
ತುಮಕೂರು: ಕನಿಷ್ಠ ವೇತನ ಅಧಿಸೂಚನೆಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು, ಪಿಎಫ್ ಮತ್ತು ಇಎಸ್‌ಐ ಮಿತಿಗಳನ್ನು ರದ್ದುಗೊಳಿಸಬೇಕು, ಭೂಕಂದಾಯ ವಸೂಲಿಯಲ್ಲಿ ನ್ಯಾಯಾಲಯದ ತೀರ್ಪುಗಳನ್ನು ತಕ್ಷಣ ಪಾಲಿಸಬೇಕು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ತುಮಕೂರು ಜಿಲ್ಲಾ ಸಮಿತಿಯು ಪ್ರತಿಭಟನಾ ಮೆರವಣಿಗೆ ಮತ್ತು ಧರಣಿ ನಡೆಸಿ ೩ ಗಂಟೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ಜಿಲ್ಲಾಧಿಕಾರಿಗಳ ಕಚೇರಿ ಎದುರು ತಲುಪಿತು. ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಖಜಾಂಚಿ ಎ. ಲೋಕೇಶ್, ಪ್ರ.ಕಾರ್ಯದರ್ಶಿ ಜಿ. ಕಮಲ, ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ರಂಗಧಾಮಯ್ಯ, ಮಧುಸೂಧನ್ ಅವರ ನೇತೃತ್ವದಲ್ಲಿ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ತುಮಕೂರು ಪೌರ ಕಾರ್ಮಿಕರ ಸಂಘದ ರಾಜೇಶ್, ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘದ ಪ್ರಕಾಶ್, ತುಮಕೂರು ಮಹಾನಗರ ಪಾಲಿಕೆ ಕಸದ ಆಟೋ ಚಾಲಕರು ಮತ್ತು ಸಹಾಯಕರ ಸಂಘದ ಮಾರುತಿ, ಜಿಲ್ಲಾ ನೀರು ಸರಬರಾಜು ನೌಕರರ ಸಂಘದ ಕುಮಾರ್, ಸರ್ಕಾರಿ ಆಸ್ಪತ್ರೆ ಕಾರ್ಮಿಕರ ಸಂಘದ ರಂಗಮ್ಮ, ವಿವಿ ನೌಕರರ ಸಂಘದ ಲಕ್ಷಿö್ಮÃ, ಸಿಂಧೂರ್ ಪೋರ್ಜ ಕಾರ್ಮಿಕರ ಸಂಘದ ಗೋಪಾಲ್, ಉಮೇಶ್ ಮತ್ತು ಸಿಕೋಮಾ ಪೈ. ಲಿ ಕಾರ್ಮಿಕರ ಸಂಘದ ಪ್ರತಿನಿಧಿಗಳು ಮಾತನಾಡಿದರು.
ಕಾರ್ಮಿಕರ ಬೇಡಿಕೆಗಳು:
ಕನಿಷ್ಠ ವೇತನ ಅಧಿಸೂಚನೆಯ ಪೂರ್ಣ ಜಾರಿ: ಮೇ ೨೨, ೨೦೨೬ರ ಕನಿಷ್ಠ ವೇತನ ಅಧಿಸೂಚನೆಯನ್ನು ಪೂರ್ಣ ಪ್ರಮಾಣದಲ್ಲಿ ತಕ್ಷಣ ಜಾರಿಗೊಳಿಸಬೇಕು. ಕನಿಷ್ಠ ವೇತನವು ಕಾರ್ಮಿಕರ ಮಾನವೀಯ ಗೌರವದ ಪ್ರಶ್ನೆಯಾಗಿದ್ದು, ಯಾವುದೇ ಒತ್ತಡಕ್ಕೆ ಮಣಿದು ಅಧಿಸೂಚನೆಯನ್ನು ಹಿಂಪಡೆಯಬಾರದು.
ಇ.ಎಸ್.ಐ ಮತ್ತು ಇಪಿಎಫ್ ಮಿತಿಗಳ ರದ್ದು ಅಥವಾ ಪರಿಷ್ಕರಣೆ: ಪ್ರಸ್ತುತ ಇ.ಎಸ್.ಐ ಮಿತಿ ೨೧,೦೦೦ ಮತ್ತು ಇಪಿಎಫ್ ಮಿತಿ ೧೫,೦೦೦ ಇದೆ. ಕನಿಷ್ಠ ವೇತನ ಹೆಚ್ಚಳದಿಂದಾಗಿ ಅನೇಕ ಕಾರ್ಮಿಕರು ಈ ಮಿತಿಗಳನ್ನು ದಾಟಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯಿಂದ ಹೊರಗುಳಿಯುತ್ತಿದ್ದಾರೆ. ಇ.ಎಸ್.ಐ ಅನಾರೋಗ್ಯ, ಹೆರಿಗೆ, ಅಂಗವೈಕಲ್ಯ ಸಮಯದಲ್ಲಿ ವೈದ್ಯಕೀಯ ನೆರವು ನೀಡುತ್ತದೆ; ಇಪಿಎಫ್ ವೃದ್ಧಾಪ್ಯದಲ್ಲಿ ಆಧಾರವಾಗುತ್ತದೆ. ಈ ಯೋಜನೆಗಳಿಂದ ಯಾರೂ ವಂಚಿತರಾಗಬಾರದು. ಮಿತಿಗಳನ್ನು ರದ್ದುಗೊಳಿಸಬೇಕು ಅಥವಾ ಕನಿಷ್ಠ ೩೦,೦೦೦ಕ್ಕೆ ಏರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.
೧೯ ವಲಯಗಳಿಗೆ ಕನಿಷ್ಠ ವೇತನ: ಗಾರ್ಮೆಂಟ್, ಬೀಡಿ, ಅಗರ್ಬತ್ತಿ, ತೋಟಗಾರಿಕೆ, ಸ್ಕೀಮ್ ನೌಕರರು, ಮಧ್ಯಾಹ್ನದ ಊಟದ ಸಿಬ್ಬಂದಿ, ಕೈಗಾರಿಕಾ ತ್ಯಾಜ್ಯ ಸಂಗ್ರಹ ಸೇರಿದಂತೆ ೧೯ ವಲಯಗಳು ಇನ್ನೂ ಕನಿಷ್ಠ ವೇತನದ ವ್ಯಾಪ್ತಿಗೆ ಬಂದಿಲ್ಲ. ಈ ವಲಯಗಳ ಕಾರ್ಮಿಕರು ದಿನಕ್ಕೆ ೧೦-೧೨ ಗಂಟೆಗಳ ಕಾಲ ಶ್ರಮಿಸುತ್ತಿದ್ದರೂ ಸಾಕಷ್ಟು ಕೂಲಿ ಸಿಗುತ್ತಿಲ್ಲ. ಈ ಎಲ್ಲಾ ವಲಯಗಳಿಗೂ ತಕ್ಷಣ ಕನಿಷ್ಠ ವೇತನ ಜಾರಿಗೊಳಿಸಬೇಕು.
ಸರ್ಕಾರವೇ ಮಾದರಿ ಉದ್ಯೋಗದಾತನಾಗಬೇಕು: ಸರ್ಕಾರವು ದೇಶದ ಅತಿದೊಡ್ಡ ಉದ್ಯೋಗದಾತನಾಗಿದ್ದು, ಅದು ಮಾದರಿ ಉದ್ಯೋಗದಾತನಾಗಿ ವರ್ತಿಸಬೇಕು. ಗುತ್ತಿಗೆ, ಔಟ್ಸೋರ್ಸಿಂಗ್, ಆಸ್ಪತ್ರೆಗಳು, ವಿಶ್ವವಿದ್ಯಾಲಯಗಳು, ಪುರಸಭೆಗಳು, ಸರ್ಕಾರಿ ಇಲಾಖೆಗಳು, ಮಂಡಳಿಗಳು, ನಿಗಮಗಳು ಮತ್ತು ಇತರ ಸರ್ಕಾರಿ ಸೇವೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೆ ಇನ್ನೂ ಕನಿಷ್ಠ ವೇತನ ಜಾರಿಯಾಗಿಲ್ಲ. ಸರ್ಕಾರಿ ಆಸ್ಪತ್ರೆಗಳ ಸ್ವಚ್ಛತಾ ಕಾರ್ಮಿಕರು, ವಿಶ್ವವಿದ್ಯಾಲಯಗಳ ಗುತ್ತಿಗೆ ನೌಕರರು, ಮುನಿಸಿಪಾಲಿಟಿಯಲ್ಲಿ ತ್ಯಾಜ್ಯ ಸಂಗ್ರಹಕಾರರು, ನೀರು ಸರಬರಾಜು ಸಿಬ್ಬಂದಿ, ವಿವಿಧ ಇಲಾಖೆಗೆ ಗುತ್ತಿಗೆ ಮತ್ತು ಹೊರಗುತ್ತಿಗೆ ಸಿಬ್ಬಂದಿ – ಇವರೆಲ್ಲರಿಗೂ ಸೂಚಿತ ವೇತನ ನೀಡಬೇಕು. ಸರ್ಕಾರವೇ ಕನಿಷ್ಠ ವೇತನವನ್ನು ಪಾಲಿಸದಿದ್ದರೆ, ಖಾಸಗಿ ಉದ್ಯೋಗದಾತರು ಅದನ್ನು ಅನುಸರಿಸಲು ಹೇಗೆ ಸಾಧ್ಯ?
ನ್ಯಾಯಾಲಯದ ತೀರ್ಪುಗಳ ತಕ್ಷಣ ಪಾಲನೆ: ಕಾರ್ಮಿಕ ಪ್ರಕರಣಗಳಲ್ಲಿ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ತಕ್ಷಣ ಪಾಲಿಸಬೇಕು. ಅಪಘಾತ, ಅನಾರೋಗ್ಯ, ಸೇವಾ ವೇತನ, ಉಪಧನ, ಪರಿಹಾರದ ಬಾಕಿಗಳಿಗೆ ಸಂಬAಧಿಸಿದ ಪ್ರಕರಣಗಳಲ್ಲಿ ಸಂತ್ರಸ್ತರಾಗಿರುವುದು ಹೆಚ್ಚಾಗಿ ವೃದ್ಧರು ಮತ್ತು ಮೃತರ ಕುಟುಂಬದ ವಿಧವೆಯರು. ನ್ಯಾಯಾಲಯಗಳು ಅವರ ಪರವಾಗಿ ತೀರ್ಪು ನೀಡಿದ್ದು, ಪರಿಹಾರದ ಮೊಬಲಗನ್ನು ಜಿಲ್ಲಾಡಳಿತವು ಭೂಕಂದಾಯ ಬಾಕಿಯಾಗಿ ಪರಿಗಣಿಸಿ ವಸೂಲಿಗೆ ಕ್ರಮ ವಹಿಸಬೇಕಾಗಿದೆ. ಆದರೆ ಜಿಲ್ಲಾಡಳಿತವು ಈ ಆದೇಶಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ ವರ್ಷಗಟ್ಟಲೆ ವಿಳಂಬ ಮಾಡುತ್ತಿದೆ. ಬಾಕಿ ಇರುವುದು ಕೇವಲ ಹಣವಲ್ಲ; ಅದು ಅವರ ಬದುಕಿಗೆ ಬೆಂಬಲವಾಗಬೇಕಾದ ಆಸರೆ. ಈ ವೃದ್ಧರು ಮತ್ತು ವಿಧವೆಯರಿಗೆ ನ್ಯಾಯಾಲಯದ ತೀರ್ಪಿನ ಮೂಲಕ ದೊರೆತಿರುವ ಪರಿಹಾರವನ್ನು ತಕ್ಷಣ ಒದಗಿಸಲು ಭೂಕಂದಾಯ ಬಾಕಿ ಪ್ರಕರಣಗಳಲ್ಲಿ ತ್ವರಿತ ಕ್ರಮ ವಹಿಸಬೇಕು.
ಸ್ಕೀಮ್ ನೌಕರರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ: ಅಂಗನವಾಡಿ, ಆಶಾ ಸಿಬ್ಬಂದಿ, ಮಧ್ಯಾಹ್ನದ ಊಟದ ಸಿಬ್ಬಂದಿಯAತಹ ಸರ್ಕಾರಿ ಯೋಜನೆಗಳ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ, ಬಾಕಿ ಸಂಬಳ, ಇ.ಎಸ್.ಐ /ಪಿಎಫ್ ಸೌಲಭ್ಯಗಳು ಮತ್ತು ಕೆಲಸದ ಸ್ಥಳದ ಸುರಕ್ಷತೆಯ ಖಾತರಿ ನೀಡಬೇಕು.


