
ತುಮಕೂರು: ಒಳಮೀಸಲಾತಿ ಇಲ್ಲದೆ ರಾಜ್ಯದಲ್ಲಿ ೫೬೪೩೨ ಹುದ್ದೆಗಳ ತುಂಬಲು ಹೊರಡಿಸಿರುವ ಅಧಿಸೂಚನೆಯನ್ನು ಕೂಡಲೇ ಹಿಂಪಡೆಯಬೇಕು, ವಿಶ್ವವಿದ್ಯಾಲಯಗಳನ್ನು ಒಂದು ಘಟಕವಾಗಿ ಪರಿಗಣಿಸಿ ನೇಮಕಾತಿ ಕೈಬಿಡಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಆರ್.ಪಿ.ಐ ಕರ್ನಾಟಕ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.
ಕರ್ನಾಟಕದಲಿತ ಸಂಘರ್ಷ ಸಮಿತಿ ಡಾ.ಎನ್.ಮೂರ್ತಿ ಬಣದವ ತಿಯಿಂದ ಜಿಲ್ಲಾಧ್ಯಕ್ಷರಾದ ಪಿ.ಎನ್.ರಾಮಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ, ಸರಕಾರ ಒಳಮೀಸಲಾತಿ ಹೊರತಾಗಿ ಶೇ೧೫ರ ಮೀಸಲಾತಿ ಅಡಿಯಲ್ಲಿ ೫೬೪೩೨ ಹುದ್ದೆಗಳನ್ನು ತುಂಬಲು ಮುಂದಾಗಬಾರದು. ಇದರಿಂದ ಮಾದಿಗ ಸಮುದಾಯಕ್ಕೆ ಬಾರಿಅನ್ಯಾಯ ವಾಗಲಿದೆ. ಸರಕಾರ ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಡಾ.ಎನ್.ಮೂರ್ತಿ ಬಣದ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕರ್ನಾಟಕ ರಾಜ್ಯ ಸರಕಾರ ಸುಪ್ರೀಕೋರ್ಟಿನ ತೀರ್ಪಿನ ಅನ್ವಯ ನಿ.ನ್ಯಾಯ ಮೂರ್ತಿ ನಾಗ ಮೋಹನ್‌ದಾಸ್ ಆಯೋಗ ರಚಿಸಿ ವರದಿ ಪಡೆದು. ತಾರೀಖು : ೨೫/೦೫/೨೦೨೫ ರಂದು ಸಚಿವ ಸಂಪುಟ ವರದಿಯನ್ನು ಅಂಗೀಕರಿಸಿತು. ಆ ನಂತರ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಪರಿಶಿಷ್ಟರ ಉಪ ವಗೀಕರಣ ಮಸೂದೆ ೨೦೨೬ ನ್ನು ಅಂಗೀಕರಿಸಿ ರಾಜ್ಯಪಾಲರಅಂಕಿತ ಪಡೆದು ಮಸೂದೆಅಧಿಕೃತವಾಯಿತು.ಆದರೆರಾಜ್ಯ ಸರ್ಕಾರಎಲ್ಲಾವನ್ನು ಕಡೆಗಣಿಸಿ ಒಳಮೀಸಲಾತಿ ಇಲ್ಲದೆ ೫೬೪೩೨ ಉದ್ಯೋಗ ನೇಮಕಾತಿ ಮಾಡಲು “ಸಚಿವ ಸಂಪುಟ” ದ ತೀರ್ಮಾನದಂತೆ, ತಾರೀಖು ೨೭/೦೨/೨೦೨೬ ರಂದು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಂತೆಉದ್ಯೋಗ ನೇಮಕಾತಿ ನಡೆದರೆ ಮಾದಿಗ ಮತ್ತು ಸಂಬ0ಧಿತ ಉಪಜಾತಿಗಳಿಗೆ ಜನ ಸಂಖ್ಯೆ ಅನುಗುಣವಾಗಿ ಉದ್ಯೋಗ ದೊರಕದೆ ಅನ್ಯಾಯವಾಗುತ್ತದೆ ಎಂದರು.
ಮಾದಿಗ ಮತ್ತು ಮಾದಿಗ ಸಂಬ0ಧಿತ ಜಾತಿಗಳು ಸಹಸ್ರಾರು ವರ್ಷಗಳಿಂದ ಚಪ್ಪಲಿ ಹೊಲಿಯುವುದು. ಬೀದಿ ಗುಡಿಸುವುದುಚರಂಡಿ ಸ್ವಚ್ಚ ಮಾಡುವ ಕೀಳು ವೃತ್ತಿಯಲ್ಲಿಕನಿಷ್ಠ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ತೀರ ಬಡತನ, ನಿರುದ್ಯೋಗವಿಲ್ಲದೆ ದಯನೀಯ ಸ್ಥಿತಿಯಲ್ಲಿ ಬರಡುಜೀವನ ನಡೆಸುತ್ತಿದ್ದಾರೆ. ಅಷ್ಟೆಅಲ್ಲದೆ ೧೦೧ ಪರಿಶಿಷ್ಟ ಜಾತಿಗಳ ಅಯಾ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ನೀಡಿ ಸಮಪಾಲು ಸಮಬಾಳು ನೀತಿ ಅನುಸರಿಸಲಿ. ಹಾಗಾಗಿ ಸಮುದಾಯಗಳು ಸ್ವಾಲಂಭಿಗಳಾಗಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸರಕಾರಿ ಉದ್ಯೋಗ ತೀರ ಅಗತ್ಯವಾಗಿದೆ. ರಾಜ್ಯ ಸರಕಾರ ಉದ್ಯೋಗಳಲ್ಲಿ ಮೀಸಲಾತಿ ಕಲ್ಪಿಸಲು ಕಾನೂನು ತೊಡಕು, ತಾಂತ್ರಿಕ ಅಡಚಣೆಯ ಕುಂಟು ನೆಪ ಹೇಳುತ್ತಿರುವುದು ಈ ಸಮಾಜವನ್ನು ವಂಚಿಸುವ ರಾಜಕೀಯ ಹುನ್ನಾರವಾಗಿದೆ. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್, ಬಿ.ಜೆ.ಪಿ. ಜೆ.ಡಿ.ಎಸ್ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಪ್ರಾಮಾಣಿಕ ಪ್ರಯತ್ನ ಮಾಡದೆ ವಂಚಿಸಿವೆ ಎಂದು ಪಿ.ಎನ್.ರಾಮಯ್ಯದೂರಿದರು.
ಪ್ರಸ್ತಕವಾಗಿ ೫೬೪೩೩ ಉದ್ಯೋಗ ನೇಮಕಾತಿ ಹಾಗೂ ಮುಂದಿನ ಎಲ್ಲಾ ಉದ್ಯೋಗ ನೇಮಕಾತಿಗಳಲ್ಲೂ ಒಳ ಮೀಸಲಾತಿ ಅಳವಡಿಸಬೇಕೆಂಬ ಆಗ್ರಹ ನಮ್ಮದು,ಸರಕಾರ ಈ ನಿಟ್ಟಿನಲ್ಲಿಯಾವ ಪಕ್ಷಪಾತತೋರದೆಎಲ್ಲಾ ನೇಮಕಾತಿಗಳಲ್ಲಿಯೂ ಒಳಮೀಸಲಾತಿ ಅಳವಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆದೊಡ್ಡ ಹೊಡೆತವನ್ನು ಮಾದಿಗ ಸಂಘಟನೆಗಳು ನೀಡಲಿವೆ ಎಂಬ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿಡಿಎಸ್.ಎಸ್ ಪದಾಧಿಕಾರಿಗಳಾದ ಗೂಳೂರು ರಾಜಣ್ಣ, ನಾಗರಾಜ ಗೂಳರಿವೆ,ಸುನಿಲ್, ಹರಿನಾಥ್, ಶಾಂತಕುಮಾರ್, ರಂಗನಾಥ್, ಟಿ.ಕೆ.ನರಸೀಯಪ್ಪ, ಎ.ನಾಗೇಶ್, ಲಕ್ಷö್ಮಮ್ಮ, ಬೆಣ್ಣೇನಹಳ್ಳಿ ರಾಜು, ಸಾಕ್ಷರತಾ ಪ್ರೇರಕರ ಸಂಘದ ರಾಜಣ್ಣ.ಜಿ,ಸತೀಶ್ ಕಂಟಲಗೆರೆ,ರ0ಗಸ್ವಾಮಿ,ಉಮೇಶ್.ಕೆ.ಆರ್.,ಮಾನ0ಗಿ ನಾರಾಯಣಪ್ಪ,ಹುನಮಂತಯ್ಯ, ರಾಮಚಂದ್ರಯ್ಯ, ಹನುಮಂತರಾಜು,ಪುಟ್ಟರಾಜು,ಪುಟ್ಟಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



