ಪಾವಗಡ: ತಾಲೂಕಿನಲ್ಲಿ ನೆಲೆಸಿರುವ ನಾಗಲಮಡಿಕೆಯ ಅಂತ್ಯ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಜೀಣೋರ್ದಾ್ಧರಕ್ಕೆ ಶಕ್ತಿ ಮೀರಿ ಅನುದಾನ ನೀಡಲಾಗುವುದು ಮತ್ತು ಜೀಣೋರ್ದಾ್ಧರದ ಭೂಮಿ ಪೂಜೆಗೆ ಆಗಮಿಸುತ್ತೇನೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.
ತಾಲೂಕಿನ ಬೆಳ್ಳಿಬಟ್ಲು ಗ್ರಾಮದಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮ ನಿಮಿತ್ತ ಆಗಮಿಸಿದ ಸಚಿವರು ಅರಣ್ಯ ಇಲಾಖೆಯಿಂದ ನಿಮಾರ್ಣ ಮಾಡಿರುವ ಸಾಲುಮರದ ತಿಮ್ಮಕ್ಕ ಸಸ್ಯೋಧ್ಯಾನ ವೀಕ್ಷಿಸಿ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಮಾನವ ವನ್ಯಜಿವಿ ಪ್ರಕರಣಗಳಲ್ಲಿ ರೈತರಿಗೆ ಸಮರ್ಪಕವಾಗಿ ಸ್ಪಂದಿಸಬೇಕು. ವನ್ಯಜಿವಿಗಳು ನಾಡಿನತ್ತ ಬರದಂತೆ ಅಗತ್ಯವಿರುವ ಎಲ್ಲ ಸೌಲಭ್ಯಗಳಿಗೆ ಸಂಬAಧಿಸಿದ ಕಾಮಗಾರಿಗಳನ್ನು ಅರಣ್ಯ ಪ್ರದೇಶಗಳಲ್ಲಿ ನಿರ್ವಹಿಸಬೇಕು ಎಂದು ಸೂಚಿಸಿದರು.
ಬರಪೀಡಿತ ಪಾವಗಡ ತಾಲೂಕನ್ನು ಹಸಿರೀಕರಣ ಮಾಡುವ ಉದ್ದೇಶದಿಂದ ತಾಲೂಕಿನ ಕೆರೆಗಳಿಗೆ ನೀರು ಹರಿಸುವ ಯೋಜನೆಯಾದ ತುಂಗಭದ್ರಾ ಎಡದಂಡ ಕಾಲುವೆಯ ಯೋಜನೆಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಿ, ಮುಂದಿನ ವರ್ಷದ ಒಳಗೆ ನೀರನ್ನು ಹರಿಸಲಾಗುವುದು. ಈಗಾಗಲೇ ತುಮಕೂರು ಮತ್ತು ಚಿತ್ರದುರ್ಗದವರೆಗೂ ನೀರು ಹರಿಸಿದ್ದು, ಮುಂದಿನ ವರ್ಷದ ಒಳಗಡೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ರಾಷ್ಟಿçÃಯ ಕಿಸಾನ್ ಸಂಘದ ಅಧ್ಯಕ್ಷ ವಿ.ನಾಗಭುಷಣ ರೆಡ್ಡಿ ಮಾತನಾಡಿ, ತಾಲೂಕು ಬರದಿಂದ ತತ್ತರಿಸುತ್ತಿದ್ದು, ಸಿಎಸ್‌ಆರ್ ಅನುದಾನವನ್ನು ಬೇರೆ ತಾಲೂಕು, ಜಿಲ್ಲೆಗಳಿಗೆ ವರ್ಗಾಯಿಸಬಾರದು. ತಾಲೂಕಿನ ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಲು ಸೂಚನೆ ನೀಡಬೇಕು ಎಂದು ಹೇಳಿದರು.
ತಾಲೂಕಿನ ಬಿ.ಕೆ.ಹಳ್ಳಿಯ ಮುಖಂಡ ಮಂಜುನಾಥ ರೆಡ್ಡಿ ಹಾಗೂ ಗ್ರಾಮಸ್ಥರು ಕಾಮನದುರ್ಗದ ಬೆಟ್ಟದ ತಪ್ಪಲಿನಲ್ಲಿ ಕೆರೆ ನಿಮಾರ್ಣ ಮಾಡಲು ಅರಣ್ಯ ಇಲಾಖೆಯಿಂದ ಅನುದಾನ ಬಿಡುಗಡೆ ಮತ್ತು ಸಹಕಾರ ನೀಡಲು ಮನವಿ ಮಾಡಿದರು.
ಸಾಮಾಜಿಕ ಅರಣ್ಯ ಅಧಿಕಾರಿ ಕೆ.ಎನ್.ಹರ್ಷಿತಾ, ಪುರಸಭೆ ಮಾಜಿ ಅಧ್ಯಕ್ಷರಾದ ಎ.ಶಂಕರರೆಡ್ಡಿ, ಡಿ.ವೇಲುರಾಜು, ಲಕ್ಷಿö್ಮÃನರಸಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕಲ್ಪವೃಕ್ಷ ರವಿ, ಸಂಗೀತ ನಾಗಾರ್ಜುನರೆಡ್ಡಿ, ಮಧುಗಿರಿಯ ವಿಎಸ್ಸೆಸ್ಸೆಎನ್ ಅಧ್ಯಕ್ಷ ಗೋವಿಂದರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಿಕ್ಕೂಬರೆಡ್ಡಿ, ಜೈಶಂಕರೆಡ್ಡಿ ಭಾಸ್ಕರ್ ರೆಡ್ಡಿ ಮತ್ತಿತರರು ಇದ್ದರು.
(Visited 1 times, 1 visits today)



