ತುಮಕೂರು
ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ
ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿಯು 50ನೇ ವರ್ಷದ ಗಣೇಶೋತ್ಸವಕ್ಕೆ ವೈಭವಪೂರ್ಣ ಸಿದ್ಧತೆಗಳೊಂದಿಗೆ ಸಜ್ಜಾಗಿದ್ದು, ಈ ಬಾರಿ ಘೋರ ರಕ್ಕಸ ಮೀರಜಾ ರಾಕ್ಷಸಿ ಸಂಹಾರ ಅಥವಾ ಶ್ರೀ ಬಾಲಗಣಪತಿ ವಿಜಯ ಎಂಬ ದೃಶ್ಯಾವಳಿಯೊಂದಿಗೆ ಗಣೇಶಮೂರ್ತಿ ಪ್ರತಿಷ್ಠಾಪಿಸಲಿದೆ. ಸೆ. 14 ರ ಗಣೇಶ ಚತುರ್ಥಿಯಂದು 50ನೇ ವರ್ಷದ ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಗಳು ನೆರವೇರಲಿದ್ದು, 31ದಿನಗಳ ಕಾಲ ಪೂಜಾ ಕಾರ್ಯಗಳು, ವೈವಿಧ್ಯ ಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಮಂಡಳಿಯ ಅಧ್ಯಕ್ಷ ಪ್ರಭು ಎಸ್.ಬಿ. ಹಾಗೂ ಉಪಾಧ್ಯಕ್ಷ ಟಿ.ಹೆಚ್. ಪ್ರಸನ್ನಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸೆ. 14 ರಂದು ಬೆಳಿಗ್ಗೆ 11.30 ಗಂಟೆಗೆ ಶ್ರೀ ಸಿದ್ದಿವಿನಾಯಕಸ್ವಾಮಿ ಪ್ರತಿಷ್ಠಾಪನಾ ಪೂಜಾ ಕೈಂಕರ್ಯಗಳು ನೆರವೇರಲಿವೆ. ಸಂಜೆ 6ಕ್ಕೆ ಗಣೇಶೋತ್ಸವ, ಘೋರ ರಕ್ಕಸ ಮೀರಜಾ ರಾಕ್ಷಸಿ ಸಂಹಾರ ಅಥವಾ ಶ್ರೀ ಬಾಲಗಣಪತಿ ವಿಜಯ ದೃಶ್ಯಾವಳಿ ಉದ್ಘಾಟನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಲಿರುವ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಹಾದ್ವಾರ ಹಾಗೂ ದೃಶ್ಯಾವಳಿಯನ್ನು ಉದ್ಘಾಟಿಸುವರು. ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಶಾಸಕ ಜ್ಯೋತಿಗಣೇಶ್ ನೆರವೇರಿಸುವರು. ಅಧ್ಯಕ್ಷತೆಯನ್ನು ಮಂಡಳಿ ಅಧ್ಯಕ್ಷ
ಪ್ರಭು ಎಸ್.ಬಿ. ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಶುಭ ಬಿ., ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ.ಎಸ್. ನರಸಿಂಹಮೂರ್ತಿ, ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಅಧ್ಯಕ್ಷರಾದ ಬಿ.ಎಸ್. ಮಂಜುನಾಥ್, ಆಡಿಟರ್ ಟಿ.ಆರ್. ಆಂಜನಪ್ಪ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು. ಪ್ರತಿದಿನ ಸಂಜೆ 7 ಗಂಟೆಗೆ ಸುಗಮ ಸಂಗೀತ, ಜಾನಪದ
31 ದಿನಗಳ ಕಾಲ ನಡೆಯುವ ವೈವಿಧ್ಯಪೂರ್ಣ ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ಸಂಜೆ 7 ಗಂಟೆಗೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಕಲಾವಿದರು ಸೇರಿದಂತೆ ಹೊರರಾಜ್ಯ ಮತ್ತು ಹೊರ ಜಿಲ್ಲೆಗಳ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಈ ಬಾರಿ ಘೋರ ರಕ್ಕಸ ಮೀರಜಾ ರಾಕ್ಷಸಿ ಸಂಹಾರ ಅಥವಾ ಶ್ರೀ ಬಾಲಗಣಪತಿ ವಿಜಯ ಎಂಬ ವಿಶೇಷ ದೃಶ್ಯಾವಳಿಯನ್ನು ಸಂಯೋಜಿಸಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಶ್ರೀ ಸಿದ್ಧಿವಿನಾಯಕ ಮಹೋತ್ಸವದ ಅಂಗವಾಗಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಸದರಿ ಸಮಿತಿಯವರಿಗೆ ಒಂದೊಂದು ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದಿವಿನಾಯಕ ಸೇವಾ ಮಂಡಳಿಯ ಕಾರ್ಯದರ್ಶಿ ಜಿ.ಎಸ್. ಸಿದ್ದರಾಜು, ಸಹ ಕಾರ್ಯದರ್ಶಿ ಕಲ್ಯಾಣ್‍ಕುಮಾರ್, ಖಜಾಂಚಿ ಎಂ.ಎನ್. ಉಮಾಶಂಕರ್, ಪ್ರಚಾರ ಸಮಿತಿಯ ರೇಣುಕ ಪರಮೇಶ್, ನಿರ್ದೇಶಕರುಗಳಾದ ನಿರ್ದೇಶಕರಾದ ರಾಘವೇಂದ್ರ, ಕೆ. ನರಸಿಂಹಮೂರ್ತಿ, ಜಿ.ಸಿ.ವಿರೂಪಾಕ್ಷ, ಡಾ.ಅನುಸೂಯ ರುದ್ರಪ್ರಸಾದ್, ಇಂದ್ರಾಣಿ ಪ್ರಕಾಶ್, ಜಗಜ್ಯೋತಿ ಸಿದ್ದರಾಮಯ್ಯ, ಟಿ.ಹೆಚ್. ಮಹೇಶ್, ಪದ್ಮರಾಜು ಟಿ.ಕೆ., ಹೆಚ್.ಆರ್. ನಾಗೇಶ್, ಟಿ.ಆರ್. ನಟರಾಜು, ಆದರ್ಶ, ಸುರೇಶ್‍ಕುಮಾರ್, ಟಿ.ಎಂ. ಕುಮಾರಸ್ವಾಮಿ, ಎ.ಆರ್. ಶ್ರೀನಾಥ್, ಜಿ.ಸಿ. ಬಸವರಾಜು, ಚಿಕ್ಕಣ್ಣ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)



