ತುಮಕೂರು: ದೇಶದಲ್ಲಿ ಭ್ರಷ್ಟಾಚಾರ ಮಕ್ತವಾದಾಗ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರಕಲಿದೆ. ಆದ್ದರಿಂದ ಯುವಜನತೆ ಹೆಚ್ಚು ಶಿಕ್ಷಣವಂತರಾಗಿ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ ಎಂದು ಲೋಕಾಯುಕ್ತ ಎಸ್.ಪಿ ಲಕ್ಷಿ÷್ಮÃನಾರಾಯಣ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ಸಂಸ್ಥೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರದ ನಿರ್ಮೂಲನೆಗೆ ಯುವ ಸಮುದಾಯ ಕೈಜೋಡಿಸಬೇಕು, ಇವತ್ತು ಸಾಮಾಜಿಕ ಜಾಲತಾಣ ಸಕ್ರಿಯವಾಗಿದೆ. ಬಹಳ ಬೇಗ ಭ್ರಷ್ಟರನ್ನು ಮುನ್ನಲೆಗೆ ತರುವಂತಹ ವ್ಯವಸ್ಥೆ ನಮ್ಮ ಕಣ್ಮುಂದೆ ಇರುವಾಗ ಯಾವುದಕ್ಕೂ ಅಂಜದೇ ನಿರ್ಭಿತಿಯಿಂದ ನಮ್ಮ ಇಲಾಖೆಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಲೋಕಾಯುಕ್ತ ಡಿಸಿಪಿ ಡಾ.ಸಂತೋಷ ಕೆ.ಎಂ ಮಾತನಾಡಿ, ದೇಶದಲ್ಲಿ ಲೋಕಾಯುಕ್ತ ಸಂಸ್ಥೆ ಬೆಳೆದು ಬಂದ ಹಾದಿ ಹಾಗೂ ೧೯೮೪ರ ಲೋಕಾಯುಕ್ತ ಕಾಯ್ದೆಯ ಪ್ರಮುಖ ಅಂಶಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ.ಮಂಜುನಾಥ್ ಆರ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ವಿಷಯಗಳ ಜೊತೆ ಸಾಮಾಜಿಕ ಮೌಲ್ಯವುಳ್ಳ ಸಮಾಜವನ್ನು ಕಟ್ಟುವ ನೆಲೆಯಲ್ಲಿ ವಿವಿಧ ಆಯಾಮಗಳನ್ನು ತಮ್ಮದೇ ಭಿನ್ನ ನಿಲುವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಭ್ರಷ್ಟಾಚಾರದಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಬೇಕು. ಇದರ ಬಗ್ಗೆ ಹಲವರಿಗೆ ತಿಳಿಸುವ ಪ್ರಜ್ಞೆ ಮೈಗೂಡಿಸಿಕೊಂಡು ಮುಂದೆ ಸಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ವಸಂತ ಮಾತನಾಡಿ, ಪ್ರತಿ ತಿಂಗಳು ಭ್ರಷ್ಟಾಚಾರ ಜಾಗೃತಿ ಸಪ್ತಾಹ ಕೈಕೊಂಡು ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಮತ್ತು ಕುಟುಂಬದವರಲ್ಲಿ ಅರಿವನ್ನು ಮೂಡಿಸುವ ಮೂಲಕ ತಮ್ಮ ನೈತಿಕ ಮೌಲ್ಯವನ್ನು ಸಾರ್ಥಕಪಡಿಸಬೇಕು ಹಾಗೂ ಲೋಕಾಯುಕ್ತ ಸಂಸ್ಥೆ ಬಳಿ ಹೋಗುವ ಧೈರ್ಯ ಬೆಳೆಸಿಕೊಳ್ಳಬೇಕು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಬೇಕು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಸಿಬ್ಬಂದಿ ನಾಗರಾಜು ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಡಾ.ಶ್ರೀನಿವಾಸ, ಡಾ.ಶಿವಯ್ಯ, ಎಂ.ಮುನಿಸ್ವಾಮಿಗೌಡ, ಡಾ.ಮಂಜುನಾಥ ಎಸ್.ಆರ್, ಡಾ.ಸತೀಶ್‌ಕುಮಾರ್ ಇತರ ಅಧ್ಯಾಪಕರು ಉಪಸ್ಥಿತರಿದ್ದರು. ಡಾ.ಸಯದ್ ಅಕ್ರಮ ಅಲಿ ವಂದನಾರ್ಪಣೆ ನೆರವೇರಿಸಿದರು.

(Visited 1 times, 1 visits today)