ತುಮಕೂರು: ಸಮಾಜದಲ್ಲಿರುವ ಹಣ ಬಲ, ಜನಬಲ, ರಾಜಕೀಯ ಬಲವಿಲ್ಲದೆ ಸಣ್ಣ ಸಣ್ಣ ಸಮುದಾಯಗಳು ಮುಂದೆ ಬರಬೇಕೆಂದರೆ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಮುಂದುವರಿಯಲು ಇರುವ ಅವಕಾಶಗಳನ್ನು ಬಳಸಿಕೊಂಡಾಗ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ತುಮಕೂರಿನ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ (ರಿ).ನ ಕಾರ್ಯ ಮಾದರಿ ಎಂದು ಕಲಾವಿದ ಹಾಗೂ ರಾಜಕಾರಣಿ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಶ್ರೀಮಂಜುನಾಥ ಕಲ್ಯಾಣ ಮಂಟಪದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್(ರಿ), ತುಮಕೂರು ವತಿಯಿಂದ ಆಯೋಜಿಸಿದ್ದ ಪ್ರತಿಭಾಪುರಸ್ಕಾರ ಹಾಗೂ ಸಾದರ ಸಮಾನ ಮನಸ್ಕ ಐಎಎಸ್/ಐಪಿಎಸ್ ತರಬೇತಿ ವೇದಿಕೆ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾದರು ಅಲ್ಪಸಂಖ್ಯಾತರಲ್ಲಿ ಸ್ವಲ್ಪ ಸಂಖ್ಯಾತರು. ನಮ್ಮಂತಹ ತುಳಿಕೆ ಒಳಗಾದ ಸಮುದಾಯಗಳು ಮೇಲೆ ಬರಲು ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗಲಿವೆ ಎಂದರು.
ಇAದಿನ ಪೈಪೋಟಿ ಯುಗದಲ್ಲಿ ನಮ್ಮ ಮಕ್ಕಳು ನಮಗಿಂತ ಬೌದ್ಧಿಕವಾಗಿ ಮೇಲಿದ್ದಾರೆ.ತಾಂತ್ರಿಕತೆಯಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತಿದ್ದಾರೆ. ಆದರೆ ತಮ್ಮ ಸಾಧನೆಗೆ ಆಸರೆಯಾದವರನ್ನು ಕನಿಷ್ಠ ಸ್ಮರಿಸುವ ಕೆಲಸ ಆಗುತ್ತಿಸಲ್ಲ. ತಮ್ಮ ಪ್ರಗತಿಯ ಹಿಂದಿರುವ ತಂದೆ, ತಾಯಿಗಳು, ಗುರು, ಹಿರಿಯರು, ಸಮುದಾಯದ ಸಹಕಾರವನ್ನು ನೆನಪಿನಲ್ಲಿಟ್ಟುಕೊಳ್ಳುವ ಗುಣ ಬೆಳೆಸಿಕೊಳ್ಳಬೇಕಿದೆ. ಈ ಸಮಾಜದ ಏಳಿಗೆಗಾಗಿ ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮಗಾಂಧಿ ಸೇರಿದಂತೆ ಹಲವರು ಕೊಡುಗೆ ನೀಡಿದ್ದಾರೆ. ಬಸವಣ್ಣನವರ ಸಪ್ತ ಸೂತ್ರಗಳಾದ ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡೆಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇವುಗಳನ್ನು ಅಳವಡಿಸಿಕೊಂಡರೆ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ನಾನು ದೇವರನ್ನು ನಂಬುತ್ತೇನೆ.ಹಾಗೆAದ ಮಾತ್ರಕ್ಕೆ ಗುಡಿ, ಗೋಪುರಗಳನ್ನು ಸುತ್ತುವುದಿಲ್ಲ. ಬಸವಣ್ಣನವರ ಕಾಯಕವೇ ಕೈಲಾಸ ಎಂಬAತೆ ನಮ್ಮ ನಿಸ್ವಾರ್ಥ ಕಾಯಕದಲ್ಲಿ ದೇವರನ್ನು ಕಾಣುತ್ತೇನೆ. ಮೂಢನಂಬಿಕೆಗಳಿಗೆ ಎಂದಿಗೂ ಬೆಲೆ ನೀಡುವುದಿಲ್ಲ. ಪ್ರಶ್ನಿಸದೆ ಯಾವುದನ್ನು ನಂಬುವುದಿಲ್ಲ. ಮಡೆಸ್ನಾನ, ಎಡೆಸ್ನಾನದ ಹೆಸರಿನಲ್ಲಿ ನಡೆಯುವ ಆಚರಣೆಗಳಿಂದ ಪ್ರಯೋಜನವಿಲ್ಲ. ನೂರಾರು ಕೋಟಿ ರೂ ಖರ್ಚು ಮಾಡಿ ಕಟ್ಟಿದ ರಾಮ ಮಂದಿರದ ಹುಂಡಿ ಹಣ ಪೂಜಾರಿಗಳ ಪಾಲಾಗಿದೆ. ಇಂತಹ ಸನ್ನಿವೇಶಗಳಲ್ಲಿ ಸಮಾಜವನ್ನು ದಿಟ್ಟವಾಗಿ ಎದುರಿಸುವ ಧೈರ್ಯವನ್ನು ಮಕ್ಕಳು ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಾದರ ಸಮಾನ ಮನಸ್ಕ ಐಎಎಸ್/ಐಪಿಎಸ್ ತರಬೇತಿ ವೇದಿಕೆಯ ಡಾ.ಗಂಗಾಧರಯ್ಯ ಮಾತನಾಡಿ, ರಾಜಕೀಯವಾಗಿ ಶಕ್ತರಲ್ಲದೆ ನಮ್ಮ ಸಮಾಜ ಅಧಿಕಾರಿಗಳಾಗಿ ಸರಕಾರಿ ಸೇವೆಯಲ್ಲಿ ಭಾಗಿಯಾಗುವಂತೆ ಮಾಡಲು ತರಬೇತಿ ವೇದಿಕೆಯನ್ನು ಆರಂಭಿಸಿದ್ದೇವೆ. ಹತ್ತಾರು ಮಕ್ಕಳು ನಮ್ಮಲ್ಲಿ ಕಲಿಯುತ್ತಿದ್ದಾರೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಕೆಪಿಟಿಸಿಎಲ್‌ನ ಚೀಫ್ ಇಂಜಿನಿಯರ್ ಸುಧಾ ರವಿಶಂಕರ್ ಮಾತನಾಡಿ, ನೀವು ತೆಗೆಯುವ ಅಂಕಗಳು ನಿಮ್ಮ ನಿದ್ದೆಯಿಲ್ಲದ ರಾತ್ರಿಗಳಿಗೆ ಸಂದ ಗೌರವ ಎಂದು ಭಾವಿಸಿ, ಇದು ಜೀವನ ಆರಂಭ, ಇಲ್ಲಿ ಸಿಲಬಸ್‌ಗಳು, ಪ್ರಶ್ನೆ ಪತ್ರಿಕೆ ಇರುವುದಿಲ್ಲ. ನಿಮ್ಮ ಅನುಭವಗಳೇ ನಿಮ್ಮನ್ನು ಪರಿಪಕ್ವಗೊಳಿಸುತ್ತೇವೆ. ಒಳ್ಳೆಯ ಸ್ನೇಹಿತ ವಲಯವೂ ನಿಮ್ಮ ಯಶಸ್ಸಿನ ಒಂದು ಭಾಗವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್(ರಿ) ಹಾಗೂ ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಪಿ.ಮೂರ್ತಿ ಮಾತನಾಡಿ, ೧೯೮೬ರಲ್ಲಿ ಹಿರಿಯರಾದ ಲಕ್ಷಿö್ಮÃ ನರಸಿಂಹಯ್ಯ ಅವರಿಂದ ಸ್ಥಾಪನೆಯಾದ ಸ್ವಾಮಿ ವಿವೇಕಾನಂದ ಸಹಕಾರ ಸಂಘ ನಿರಂತರವಾಗಿ ಎ ವರ್ಗದ ಬ್ಯಾಂಕಾಗಿ ಗುರುತಿಸಿಕೊಂಡಿದೆ. ಸಮಾಜಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಟ್ರಸ್ಟ್ ಸ್ಥಾಪಿಸಿ, ಕಳೆದ ಎಂಟು ವರ್ಷಗಳಿಂದ ಸಮಾಜದ ಪ್ರತಿಭಾವಂತರನ್ನು ಪುರಸ್ಕರಿಸುವ ಕೆಲಸ ಮಾಡಲಾಗುತ್ತಿದೆ. ನುರಿತ ತರಬೇತುದಾರರಿಂದ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ನ ಜಂಟಿ ಕಾರ್ಯದರ್ಶಿ ಬಿ.ಹೆಚ್.ನಂಜುAಡಯ್ಯ, ಸ್ವಾಮಿ ವಿವೇಕಾನಂದ ಸಹಕಾರ ಬ್ಯಾಂಕು ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದರೆ ಅದಕ್ಕೆ ಕಾರಣರಾದವರು ನಮ್ಮ ಹಿರಿಯರಾದ ಲಕ್ಷಿö್ಮÃ ನರಸಿಂಹಯ್ಯನವರು. ಜನಾಂಗವನ್ನು ೨ಎ ಕ್ಯಾಟಗೆರಿಗೆ ಸೇರಿಸಿ, ಸಮಾಜ ಶೈಕ್ಷಣಿಕವಾಗಿ, ರಾಜಕೀಯವಾಗಿ, ಉದ್ಯೋಗದಲ್ಲಿ ಮೀಸಲಾತಿ ದೊರೆಯುವಂತೆ ಮಾಡಿದರು. ಬಟವಾಡಿ ಬಳಿ ಸಮುದಾಯಕ್ಕೆ ಜಾಗ ಖರೀದಿಸಿ, ಕಟ್ಟಡ ಕಟ್ಟಲು ಸಹಕಾರಿಯಾದರು. ಇದೇ ಕಟ್ಟಡಕ್ಕೆ ಮುಖ್ಯಮಂತ್ರಿ ಚಂದ್ರು ಅವರು ಒಂದು ಕೋಟಿ ರೂಗಳ ಧನ ಸಹಾಯ ಮಾಡಿ ಕಟ್ಟಡ ಪೂರ್ಣಗೊಳ್ಳುವಂತೆ ಮಾಡಿದರು. ಹಾಗಾಗಿ ಸಾದರ ಸಮುದಾಯದವರು ದಿ.ಲಕ್ಷಿö್ಮÃ ನರಸಿಂಹಯ್ಯ ಮತ್ತು ಮುಖ್ಯಮಂತ್ರಿ ಚಂದ್ರ ಅವರನ್ನು ಮರೆಯಲು ಸಾಧ್ಯವೇ ಇಲ್ಲ ಎಂದರು.
ಇದೇ ವೇಳೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಶೇ೯೦ಕ್ಕಿಂತಲೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಅಲ್ಲದೆ ಬೆಂಗಳೂರು ಡಿಸಿಸಿ ಬ್ಯಾಂಕ್ ನಾಮನಿರ್ದೇಶಿತ ಸದಸ್ಯ ಸೋಮಶೇಖರ್, ಕಾದಂಬರಿಕಾರ ಸಾಗರ್ ಹೆಚ್.ಪಿ, ವೈದ್ಯರಾದ ಸಾಗರ್ ಎಂ.ಕೆ, ಎಂ.ಟೆಕ್‌ನಲ್ಲಿ ಚಿನ್ನದ ಪದಕ ವಿಜೇತ ಹರ್ಷ ಎಸ್.ಆರ್, ಚಿನ್ನದ ಪದಕ ವಿಜೇತ ಸ್ಕೇಟಿಂಗ್ ಕ್ರೀಡಾಪುಟು ಸಮೃದ್ದಿ ಹರೀಶ್, ಹತ್ತನೇ ತರಗತಿಯಲ್ಲಿ ನಾಲ್ಕನೇ ರ‍್ಯಾಂಕ್ ಪಡೆದ ಚಿರಂತನ.ಆರ್. ಅವರುಗಳನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ÷್ನ ಗೌರವಾಧ್ಯಕ್ಷ ಬಿ.ಆರ್.ರಮೇಶ್, ಡಿವೈಎಸ್ಪಿ ಪ್ರವೀಣ್ ಎಂ, ಉದ್ಯಮಿ ಟಿ,ಜಿ.ಗಿರೀಶ್, ಟ್ರಸ್ಟ÷್ನ ತಾಲೂಕು ಅಧ್ಯಕ್ಷರಾದ ಅಣ್ಣೇನಹಳ್ಳಿ ಶಿವಕುಮಾರ್, ಕಾರ್ಯದರ್ಶಿ ಪಿ.ನಾಗರಾಜು ಸೇರಿದಂತೆ ಟ್ರಸ್ಟ÷್ನ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.
(Visited 1 times, 1 visits today)



