ಶಿರಾ: ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ಸಂಸ್ಕಾರ ಮತ್ತು ಸಂಸ್ಕöÈತಿ ನೀಡುವುದು ಪೋಷಕರ ಕರ್ತವ್ಯವಾಗಿದೆ ಮತ್ತು ಮಕ್ಕಳ ಉತ್ತಮ ಭವಿಷ್ಯವನ್ನ ನಿರ್ಮಿಸುವುದೇ ಸ್ವಾತಂತ್ರ÷್ಯ ದೇಶದ ಅಭಿವೃದ್ಧಿಯ ಬುನಾದಿಯಾಗಿದೆ ಎಂದು ತಾಲೂಕು ಪಂಚಾಯತಿ ಮಾಜಿ ಸದಸ್ಯರು ಶ್ರೀ ಕೃಷ್ಣಪ್ಪ ಅಭಿಪ್ರಾಯಪಟ್ಟರು..
ಸ. ಹಿ. ಪ್ರಾ.ಶಾಲೆ ಕುರುಬರ ರಾಮನಹಳ್ಳಿಯಲ್ಲಿ ೮೦ನೇ ವರ್ಷದ ಸ್ವಾತಂತ್ರ÷್ಯ ದಿನಾಚರಣೆಲ್ಲಿ ಕುರಿತು ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರಶ್ನೆ ಮಾಡದೇ ಯಾವುದನ್ನು ಒಪ್ಪಿಕೊಳ್ಳಬಾರದು, ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಪ್ರಪಂಚದಾದ್ಯAತ ಸಾಧನೆಯ ಮೆಟ್ಟಿಲನ್ನೇರಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸದೆ ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ತಿಳಿಸಿದರು.
ಪಟ್ಟನಾಯಕನಹಳ್ಳಿ ಆರಕ್ಷಕ ಠಾಣೆ ಪೊಲೀಸ್ ಸಿಬ್ಬಂದಿ ನಟರಾಜ್ ಅವರು ಇಂದಿನ ನಮ್ಮ ಜೀವನ ಅಂದಿನ ಸ್ವಾತಂತ್ರಾ÷್ಯ ಹೋರಾಟಗಾರರು ಮಾಡಿದ ಹೊರಟಿದ ಪ್ರತಿಫಲವೇ ಆಗಿದೆ. ಅವರನ್ನು ಪ್ರತಿದಿನ ನೆನೆಯಬೇಕು ಮತ್ತು ಮಕ್ಕಳನ್ನ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಪೋಷಕರ ಕರ್ತವ್ಯವಾಗಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷರಾದ ಶ್ರೀ ನಿಂಗರಾಜು ದೇಶದ ಪ್ರಗತಿಗೆ ಎಲ್ಲರ ಭಾಗವಹಿಸುವಿಕೆಯೂ ಪ್ರಮುಖವಾಗಿರುತ್ತದೆ ಮತ್ತು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ಸಂಸ್ಕಾರ ನೀಡುವುದು ಮತ್ತು ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಪೋಷಕರ ನಿಲುವಾಗಿದೆ ಎಂದರು.
ಸಹಶಿಕ್ಷಕಿ ಸುನೀತಾ ಮಾತನಾಡಿನಾನು ಎನ್ನುವ ಸ್ವಾರ್ಥ ಬಿಟ್ಟು ನಾವು ಎಂಬ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಮೊದಲು ದೇಶದ ಕೆಲಸ ನಂತರ ಮನೆಯವಾಗಿರಿಸಿಕೊಳ್ಳಬೇಕು ಎಂದರು.
ಸಹಶಿಕ್ಷಕ ಗೋವಿಂದರಾಜು ಮಾತನಾಡಿ ದೇಶದ ಸ್ವಾತಂತ್ರ÷್ಯವು ಅನೇಕ ಮಂದಿ ಹೋರಾಟಗಾರ ಪರಿಶ್ರಮದ ಪ್ರತಿಫಲವಾಗಿದೆ.ಮಕ್ಕಳ ಮುಂದಿನ ಭವಿಷ್ಯದ ನಿರ್ಮಾಣದಲ್ಲಿ ಕಾಣಬಹುದಾಗಿದೆ ಎಂದರು.
ಸಹಶಿಕ್ಷಕ ಶಿವಣ್ಣ ಮಾತನಾಡಿ ನಾವು ನಮ್ಮ ತಂದೆ ತಾಯಿಯರನ್ನು ನೆನೆದಂತೆ ಸ್ವಾತಂತ್ರ÷್ಯ ಹೋರಾಟಗಾರರನ್ನು ಪ್ರತಿದಿನವೂ ನೆನೆಯಬೇಕು ಎಂದು ಸ್ವಾತಂತ್ರ÷್ಯದ ಮಹತ್ವದ ಬಗ್ಗೆ ತಿಳಿಸಿದರು.
ಶಾಲೆಯಲ್ಲಿ ಮಕ್ಕಳಿಂದ ಸಾಂಸ್ಕöÈತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಸ್ವಾತಂತ್ರ÷್ಯದ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ಉಮೇಶ್, ಎಸ್ಡಿಎಂಸಿ ಸದಸ್ಯರಾದ ಮಂಜುನಾಥ್, ನರಸಿಂಹಯ್ಯ, ಗೋವಿಂದರಾಜು, ಶ್ರೀನಿವಾಸ್ ಇನ್ನಿತರರು ಉಪಸ್ಥಿತರಿದ್ದರು.
(Visited 1 times, 1 visits today)



