ತುಮಕೂರು: ತುಮಕೂರು ಜಿಲ್ಲೆಯ ಕುರಿ ಮತ್ತು ಮೇಕೆ ಮಾಂಸ ಮಾರಾಟಗಾರರು ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಸರಕಾರ ಮತ್ತು ಸಂಘ ಸಂಸ್ಥೆಗಳೊAದಿಗೆ ಸಂಪರ್ಕ ಸಾಧಿಸಲು ಸಂಘವೊAದನ್ನು ಸ್ಥಾಪಿಸಿದ್ದು ಖುರೇಷಿ ಅಸೋಸಿಯೇಷನ್, ತುಮಕೂರು ಜಿಲ್ಲೆ ಇಂದಿನಿ0ದ ಕಾರ್ಯನಿರ್ವಹಿಸಲಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.
ನಗರದ ಬಿ.ಜಿ.ಪಾಳ್ಯ ವೃತ್ತ, ಸುಬ್ರಮಣ್ಯ ಸ್ವಾಮಿ ದೇವಸ್ಥಾನ ರಸ್ತೆ ಬಳಿ ಖುರೇಷಿ ಅಸೋಸಿಯೇಷನ್, ತುಮಕೂರು ಡಿಸ್ಟಿçಕ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಇದು ಕುರಿ ಮತ್ತು ಮೇಕೆ ಮಾಂಸ ಮಾರಾಟಗಾರರ ಬಹುದಿನಗಳ ಬೇಡಿಕೆಯಾಗಿತ್ತು. ಉದ್ಯಮದಲ್ಲಿ ಉಂಟಾಗುವ ಸಮಸ್ಯೆಗಳ ಚರ್ಚೆ, ಪರಿಹಾರ ಹಾಗೂ ಸಾರ್ವಜನಿಕರ ಸಂಪರ್ಕವಲ್ಲದೆ, ಭವಿಷ್ಯದಲ್ಲಿ ಉದ್ಬವಿಸಬಹುದಾದ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಖುರೇಷಿ ಅಸೋಸಿಯೇಷನ್ ಮಹತ್ವದ ಪಾತ್ರ ವಹಿಸಲಿದೆ. ಹತ್ತಾರು ವರ್ಷಗಳಿಂದ ಈ ಸಮುದಾಯ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇವುಗಳನ್ನು ಸರಕಾರ ಹಾಗೂ ಸಂಬAಧಪಟ್ಟ ಸಂಸ್ಥೆಗಳ ಮುಂದಿಡಲುಇAತಹ ಸಂಘದ ಅಗತ್ಯವಿತ್ತು. ಆದು ಇಂದು ಈಡೇರಿದೆ. ಸಂಘದ ಅಧ್ಯಕ್ಷರಾಗಿ ಅನ್ಸರ್ ಪಾಷ, ಕಾರ್ಯದರ್ಶಿಯಾಗಿ ನೂರುಲ್ಲಾ, ಜಂಟಿ ಕಾರ್ಯದರ್ಶಿಯಾಗಿ ತಬ್ರೇಶ್ ಖುರೇಷಿ ಹಾಗೂ ಹಲವರು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಉದ್ದೇಶ ಈಡೇರಲಿ ಎಂದು ಡಾ.ರಫೀಕ್ ಅಹಮದ್ ಶುಭ ಹಾರೈಸಿದರು.
ಖುರೇಷಿ ಅಸೋಸಿಯೇಷನ್, ತುಮಕೂರು ಜಿಲ್ಲೆಯ ಅಧ್ಯಕ್ಷರಾದ ಅನ್ಸರ್ ಪಾಷ ಮಾತನಾಡಿ, ನಮ್ಮ ಸಂಘದಲ್ಲಿ ಇದುವರೆಗೂ ಸುಮಾರು ೬೮ ಅಂಗಡಿಗಳ ಮಾಲೀಕರು ಇದ್ದಾರೆ. ಇಂದು ೨೮ ಜನಒಂದು ಸಂಘ ಅಸ್ಥಿತ್ವಕ್ಕೆ ಬಂದಿದೆ. ಇದರ ಮೂಲಕ ನಾವು ಅನುಭವಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉತ್ಸುಕತೆಯಲ್ಲಿದ್ದೇವೆ. ಪ್ರಮುಖವಾಗಿ ದರಗಳ ವೆತ್ಯಾಸ, ಕಸ ವಿಲೇವಾರಿ, ತೂಕ ಅಳತೆಯಲ್ಲಿ ಗೊಂದಲ, ಕುರಿ, ಮೇಕೆಗಳಿಗೆ ರೋಗ ಬಂದಾಗ ಸರಕಾರದ ನೆರವು ಸೇರಿದಂತೆ ಪರಿಹಾರ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೇವೆ.ಅಲ್ಲದೆ ಪಾಲಿಕೆ ವತಿಯಿಂದ ಇದುವರೆಗೂ ಕೇವಲ ಎರಡು ಸಾವಿರ ವಿದ್ದ ಅಂಗಡಿ ಪರವಾಗಿ ಶುಲ್ಕವನ್ನು ಏಕಾಎಕಿ ೧೧ ಸಾವಿರ ರೂಗಳಿಗೆ ಹೆಚ್ಚಿಸಲಾಗಿದೆ. ಅದನ್ನು ಕಡಿಮೆ ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಜಿಲ್ಲಾಡಳಿತ ಮತ್ತು ನಗರಪಾಲಿಕೆ ನಮ್ಮ ಮನವಿಗೆ ಸ್ಪಂದಿಸಲಿದೆ ಎಂಬ ವಿಶ್ವಾಸವಿದೆ ಎಂದರು.
ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್, ಮುಖಂಡರಾದ ಇಕ್ಬಾಲ್ ಅಹಮದ್ ಮಾತನಾಡಿದರು. ಈ ವೇಳೆ ಮುಖಂಡರಾದ ಮೆಹಬೂಬ್ ಪಾಷ, ಉಬೇದು, ಜೀಯಾ, ಶಹವಾಜ್ ಸೇರಿದಂತೆ ಖುರೇಷಿ ಅಸೋಸಿಯೇಷನ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

(Visited 1 times, 1 visits today)