ತುಮಕೂರು: ಸ್ವಾತಂತ್ರ ಎಂಬುದು ಕೇವಲ ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆಯುವುದಲ್ಲ, ಬದಲಿಗೆ ಭಯ, ಅಜ್ಞಾನ ಮತ್ತು ಭ್ರಷ್ಟಾಚಾರದಿಂದ ಮುಕ್ತವಾದ ಸಮಾಜವನ್ನು ನಿರ್ಮಿಸುವುದೇ ನಿಜವಾದ ಸ್ವಾತಂತ್ರ÷್ಯ. ಇಂದಿನ ನಮ್ಮ ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ” ಎಂದು ಭಾರತದ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಟಿ.ಎನ್. ಸತ್ಯನಾರಾಯಣ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಶನಿವಾರ ಆ. ೧೫ ರಂದು ನಡೆದ ೮೦ನೇ ಸ್ವಾತಂತ್ರ÷್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ದೇಶವನ್ನು ಮುನ್ನಡೆಸಲು ಯುವಕರಿಗೆ ಶಿಸ್ತು ಎಂಬುದು ಅತ್ಯಂತ ಮುಖ್ಯವಾದ ಅಸ್ತçವಾಗಿದೆ. ಶಿಸ್ತಿನಿಂದ ಕೂಡಿದ ಜೀವನವು ವೈಯಕ್ತಿಕ ಯಶಸ್ಸಿಗೆ ಮಾತ್ರವಲ್ಲದೆ, ಸದೃಢ ರಾಷ್ಟç ನಿರ್ಮಾಣಕ್ಕೂ ಬುನಾದಿಯಾಗುತ್ತದೆ ಎಂದರು. ಇಂದಿನ ದೇಶದ ಪ್ರಮುಖ ಸವಾಲುಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕೂಡ ಒಂದಾಗಿದ್ದು, ಇದು ದೇಶದ ಅಭಿವೃದ್ಧಿಗೆ ಮತ್ತು ಯುವಕರ ಪ್ರತಿಭೆಗೆ ತಡೆಯೊಡ್ಡುವ ದೊಡ್ಡ ಪಿಡುಗಾಗಿದೆ. ಪ್ರತಿಯೊಬ್ಬ ಯುವಕನೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಬದಲಾವಣೆಯ ಹರಿಕಾರರಾಗಬೇಕು ಎಂದು ಅವರು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವು ತಮ್ಮ ಹಕ್ಕುಗಳಿಗಾಗಿ ಮತ್ತು ಭವಿಷ್ಯದ ರಕ್ಷಣೆಗಾಗಿ ಜಾಗೃತರಾಗುತ್ತಿರುವುದನ್ನು ಉದಾಹರಿಸಿದ ಅವರು, ದೆಹಲಿಯಲ್ಲಿ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಸೋರಿಕೆ ವಿಷಯವಾಗಿ ನಡೆಸಿದ ಗಂಭೀರ ಪ್ರತಿಭಟನೆಗಳು ಯುವಕರ ಜಾಗೃತಿಯ ಪ್ರತೀಕವಾಗಿವೆ ಎಂದರು.
ಯುವಕರ ಈ ಸಾಮೂಹಿಕ ಎಚ್ಚರಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು, ತಪುö್ಪ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಹೊಸ ಕಠಿಣ ಮಸೂದೆಗಳನ್ನು ಜಾರಿಗೆ ತಂದಿರುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿಭೆಗೆ ನ್ಯಾಯ ಒದಗಿಸುವ ದಿಶೆಯಲ್ಲಿ ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತುಮಕೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿಗಳಾದ ಪ್ರೊ. ಹೆಚ್. ನಾಗಭೂಷಣ ಮಾತನಾಡಿ, ಭಾರತವು ಶಾಂತಿ ಮತ್ತು ಸಹನೆಯ ಜೊತೆಗೆ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು. ಸ್ವಾತಂತ್ರ÷್ಯ ಹೋರಾಟಗಾರರು ನಮಗೆ ಸ್ವಾತಂತ್ರ÷್ಯ ತಂದುಕೊಟ್ಟಿದ್ದಾರೆ, ಆದರೆ ‘ವಿಕಸಿತ ಭಾರತ’ ನಿರ್ಮಾಣ ಮಾಡುವುದು ಇಂದಿನ ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ ಹೆಚ್ ಎಸ್ ಸ್ವಾಗತಿಸಿದರು. ರಾಷ್ಟಿçÃಯ ಹಬ್ಬಗಳ ಆಚರಣೆಗಳ ಸಂಚಾಲಕರಾದ ಡಾ. ಎ ಎಂ ಮಂಜುನಾಥ್ ವಂದಿಸಿದರು. ಪತ್ರಿಕೋದ್ಯಮ ವಿಭಾಗದ ಅಧ್ಯಕ್ಷರಾದ ಡಾ.ಸಿಬಂತಿ ಪದ್ಮನಾಭ ಅವರು ನಿರೂಪಿಸಿದರು.
(Visited 1 times, 1 visits today)



