ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ವತಿಯಿಂದ ತುಮಕೂರು ಜಿಲ್ಲೆಯ ಸ್ಲಂ ನಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಲಂ ಕುಂದು ಕೊರತೆ ಸಭೆ ಕರೆಯಲುಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಜಿಲ್ಲೆಯಲ್ಲಿ À ಸ್ಲಂ ನಿವಾಸಿಗಳ ಸಮಸ್ಯೆಗಳನ್ನು ಕಾಲಕಾಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಇದಕ್ಕೆ ಸ್ಪಂಧಿಸಿರುವ ಜಿಲ್ಲಾಳಿತದ ಕೆಲವೊಂದು ಹಕ್ಕೋತ್ತಾಯಗಳನ್ನು ಈಡೇರಿಸಲು ಮುಂದಾಗಿದೆ. ಆದರೆ ಇತ್ತೀಚೆಗೆ ಕಳೆದ ೬ ತಿಂಗಳಿನಿAದ ಜಾತಿ ಜನಗಣತಿ ಮತ್ತು ಎಸ್‌ಐಆರ್ ಮತಪರಿಷ್ಕರಣೆಕೆಲಸಗಳಿಂದ ಅರ್ಧಕ್ಕೆ ನಿಲ್ಲಿಸಲಾಗಿದೆ.
ತುಮಕೂರು ನಗರದಲ್ಲಿ ಪ್ರಧಾನಮಂತ್ರಿ ಅವಾಸ್‌ಯೋಜನೆಯಡಿ ೧೪೫೦ ಮನೆಗಳ ಪೈಕಿ ೬೩೦ ಮನೆಗಳ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ೩ ವರ್ಷಗಳಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಗರದಲ್ಲಿ ಎರಡು ಸ್ಲಂಗಳಿಗೆ ೧೧೦ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದ್ದು ಬಾಕಿ ಉಳಿದಿರುವ ೧೨೫೦ ಕುಟುಂಬಗಳ ಹಕ್ಕುಪತ್ರಗಳನ್ನು ಹಂಚಿಕೆ ಮಾಡಿರುವುದಿಲ್ಲ ಇದಕ್ಕೆ ತಾಂತ್ರಿಕವಾಗಿ ಭೂಮಿಯನ್ನು ಕಂದಾಯ ಇಲಾಖೆಯಿಂದ ಕೊಳಗೇರಿ ಅಭಿವೃದ್ಧಿ ಮಂಡಳಿ ಹೆಸರಿಗೆ ಮಾಡಿರುವುದಿಲ್ಲ. ಇತ್ತೀಚೆಗೆ ಅಲೆಮಾರಿ ಹಂದಿಜೋಗಿ ೬೦ ಕುಟುಂಬಗಳ ಪೈಕಿ ಕೇವಲ ೧೪ ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ನೀಡಿರುತ್ತಾರೆ. ಬಾಕಿ ಉಳಿದರ ಕುಟುಂಬಗಳಿಗೆ ಜಾತಿ ಆದಾಯ ಪ್ರಮಾಣ ಪತ್ರ ನೀಡುವಲ್ಲಿ ಜಿಲ್ಲಾಡಳಿತ ಬದ್ಧತೆ ತೋರುತ್ತಿಲ್ಲ. ನಗರದ ೬ನೇ ವಾರ್ಡ್ನ ದಿಬ್ಬೂರು ದೇವರಾಜ್ ಅರಸು ಬಡಾವಣೆಯ ೧೨೦೦ ಮನೆಗಳ ತುಮಕೂರು ಮಹಾನಗರ ಪಾಲಿಕೆ ಹಸ್ತಾಂತರಕ್ಕೆ ಪ್ರಕ್ರಿಯೆಯನ್ನು ಮಾಡಿರುವುದಿಲ್ಲ. ಇಲ್ಲಿ ಸ್ವಚ್ಚತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ವಿಫಲತೆಗೊಂಡಿರುವುದು ಬಹಿರಂಗ ಬಂದಿಖಾನೆ ಮಾಡುವಲ್ಲಿ ವ್ಯವಸ್ಥೆ ಸಫಲಗೊಂಡಿದೆ. ಇಲ್ಲಿ ವಾಸಿಸುವ ಕುಟುಂಬಗಳನ್ನು ಖೈದಿ ರೀತಿಯಲ್ಲಿ ನಡೆಸಿಕೊಳ್ಳುತ್ತಿರುವುದು ವಿಪರ್ಯಾಸ. ಹೊನ್ನೇನಹಳ್ಳಿಯಲ್ಲಿ ಪಿಎಂಎವೈ ಯೋಜನೆಯಡಿ ನಿರ್ಮಾಣವಾಗುತ್ತಿರುವ ೧೯೨ ಮನೆಗಳಿಗೆ ನೈಜ ಪಲಾನುಭವಿಗಳ ಆಯ್ಕೆ ಯಾಗಿರುವುದಿಲ,್ಲ ಕೋವಿಡ್‌ನಿಂದ ಬಾಧಿತರಾದ ೩೧ ಒಂಟಿ ಮಹಿಳೆಯರನ್ನು ಪರಿಗಣಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು ಈ ಕುಟುಂಬಗಳನ್ನು ಪರಿಗಣಿಸುತ್ತಿಲ್ಲ. ಆಶ್ರಯ ಸಮಿತಿಯಲ್ಲಿ ಪಟ್ಟಿಯನ್ನು ಅಂತಿಮಗೊಳಿಸುತ್ತಿಲ್ಲ್ಲ. ಮಳೆ ಹಾನಿಗೊಳಗಾಗುವ ಕೊಳಚೆ ಪ್ರದೇಶಗಳಾದ ಎಸ್.ಎನ್ ಪಾಳ್ಯ. ಭಾರತಿ ನಗರ. ತಡೆಗೋಡೆ ನಿರ್ಮಿಸುವ ಬಗ್ಗೆ ಗಮನಕ್ಕೆ ತಂದರು ನಗರ ಪಾಲಿಕೆಯಿಂದ ಮಾಡಿರುವುದಿಲ್ಲ ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿತ್ತಿದ್ದೇವೆ. ಮನವಿ ತುರ್ತು ಸ್ಪಂದನೆ ದೊರೆಯದೆ ವಿಳಂಬವಾದರೆ ಸ್ವಾತಂತ್ರö್ಯ ದಿನಾಚರಣೆಯೆಂದು ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ ರವರಿಗೆ ಜಿಲ್ಲೆಯ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಲಾಗುವುದು ಎಂದರು
ಪ್ರತಿಭಟನಾ ಸ್ಥಳಕ್ಕೆ ದಾವಿಸಿ ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳಾದ ಡಾ.ಎನ್ ತಿಪ್ಪೇಸ್ವಾಮಿ ರವರು ಸ್ಲಂ ನಿವಾಸಿಗಳ ವಿವಿಧ ಸಮಸ್ಯೆಗಳ ಕುಂದು ಕೊರತೆ ಸಭೆಯನ್ನು ಆಗಸ್ಟ್ ೧೯ ರಂದು ಜಿಲ್ಲಾ ಮಟ್ಟದಲ್ಲಿ ಕರೆದು ಸಂಬAಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗುವುದು ಎಂದರು
ತುಮಕೂರು ತಾಲ್ಲುಕ್ ತಹಶೀಲ್ದಾರ್ ರಾಜೇಶ್ವರಿ ಮಾತನಾಡಿ ಎಸ್.ಎನ್ ಪಾಳ್ಯ ಭಾರತಿ ನಗರ ಬಿ.ಎಂ ತೋಟ ಎನ್.ಆರ್ ಕಾಲೋನಿ, ಮರಳೂರು ದಿಣ್ಣೆ ಈ ಸ್ಲಂಗಳ ಭೂಮಾಲಿಕತ್ವ ಇಂಡೀಕರಣವನ್ನು ಮಾಡಿಕೊಡಲಾಗುವುದು ಹಂದಿಜೋಗಿ ಜಾತಿ ಪ್ರಮಾಣ ಪತ್ರ ಸಂಬAಧ ಗ್ರೇಟ್ ೨ ತಹಶೀಲ್ದಾರ್ ರವರ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘದ ಜಿಲ್ಲಾ ಸಂಚಾಲಕರಾದ ಅನುಪಮಾ, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಶಾರದಮ್ಮ, ಧನಂಜಯ್ಯ,, ಮಂಜುನಾಥ್, ಅಶ್ವತ್, ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ಹನುಮಕ್ಕ, ಪೂರ್ಣಿಮಾ, ವಸಂತಮ್ಮ, ಸಂದ್ಯಾ, ಶಾಂತಕುಮಾರ್, ಇಸ್ಮಾಯಿಲ್ ನಗರದ ಚಿಕ್ಕಗಂಗಮ್ಮ, ಗೋವಿಂದ, ಎಸ್.ಎನ್ ಪಾಳ್ಯದ ಗುಲ್ನಾಜ್,ಸಲ್ಮಾ, ಫೀರ್‌ಸಾಬ್, ದಿಬ್ಬೂರಿನ ಇಮ್ತಿಯಾಜ್ ಖಾನ್, ಸಂಪಾಧನೆ ಮಠದ ಗೌರಮ್ಮ, ಗಂಗಮ್ಮ,ಮರಳೂರು ದಿಣ್ಣೆ ಶಾಖೆಯ ಅಬೀಬುನ್ನಿಸಾ, ಪರ್ಜಾನ, ಮುಬಾರಕ್,ಕೋದಿಹಳ್ಳ ಸ್ಲಂ ಶಾಖೆಯ ಮಂಜುನಾಥ್, ವೆಂಕಟೇಶ್, ಅಶ್ವಥ್ ಮುಂತಾದವರು ಪಾಲ್ಗೊಂಡಿದ್ದರು.

(Visited 1 times, 1 visits today)