ತುಮಕೂರು: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ,ಇಂದು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ನೇತೃತ್ವದಲ್ಲಿ ನಗರದ ಟೌನ್‌ಹಾಲ್‌ನ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಟೌನ್‌ಹಾಲ್ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾವಣೆಗೊಂಡಿದ್ದ ನೂರಾರು ಕಾಂಗ್ರೆಸ್ ಕಾರ್ಯಕರ್ತ ರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ,ದೇಶದಾದ್ಯAತ ಕೇಂದ್ರ ಸರಕಾರದ ವೈಫಲ್ಯ ಮತ್ತು ನೀಟ್ ಪರೀಕ್ಷೆಯಲ್ಲಿ ಪ್ರತಿಭಾವಂತರಿಗೆ ಆಗಿರುವ ಅನ್ಯಾಯವನ್ನು ಖಂಡಸಿ ಪ್ರಚಾರ ಸಮಿತಿ ನೇತೃತ್ವದಲ್ಲಿ ಎನ್.ಎಸ್.ಯುಐ,ಯುವ ಕಾಂಗ್ರೆಸ್ ಹಾಗು ಎಲ್ಲಾ ಮಂಚೂಣಿ ಘಟಕಗಳ ಸಹಯೋಗದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳ ಲಾಗಿದೆ.ನೀಟ್ ವೈಫಲ್ಯದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂಬುದು ನಮ್ಮೆಲ್ಲರ ಬೇಡಿಕೆಯಾಗಿದೆ.ಸರಕಾರ ಇದೇ ಮೊಂಡತನವನ್ನು ಪ್ರದರ್ಶಿಸಿದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಪ್ರತಿಭಟನೆಯನ್ನು ಕಾಂಗ್ರೆಸ್ ಪಕ್ಷದವತಿಯಿಂದ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ಮಾತನಾಡಿ, ದೇಶದ ಯುವಜನರ ಭವಿಷ್ಯ ನಿರ್ಧರಿಸುವ ಒಂದು ನೀಟ್ ಪರೀಕ್ಷೆ ನಡೆಸಲು ಆಗದವರು ಇನ್ನೂ ದೇಶ ನಡೆಸಲು ಸಾಧ್ಯವೇ?, ನೀಟ್ ಪರೀಕ್ಷೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗೆ ೧೨ಕ್ಕೂ ಹೆಚ್ಚು ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.ಬಡವರ ಮಕ್ಕಳ ಬದಲು ಶ್ರೀಮಂತರ ಮಕ್ಕಳು ಡಾಕ್ಟರ್‌ಗಳಾಗಬೇಕೆಂಬ ಕಾರ್ಪೋರೇಟ್ ಮನಸ್ಥಿತಿಯ ಪರಿಣಾಮ ಇದಕ್ಕೆ ಕಾರಣ.ಮರು ಪರೀಕ್ಷೆಯಿಂದ ಪ್ರತಿಭಾವಂತರಿಗೆ ಅನ್ಯಾಯವಾಗಿದೆ. ಸುಮಾರು ೨೨ ಜನ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.ಇದುವರೆಗೂ ಪ್ರಧಾನಿ ಮೋದಿಯವರು ವಿದ್ಯಾರ್ಥಿಗಳೊಂದಿಗೆ ಮಾತನಾಡಿಲ್ಲ. ಶಿಕ್ಷಣ ಮಂತ್ರಿಗಳ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದಲ್ಲಿ ಮತ್ತಷ್ಸು ಹೋರಾಟವನ್ನು ತೀವ್ರಗೊಳಿಸಲಿದ್ದೇವೆ ಎಂದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ, ಪ್ರತಿಭಾವಂತರಿಗೆ ಅವಕಾಶಗಳು ಸಿಗಬೇಕೆಂಬ ಉದ್ದೇಶದಿಂದ ಸರಕಾರ ೨೦೧೩ರಲ್ಲಿ ಜಾರಿಗೆ ತಂದ ನೀಟ್ ಪರೀಕ್ಷೆಯ ಉದ್ದೇಶ ಸಂಪೂರ್ಣ ವಿಫಲವಾಗಿದೆ.ಪ್ರಧಾನಿಗಳು ಹಾಗೂ ಅವರ ಸಂಪುಟದ ಸಹದ್ಯೋಗಿಗಳಿಗೆ ಬಡವರ ಮಕ್ಕಳು ಡಾಕ್ಟರ್ ಆಗುವುದಕ್ಕಿಂತ ಶ್ರೀಮಂತರ ಮಕ್ಕಳು ಡಾಕ್ಟರ್ ಆಗುವುದು ಮುಖ್ಯ ಹಾಗಾಗಿ ಪ್ರಶ್ನೆ ಪ್ರತಿಕೆ ಸೋರಿಕೆ ಮಾಡಿ,ಪ್ರತಿಭಾವಂತರ ಹಕ್ಕುಗಳನ್ನು ಕಸಿಯುತ್ತಿದೆ.೨೦೦೪ ರಿಂದ ಈ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಫಯಾಜ್, ಮಹೇಶ್, ಕೆಂಪಣ್ಣ,ಗುರು ಪ್ರಸಾದ್, ವಿವಿಧ ಮಂಚೂಣಿ ಘಟಕಗಳ ಮುಖಂಡರಾದ ನಿಂಗರಾಜು, ಕುಮಾರಸ್ವಾಮಿ, ಅನಿಲ್‌ಕುಮಾರ್, ಸಂಜೀವಕುಮಾರ್, ಅಂಬರೀಷ್,ಸುಜಾತ,ಶ್ರೀನಿವಾಸಕುಮಾರ್,ಚಕ್ರವರ್ತಿ ಪ್ರಕಾಶ್,ಹೆಬೂರು ಶ್ರೀನಿವಾಸಮೂರ್ತಿ,ಪಾಲಿಕೆ ಮಾಜಿ ಸದಸ್ಯರಾದ ಇನಾಯತ್,ಜಿಯಾವುಲ್ಲ್,ನಾಗಮಣಿ,ಭಾಗ್ಯಮ್ಮ,ಸೌಭಾಗ್ಯ,ವಿಜಯಲಕ್ಷಿö್ಮ,ಸಿದ್ದಲಿಂಗೇಗೌಡ, ರೇವಣ್ಣ ಸಿದ್ದಯ್ಯ, ಡಿ.ನರಸಿಂಹರಾಜು, ನಟರಾಜಶೆಟ್ಟಿ, ಮೆಹಬೂಬ್ ಪಾಷ,ಯೂತ್ ಕಾಂಗ್ರೆಸ್‌ನ ಇಲಾಹಿ ಸಿಕಂದರ್,ಫೈರೋಜ್‌ಪಾಷ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(Visited 1 times, 1 visits today)