ತುಮಕೂರು: ನಗರದ ವಿವಿಧ ಪ್ರದೇಶಗಳಲ್ಲಿ ನಗರಪಾಲಿಕೆ ಅಧಿಕಾರಿಗಳು ಫುಟ್‌ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಫುಟ್‌ಪಾತ್ ವ್ಯಾಪಾರಿಗಳಿಗೆ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡದೆ ಅವರನ್ನು ತೆರವು ಮಾಡಿಸಬಾರದು ಎಂದು ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ ಮನವಿ ಮಾಡಿದ್ದಾರೆ.
ನಗರದೆಲ್ಲೆಡೆ ಸುಮಾರು ೫ ಸಾವಿರಕ್ಕೂ ಹೆಚ್ಚು ಫುಟ್‌ಪಾತ್ ವ್ಯಾಪಾರಿಗಳು ಹಲವಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈಗ ಏಕಾಏಕಿ ಅವರನ್ನು ಎತ್ತಂಗಡಿ ಮಾಡಿದರೆ ಅವರ ಬದುಕು ಬೀದಿ ಪಾಲಾಗುತ್ತದೆ. ಎಷ್ಟೂ ಜನ ಫುಟ್‌ಪಾತ್ ವ್ಯಾಪಾರಿಗಳು ಪ್ರಧಾನ ಮಂತ್ರಿಗಳ ಯೋಜನೆಯಡಿ ಸಾಲ ಪಡೆದಿದ್ದಾರೆ, ಖಾಸಗಿ ಸಂಸ್ಥೆಗಳಿAದ ಸಾಲ ಪಡೆದು ವ್ಯವಹಾರ ನಡೆಸುತ್ತಿದ್ದಾರೆ. ಈಗ ತೆರವು ಮಾಡಿದರೆ ಸಾಲ ಮರು ಪಾವತಿಗೆ ಹಾಗೂ ಜೀವನ ನಿರ್ವಹಣೆಗೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಆರ್ಥಿಕವಾಗಿ ದುರ್ಬಲರಾಗಿರುವವರು, ಅನೇಕ ವಿಕಲಚೇತನರು ಫುಟ್‌ಪಾತ್‌ನಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಈಗ ಅವರನ್ನು ಜಾಗ ಖಾಲಿ ಮಾಡಿಸಿದರೆ ಅವರ ಜೀವನ ಅಸ್ತವ್ಯಸ್ತವಾಗುತ್ತದೆ. ಫುಟ್‌ಪಾತ್ ವ್ಯಾಪಾರಿಗಳ ಬದುಕು ರಕ್ಷಣೆ ಮಾಡಲು ಅವರಿಗೆ ಪರ್ಯಾಯ ವುವಸ್ಥೆ ಮಾಡಬೇಕು ಎಂದು ಎಂ.ಗೋಪಿ ವಿನಂತಿ ಮಾಡಿದ್ದಾರೆ.
ಸಂಘದ ರಾಜ್ಯ ಉಪಾಧ್ಯಕ್ಷ ಆದಿಲ್ ಬಾಷಾ, ಪ್ರಧಾನ ಕಾರ್ಯದರ್ಶಿ ರಾಜಣ್ಣ, ಮಹಿಳಾ ಘಟಕ ಅಧ್ಯಕ್ಷೆ ಜಿ. ರಮ್ಯಶ್ರೀ ಫುಟ್‌ಪಾತ್ ವ್ಯಾಪಾರ ತೆರವು ಮಾಡದಂತೆ ಮನವಿ ಮಾಡಿದ್ದಾರೆ.

(Visited 1 times, 1 visits today)