ತುಮಕೂರು: ಕೃತಕ ಬುದ್ಧಿಮತ್ತೆ ರೋಬೋಟಿಕ್ಸ್, ಆಟೋಮೇಷನ್, ಐಒಟಿ ಹಾಗೂ ಆಧುನಿಕ ಕೈಗಾರಿಕಾ ಕ್ಷೇತ್ರಗಳಲ್ಲಿ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟಕ್ಕೆ ಸಮರ್ಥ ವೃತ್ತಿಪರರನ್ನಾಗಿ ರೂಪಿಸುಸ ಸಂಬAಧ ಬೆಂಗಳೂರಿನ ‘ಅಡ್ವಾನ್ಸ್ಡ್ ಮೆಕ್ಯಾನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಜೊತೆ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ.
ನಗರ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶೈಕ್ಷಣಿಕ ಮತ್ತು ಉದ್ಯಮ ಕ್ಷೇತ್ರದ ಸಹಭಾಗಿತ್ವದಡಿಯಲ್ಲಿ ಮಂಗಳವಾರದAದು ನಡೆದ ಜಂಟಿ ಒಡಂಬಡಿಕೆ ಸಭೆ ನಂತರ ‘ಅಡ್ವಾನ್ಸ್ಡ್ ಮೆಕ್ಯಾನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯೊAದಿಗೆ ಪ್ರಮುಖ ಶೈಕ್ಷಣಿಕ ಮತ್ತು ಕೈಗಾರಿಕಾ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ. ನಡಕಟ್ಟಿ ಅವರು ಮಾತನಾಡಿ “ರೋಬೋಟಿಕ್ಸ್ ಹಾಗೂ ಎಐ ಕ್ಷೇತ್ರದಲ್ಲಿ ಉದ್ಯಮದೊಂದಿಗೆ ಮಾಡಿಕೊಂಡಿರುವ ಒಪ್ಪಂದವು ಕಾಲೇಜಿನ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ. ಚೀನಾ, ಸ್ವೀಡನ್ ಮುಂತಾದ ವಿದೇಶಗಳಲ್ಲಿ ವೈದ್ಯಕೀಯ, ಹೋಟೆಲ್ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ರೋಬೋಟ್‌ಗಳ ಬಳಕೆ ವ್ಯಾಪಕವಾಗಿದೆ. ಭಾರತದಲ್ಲೂ ದಿನನಿತ್ಯದ ಚಟುವಟಿಕೆಗಳು ಹಾಗೂ ಸೇವಾ ಕ್ಷೇತ್ರಗಳಲ್ಲಿ ರೋಬೋಟಿಕ್ಸ್ ಕ್ರಾಂತಿ ಆರಂಭವಾಗುತ್ತಿದ್ದು, ಈ ಒಪ್ಪಂದವು ವಿದ್ಯಾರ್ಥಿಗಳ ಇಂಟರ್ನ್ಶಿಪ್, ಪ್ರಾಯೋಗಿಕ ತರಬೇತಿ ಮತ್ತು ಸಂಶೋಧನೆಗೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ ಎಂದರು.
ಈ ಒಪ್ಪಂದವು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್, ಕೈಗಾರಿಕಾ ತರಬೇತಿ, ಸಂಶೋಧಕರಿಗೆ ನೈಜ ಪ್ರಾಜೆಕ್ಟ್ಗಳು ಹಾಗೂ ಬೋಧಕರಿಗೆ ವಿಶೇಷ ತರಬೇತಿ ನೀಡಿ ಮುಂದಿನ ಹಂತಕ್ಕೆ ಕೊಂಡೊಯ್ಯಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಎಎಂಎಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಸಿ. ಶಶಿಧರ್ ಮಾತನಾಡಿ, ಕೈಗಾರಿಕಾ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಮ್ಮ ಸಂಸ್ಥೆಯು ಹಲವು ನವೀನ ರೋಬೋಟಿಕ್ ತಂತ್ರಜ್ಞಾನಗಳನ್ನು ಪರಿಚಯಿಸಿದೆ. ಅಮೆರಿಕಾ ಮೂಲದ ಈಎಜಿಬಿ ರೋಬೋಟಿಕ್ಸ್’ ಜೊತೆ ಸಹಭಾಗಿತ್ವ ಹೊಂದಿದ್ದು, ಭಾರತದಲ್ಲಿ ವಿಶೇಷ ‘ಸರ್ವಿಸ್ ರೋಬೋಟ್‌ಗಳನ್ನು’ ತಯಾರಿಸುತ್ತಿದೆ. ಈ ರೋಬೋಟ್‌ಗಳು ರೈಲುಗಳ ಕೆಳಭಾಗವನ್ನು ಕೂಲಂಕಷವಾಗಿ ತಪಾಸಣೆ ಮಾಡಲಿವೆ. ರೈಲುಗಳ ಗಾಲಿ, ಚಕ್ರಗಳ ಗಾತ್ರ, ಬೋಲ್ಟ್ಗಳ ಸಡಿಲಿಕೆ ಹಾಗೂ ಹಾನಿಯನ್ನು ಇದು ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ವರದಿ ನೀಡುತ್ತದೆ. ಈ ಹಿಂದೆ ೬ ಗಂಟೆ ತೆಗೆದುಕೊಳ್ಳುತ್ತಿದ್ದ ತಪಾಸಣಾ ಕಾರ್ಯವನ್ನು ಈ ರೋಬೋಟ್ ಕೇವಲ ೨ ಗಂಟೆಗಳಲ್ಲಿ ಪೂರ್ಣಗೊಳಿಸಲಿದೆ ಎಂದರು.
ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆ ಹಾಗೂ ಟೆಲಿಮೆಡಿಸಿನ್‌ಗಾಗಿ ವಿಶೇಷ ರೋಬೋಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಐಐಟಿ ಮತ್ತು ಎನ್‌ಐಟಿ ಯಂತಹ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಿಗೆ ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ ಸಂಸ್ಥೆಯು ೩ಡಿ ಪ್ರಿಂಟಿAಗ್ ಮತ್ತು ‘ಐಐಒಟಿ’ ಕಿಟ್‌ಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಹೊಸ ಪ್ರಬಂಧಗಳನ್ನು ಪ್ರಕಟಿಸಲು ಮತ್ತು ಪಿಎಚ್‌ಡಿ ಅಧ್ಯಯನಕ್ಕೆ ಬೆಂಬವನ್ನು ತಮ್ಮ ಸಂಸ್ಥೆಯಿAದ ನೀಡಲಾಗುತ್ತಿದೆ ಎಂದರು.
ಇದೇ ವೇಳೆ ‘ಅಡ್ವಾನ್ಸ್ಡ್ ಮೆಕ್ಯಾನಿಕಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ನ ರೋಬೋಟಿಕ್ಸ್ ತಂತ್ರಜ್ಞಾನ ಪ್ರಾತ್ಯಕ್ಷತೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಎಎಂಎಸ್ ಸಂಸ್ಥೆಯ ನಿರ್ದೇಶಕರಾದ ಬೋರಿಸ್ ಜೊಲೊಟೇಕ್ನರ್, ವ್ಯವಸ್ಥಾಪಕ ನಿರ್ದೇಶಕರಾದ ಚೇತನ್, ಎಸ್‌ಎಸ್‌ಐಟಿ ಡೀನ್‌ಗಳಾದ ಡಾ. ರೇಣುಕಲತಾ ಎಸ್ ಮತ್ತು ಡಾ. ದಿವ್ಯಪ್ರಭಾ ಸಹಾಯಕ ರಿಜಿಸ್ಟ್ರಾರ್ (ಮೌಲ್ಯಮಾಪನ) ಡಾ. ಸುಮಾ ಆರ್, ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ವಿಭಾಗದ ಮುಖ್ಯಸ್ಥರಾದ ಡಾ. ಸುಮನಾ ಎಲ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

(Visited 1 times, 1 visits today)