುದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀ ಶಿವಕುಮಾರ ಸ್ವಾಮೀಜಿ ಅವರ ಒಂದು ಉತ್ತಮವಾದ ಚಿಂತನೆಯಿAದ ತ್ರಿವಿಧ ದಾಸೋಹ ಇಡೀ ವಿಶ್ವಕ್ಕೆ ಪರಿಚಯವಾಯಿತು. ಸಾಮಾಜಿಕ ಜಾಲತಾಗಳು ಇಲ್ಲದ ಕಾಲದಲ್ಲೇ ಆ ಯೋಜನೆ ಅಷ್ಟು ಪ್ರಚುರವಗಲಿಕ್ಕೆ ಅವರ ಚಿಂತನೆಯೇ ಕಾರಣವಾಗಿದೆ ಎಂದರು.
ಕೈಗರಿಕೊದ್ಯಮಿ ಡಾ.ಹೆಚ್. ಜಿ. ಚಂದ್ರಶೇಖರ್ ಮಾತನಾಡಿ ನಮ್ಮ ಚಿಂತನೆಗಳು ಬದಲಾಗಿವೆ. ನಾವೆಲ್ಲ ವೈಜ್ಞಾನಿಕ ಹಾದಿಯಲ್ಲಿ ನಡೆಯುತ್ತಿದ್ದೇವೆ ಆದ್ದರಿಂದ ಬೇರೆಯವರನ್ನು ಅನುಸರಿಸುವುದಕ್ಕಿಂತ ನಮ್ಮ ಸ್ವಂತಿಕೆಯಿAದ ನಡೆಯುವುದು ಉತ್ತಮ ಎಂದು ಹೇಳಿದರು.
ನಕಲಿ ಮಾಡಿದ ಕಾರ್ಯಗಳಿಗೆ ಕೇವಲ ಪ್ರಶಂಸೆ ಸಿಗಬಹುದೆ ವಿನಾ ಅದು ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ಅನ್ಯರಿಂದ ನಕಲಿ ಮಾಡುವುದನ್ನು ಆರಂಭಿಸಿದರೆ ಜೀವನದುದ್ದಕ್ಕೂ ನಕಲಿ ಮಾಡುತ್ತಲೇ ಇರಬೇಕಾಗುತ್ತದೆ ಎಂದರು.
ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ ಉದ್ಯಮಗಳಲ್ಲಿ ಪ್ರತಿನಿತ್ಯವೂ ಹೊಸತನವನ್ನು ಕಾಣಬೇಕು. ಸಂಶೋಧನೆಗಳು ಮತ್ತು ಅನ್ವೇಷಣೆಗಳು ಇಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಉತ್ಪನ್ನಗಳ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು. ನಕಲಿ ಮಾಡುವುದರಿಂದ ಸ್ವಂತಿಕೆಯನ್ನು ಮರೆಮಾಚಿದಂತೆ ಆಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಆರಂಭಿಸಿದ ಉದ್ಯಮ / ಸ್ಟಾರ್ಟ್ ಅಪ್ ಗಳಾದ ಕೊಕೊಕ್ರಾಂತಿ ಸಸ್ಟೆöÊನಬಲ್ ಡಿವೈನ್ ಹಾರ್ವೆಸ್ಟ್, ಲೆಗುಂ ಟೇಲ್ಸ್, ಕೊಕೊಸಿರಿ, ಕಲ್ಪತರು ಪ್ರಿಂಟ್ ಎಕ್ಸ್ಪ್ರ‍್ರೆಸ್, ಅಗ್ರೀ ಪುಲ್ಪ್ ಪೇಪರ್ಸ್, ವೇಸ್ಟ್ ಟು ವರ್ಷಿಪ್, ಮಿಡ್‌ಮಂಚ್‌ನ ಒಪ್ಪಂದ ಪತ್ರಗಳನ್ನು ವಿತರಿಸಲಾಯಿತು.
ಸ್ನಾತಕೋತ್ತರ ಬಯೋಟೆಕ್ನಾಲಜಿ ಹಾಗೂ ಮೈಕ್ರೋಬಯಾಲಜಿ ವಿಭಾಗಗಳ ಸಂಯೋಜಕ ಡಾ. ಆರ್. ಜಿ. ಶರತ್‌ಚಂದ್ರ ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)